ರಾಜ್ಯದೆಲ್ಲೆಡೆ ಭಾರಿ ಚರ್ಚೆಗೆ ಗ್ರಾಸವಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅಶ್ಲೀಲ (Prajwal Revanna Case- Amitshah React) ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ
ಕೇಂದ್ರ ಸರ್ಕಾರ ಮೌನವಾಗಿದೆ ಎಂದು ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸುತ್ತಿದ್ದರು. ಆದರೆ ಇದೀಗ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ (Amit Shah) ಈ ಪ್ರಕರಣದ ಕುರಿತು ಮಾತನಾಡಿದ್ದು, ಕರ್ನಾಟಕ
ಸರ್ಕಾರ ಯಾಕೆ ಶೀಘ್ರಗತಿಯಲ್ಲಿ ತನಿಖೆ ನಡೆಸುತ್ತಿಲ್ಲ? ಎಂದು (Prajwal Revanna Case- Amitshah React)ಸಿದ್ದರಾಮಯ್ಯನವರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಪ್ರಜ್ವಲ್ ರೇವಣ್ಣ ವಿಡಿಯೋವನ್ನು ಒಪ್ಪಿಕೊಳ್ಳಲಾಗಲ್ಲ. ಮಹಿಳೆಯರ ಘನತೆಗೆ ಧಕ್ಕೆಯಾಗುವುದನ್ನು ಖಂಡಿಸುತ್ತೇನೆ. ನಾರಿಶಕ್ತಿಗೆ ಅಪಮಾನವಾಗುವುದನ್ನು ಸಹಿಸಲ್ಲ. ಕರ್ನಾಟಕ ಸರ್ಕಾರ ಯಾಕೆ ಶೀಘ್ರಗತಿಯಲ್ಲಿ
ತನಿಖೆ ನಡೆಸುತ್ತಿಲ್ಲ?. ಎಂದು ಅಮಿತ್ ಶಾ ಅವರು ಅಸ್ಸಾಂನ ಗುವಾಹಾಟಿಯಲ್ಲಿ ಹಾಸನ ಅಶ್ಲೀಲ ವಿಡಿಯೋ ಪ್ರಕರಣದ (Hassan Sex Scandal Case) ಕುರಿತಾಗಿ ರಾಜ್ಯ ಕರ್ನಾಟಕ ಸರ್ಕಾರವನ್ನುಪ್ರಶ್ನಿಸಿದ್ದಾರೆ.
ಕರ್ನಾಟಕಕ್ಕೆ (Karntaka) 2ನೇ ಹಂತದ ಚುನಾವಣೆಗಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi)ಯವರು ಆಗಮಿಸಿ 2 ದಿನಗಳ ಕಾಲ ಭರ್ಜರಿ ಮತ ಪ್ರಚಾರ ಮಾಡಿದ್ದರು. ಆದರೆ ಈ ಪ್ರಕರಣದ
ಕುರಿತು ಮಾತನಾಡಿರಲಿಲ್ಲ. ಇದೀಗ ಗೃಹ ಸಚಿವ ಅಮಿತ್ ಶಾ ಅಶ್ಲೀಲ ವಿಡಿಯೋ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ.

ಸದ್ಯ ಈ ಪ್ರಕರಣದ ಕುರಿತು ಎಸ್ಐಟಿ (SIT) ತನಿಖೆ ನಡೆಸುತ್ತಿದ್ದು, ಇನ್ನು ಪ್ರಜ್ವಲ್ ರೇವಣ್ಣ ಜಮರ್ನಿಗೆ ಹೋಗಿದ್ದಾರೆ. ಮತ್ತೊಂದೆಡೆ ಪ್ರಜ್ವಲ್ ಹಾಗೂ ತಂದೆ ರೇವಣ್ಣ ವಿರುದ್ಧ ಎಫ್ಐಆರ್ (FIR) ಕೂಡ
ದಾಖಲಾಗಿದ್ದು, ಅತ್ತ ಲೋಕಸಭಾ ಅಭ್ಯರ್ಥಿಯಾಗಿರುವ ಪ್ರಜ್ವಲ್ರನ್ನ ಮಾಜಿ ಪ್ರಧಾನಿ ದೇವೇಗೌಡರು ಜೆಡಿಎಸ್ (JDS) ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ. ಇಂದು ಉಚ್ಛಾಟನೆ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ.
ಒಟ್ಟಿನಲ್ಲಿ ರಾಜ್ಯದಲ್ಲಿ ಬೆಳಕಿಗೆ ಬಂದ ಈ ಪ್ರಕರಣ ಎಲ್ಲರನ್ನು ಅಚ್ಚರಿಗೆ ದೂಡುವಂತೆ ಮಾಡಿದೆ. ಮತ್ತೊಂದೆಡೆ ಲೋಕಸಭಾ ಸಭೆಗೆ ಬಿಜೆಪಿ (BJP) ಮತ್ತು ಜೆಡಿಎಸ್ ಪಕ್ಷ ಮೈತ್ರಿ ಮಾಡಿಕೊಂಡಿದ್ದಿದ್ದು, ಇದರ
ನಡುವೆ ಈ ಅಶ್ಲೀಲ ವಿಡಿಯೋ ಕೇಸ್ ಚುನಾವಣೆಯ ದಾರಿಯನ್ನು ಬದಲಾಯಿಸುವ ನಿರೀಕ್ಷೆ ಇದೆ.
ಇದನ್ನು ಓದಿ: ಭಾರತ ಸೂಪರ್ ಪವರ್ ಆಗುವ ಕನಸು ಕಾಣುತ್ತಿದೆ, ನಾವು ಭಿಕ್ಷೆ ಬೇಡುತ್ತಿದ್ದೇವೆ: ಪಾಕ್ ಅಸೆಂಬ್ಲಿಯಲ್ಲಿ ಭಾರೀ ಚರ್ಚೆ