ಕೋಮುವಾದದ ವ್ಯೂಹದೊಳಗೆ ಒಳಗಾಗದಂತೆ ಕೆಲಸ ಮಾಡಿ : ಚಂದ್ರಬಾಬು ನಾಯ್ಡು,ಪವನ್ ಕಲ್ಯಾಣ್ ಗೆ ಪ್ರಕಾಶ್ ರೈ ಸಲಹೆ.

Hydrabad: 2024 ಲೋಕಸಭಾ ಚುನಾವಣೆಯಲ್ಲಿ (Lok Sabha Elections) ಗೆಲುವು ಸಾಧಿಸಿ ಆಂಧ್ರಪ್ರದೇಶದ ನೂತನ ಮುಖ್ಯಮಂತ್ರಿಯಾಗಿ (Chif Minister) ಸದ್ಯದಲ್ಲೇ ಪ್ರಮಾಣ ವಚನ ಸ್ವೀಕರಿಸಲಿರುವ ಚಂದ್ರಬಾಬು ನಾಯ್ಡು (Chandra Babu Naidu) ಹಾಗೂ ನಾಯ್ಡು ಅವರ ಟಿಡಿಪಿ (TDP Party) ಪಕ್ಷದೊಂದಿಗೆ ಮೈತ್ರಿ ಹೊಂದಿರುವ ಜನಸೇನಾ ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ್ (Pavan Kalyan) ಅವರಿಗೆ ನಟ ಹಾಗೂ ನಿರ್ದೇಶಕ ಪ್ರಕಾಶ್ ರೈ (Praksh Rai) ತಮ್ಮ ಹಾರೈಕೆಗಳನ್ನು ತಿಳಿಸಿ ನೀವಿಬ್ಬರೂ ಜಾತ್ಯಾತೀತ ವ್ಯಕ್ತಿಗಳು. ಆದರೆ, ನಿಮ್ಮ ಜೊತೆಗಿರುವ ನಾಯಕ ಜಾತ್ಯಾತೀತರಲ್ಲ. ಆದರೂ, ನೀವಿಬ್ಬರೂ ನಿಮ್ಮ ಜಾತ್ಯಾತೀತತೆ ಉಳಿಸಿಕೊಂಡು, ಕೋಮವಾದದ ವ್ಯೂಹದೊಳಗೆ ಒಳಗಾಗದಂತೆ ರಾಜ್ಯಭಾರ ಮಾಡುತ್ತೀರಿ ಎಂದು ನಂಬಿದ್ದೇನೆ ಎಂದು ಹೇಳಿ ಬಿಜೆಪಿಗೆ (BJP) ಹಾಗೂ ಮೋದಿ ಗೆ ಟಾಂಗ್ ನೀಡಿದ್ದಾರೆ.

ಅವರ ಗೆಲುವಿನ ಕುರಿತಾಗಿ ಒಂದು ಅದ್ಭುತವಾದ ಜನಾದೇಶದೊಂದಿಗೆ ಇಂದು ರಾಷ್ಟ್ರಮಟ್ಟದ ರಾಜಕೀಯದಲ್ಲಿ (politics) ನೀವು ಭಾಗವಾಗಲಿದ್ದೇರಿ. ರಾಜ್ಯ ರಾಜಕಾರಣಕ್ಕಿಂತ ರಾಷ್ಟ ರಾಜಕಾರಣ ಉನ್ನತ ಮಟ್ಟದ್ದು. ಈ ಹೊತ್ತಿನಲ್ಲಿ, ಆಂಧ್ರಪ್ರದೇಶಕ್ಕೆ (Andra Pradesha) ಕೇಂದ್ರದಿಂದ ಸಿಗಬೇಕಾದ ನ್ಯಾಯಯುತವಾದ ಸವಲತ್ತುಗಳನ್ನು, ಯೋಜನೆಗಳನ್ನು ಸಿಗುವಂತೆ ಮಾಡುವಲ್ಲಿ ನೀವು ತದೇಕಚಿತ್ತರಾಗಿ ಕೆಲಸ ಮಾಡುವಿರಿ ಎಂಬ ವಿಶ್ವಾಸ ನನಗೆ ಹಾಗೂ ಇಲ್ಲಿನ ಜನರಿಗಿದೆ ಕೊಟ್ಟ ಮಾತುಗಳ ಮರೆಯದಿರಿ ಎಂದು ಅವರು ಹೇಳಿದ್ದಾರೆ.

ಅಷ್ಟೆ ಅಲ್ಲ ನೀವು ಕೋಮುವಾದ (Communalism) ಹಾಗೂ ರಾಜಕೀಯ ಧ್ರುವೀಕರಣದಂಥ ಪೀಡೆಗಳ ವಿರುದ್ಧವೂ ನಿರ್ದಾಕ್ಷಿಣ್ಯವಾಗಿ ಹೋರಾಡುತ್ತೀರಿ ಎಂಬ ಭರವಸೆಯೂ ಜನರಿಗಿದೆ ಹಾಗಾಗಿಯೇ ಜನ ನಿಮ್ಮನ್ನು ಆರಿಸಿ ದ್ದಾರೆ. ನಿಮ್ಮನ್ನು ನಾನು ತುಂಬಾ ವರ್ಷಗಳಿಂದ ಬಲ್ಲವನಾದ್ದರಿಂದ, ಜನರ ಆಸೆಯನ್ನು ನೀವೆಂದೂ ನಿರಾಸೆ ಮಾಡುವುದಿಲ್ಲ ಎಂದು ನಿರೀಕ್ಷೆಯನ್ನಿಟ್ಟುಕೊಂಡಿದ್ದೇನೆ. ಎಂದು ಟ್ವೀಟ್ ಮಾಡಿದ್ದು ಜನರ ಆಸೆಯೇ ತಮ್ಮ ಆಸೆ ಎಂಬುದಾಗಿ ಪ್ರಕಾಶ್ ರೈ (Prakash Rai) ಹೇಳಿಕೊಂಡಿದ್ದಾರೆ.

Exit mobile version