Islamabad: ವಿಶ್ವದಲ್ಲಿ ಸೂಪರ್ ಪವರ್ ಆಗುವತ್ತ ಭಾರತ ಕನಸು ಕಾಣುತ್ತಿದೆ. ಜಾಗತಿಕ ಮಟ್ಟದಲ್ಲಿ ಭಾರತದ ಪ್ರಭಾವ (Pak Slams India) ವೃದ್ದಿಯಾಗುತ್ತಿದೆ. ಆದರೆ ಪಾಕಿಸ್ತಾನ (Pakistan)
ಆರ್ಥಿಕವಾಗಿ ದಿವಾಳಿಯಾಗಿ, ಬೇರೆ ದೇಶಗಳ ಎದುರು ಭಿಕ್ಷೆ ಬೇಡುತ್ತಿದೆ ಎಂದು ನೆರೆಯ ದೇಶ ಪಾಕಿಸ್ತಾನದ (Pak Slams India) ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಭಾರೀ ಚರ್ಚೆ ನಡೆದಿದೆ.
ಪಾಕಿಸ್ತಾನದ ಪ್ರಮುಖ ಬಲಪಂಥೀಯ ಇಸ್ಲಾಮಿಕ್ ನಾಯಕ ಮೌಲಾನಾ ಫಜ್ಲುರ್ ರೆಹಮಾನ್ (Maulana Fazlur Rehman) ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮಾತನಾಡಿ, ಭಾರತ ಇಂದು
ವಿಶ್ವದ ಬಲಿಷ್ಠ ದೇಶಗಳ ಸಾಲಿನಲ್ಲಿ ಸ್ಥಾನ ಪಡೆದಿದೆ. ಆರ್ಥಿಕವಾಗಿ ಭಾರತ ಶಕ್ತಿಯುತವಾಗಿದೆ. ಎರಡೂ ದೇಶಗಳಿಗೆ ಸ್ವಾತಂತ್ರ್ಯ ಸಿಕ್ಕಿದ್ದು ಒಂದೇ ದಿನ. ಆದರೆ ಇಂದು ಭಾರತ ಸೂಪರ್ ಪವರ್ ರಾಷ್ಟ್ರವಾಗುವ
ಕನಸು ಕಾಣುತ್ತಿದೆ. ಅದಕ್ಕಾಗಿ ಸಾಕಷ್ಟು ಶ್ರಮಿಸುತ್ತಿದೆ. ಆದರೆ ನಾವು ಆರ್ಥಿಕ ದಿವಾಳಿತನವನ್ನು ತಪ್ಪಿಸಲು ಬೇರೆ ದೇಶಗಳ ಎದುರು ಭಿಕ್ಷೆ ಬೇಡುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಿರ್ಧಾರಗಳನ್ನು ಬೇರೆಯವರು ತೆಗೆದುಕೊಳ್ಳುತ್ತಾರೆ, ಆದರೆ ಸಮಸ್ಯೆಗಳಿಗೆ ಮಾತ್ರ ರಾಜಕಾರಣಿಗಳೇ ಕಾರಣ ಎನ್ನುತ್ತಾರೆ. ಇನ್ನು 1947ರಲ್ಲಿ ನಾವು ಇಸ್ಲಾಂ ಹೆಸರಿನಲ್ಲಿ ಈ ದೇಶವನ್ನು ಪಡೆದುಕೊಂಡಿದ್ದೇವೆ.
ಆದರೆ ಇಂದು ಪಾಕಿಸ್ತಾನ ಜಾತ್ಯತೀತ ದೇಶವಾಗಿದೆ. 1973 ನಂತರ CIIನ ಒಂದೇ ಒಂದು ಶಿಫಾರಸನ್ನೂ ಜಾರಿಗೆ ತಂದಿಲ್ಲ. ಹೀಗಾದರೆ ಪಾಕಿಸ್ತಾನ ಇಸ್ಲಾಮಿಕ್ (Islamic) ದೇಶವಾಗುವುದು ಹೇಗೆ ಎಂದು
ಮೌಲಾನಾ ಫಜ್ಲುರ್ (Pak Slams India) ರೆಹಮಾನ್ ಪ್ರಶ್ನಿಸಿದ್ದಾರೆ.
ಇನ್ನು ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ನಡೆದ ಈ ಚರ್ಚೆಗೆ ಎಲ್ಲೆಡೆ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಬಿಸಿಬಿಸಿ ಚರ್ಚೆ ಶುರುವಾಗಿದೆ. ಪಾಕಿಸ್ತಾನದ ಅನೇಕ ನಾಯಕರು
ಈ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. ಆರ್ಥಿಕವಾಗಿ ಪಾಕಿಸ್ತಾನ ದಿವಾಳಿಯತ್ತ ಸಾಗುತ್ತಿದ್ದು, ಈಗಾಗಲೇ ವಿಶ್ವಬ್ಯಾಂಕ್ , ಐಎಂಎಫ್, ಚೀನಾ, ಸೌದಿ ಅರೇಬಿಯಾ (IMF, Saudi Arabia) ಸೇರಿದಂತೆ
ಅನೇಕ ಕಡೆಗಳಿಂದ ಸಾಲವನ್ನು ಪಡೆದುಕೊಂಡಿದ್ದು, ಸರ್ಕಾರ ತನ್ನ ಸ್ವತ್ತುಗಳನ್ನು ಅಡಮಾನವಿಟ್ಟಿದೆ.
ಇದನ್ನು ಓದಿ: ಮೋದಿ ಭಾಷಣವನ್ನು ತಿರುಚಿ ಅಪ್ಲೋಡ್: ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ದೂರು ದಾಖಲು