ನಿಮ್ಮಿಂದ ಇಂಥ ಹೇಳಿಕೆ ನಿರೀಕ್ಷಿಸಿರಲಿಲ್ಲ ಅಕ್ಷಯ್ ಕುಮಾರ್ : ನಟ ಪ್ರಕಾಶ್ ರಾಜ್

India : 2020ರ ಗಾಲ್ವಾನ್ ಘರ್ಷಣೆಯಲ್ಲಿ(Prakash Raj Slams Akshay) ಹಲವಾರು ಭಾರತೀಯ ಸೇನೆಯ ಸೈನಿಕರು ಸಾವನ್ನಪ್ಪಿದ ಬಗ್ಗೆ ರಿಚಾ ಚಡ್ಡಾ ಮಾಡಿದ ಟ್ವೀಟ್ಗೆ ನಟ ಅಕ್ಷಯ್ ಕುಮಾರ್ ಟೀಕಿಸಿದ್ದಕ್ಕೆ, ನಟ ಪ್ರಕಾಶ್ ರಾಜ್ ಅಕ್ಷಯ ಕುಮಾರಗೆ ಪ್ರತಿಕ್ರಿಯಿಸಿದ್ದಾರೆ.

ಟ್ವಿಟರ್ನಲ್ಲಿ ಅಕ್ಷಯ್ ಅವರ ಟ್ವೀಟ್ಗೆ ಪ್ರತಿಕ್ರಿಯಿಸಿದ ಪ್ರಕಾಶ್ ರಾಜ್, “ನಿಮ್ಮಿಂದ ಇದನ್ನು ನಿರೀಕ್ಷಿಸಿರಲಿಲ್ಲ.

ರಿಚಾ ಚಡ್ಡಾ ನಮ್ಮ ದೇಶಕ್ಕೆ ನಿಮಗಿಂತ ಹೆಚ್ಚು ಪ್ರಸ್ತುತ” ಎಂದು ಬರೆದುಕೊಂಡು ರಿಚಾ ಚಡ್ಡಾ ಅವರನ್ನು ಬೆಂಬಲಿಸಿದ್ದಾರೆ.

ಇನ್ನೊಂದು ಟ್ವೀಟ್ನಲ್ಲಿ(Tweet) “ರಿಚಾ ಚಡ್ಡಾ.. ನಾವು ನಿಮ್ಮೊಂದಿಗೆ ನಿಂತಿದ್ದೇವೆ. ನೀವು ಏನು ಅರ್ಥಮಾಡಿಕೊಂಡಿದ್ದೀರಿ ಎಂಬುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ” ಎಂದು ಬರೆದುಕೊಂಡಿದ್ದಾರೆ.

https://fb.watch/h1pt2la7NX/ ವೀರ ಯೋಧರ ಹೆಸರಿನ ತಂಗುದಾಣ ಈಗ ಕುಡುಕರ ತಾಣ!

ಇದಕ್ಕೂ ಮೊದಲು ನಟ ಅಕ್ಷಯ ಕುಮಾರ(Akshay Kumar) ಅವರು, ರಿಚಾ ಚಡ್ಡಾ ಭಾರತೀಯ ಸೇನೆಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ,

“ಇದನ್ನು ನೋಡಲು ನನಗೆ ನೋವುಂಟಾಗುತ್ತದೆ. ನಮ್ಮ ಸಶಸ್ತ್ರ ಪಡೆಗಳಿಗೆ ನಾವು ಎಂದಿಗೂ ಕೃತಜ್ಞರಾಗಿರಬೇಕು.

ವೋ ಹೈ ತೋ ಆಜ್ ಹಮ್ ಹೈ (ಅವರು ಇದ್ದಾರೆ ಆದ್ದರಿಂದ ನಾವು ಅಸ್ತಿತ್ವದಲ್ಲಿದ್ದೇವೆ) ಎಂಬುದನ್ನು ಮರೆಯಬಾರದು” ಎಂದು ಟ್ವೀಟ್ ಮಾಡಿದ್ದರು. ಇನ್ನು ಇತ್ತೀಚೆಗಷ್ಟೇ,

“ಪಾಕ್ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ಹಿಂಪಡೆಯುವಲ್ಲಿ ಭಾರತೀಯ ಸೇನೆಯು ಸರ್ಕಾರದ ಆದೇಶಕ್ಕಾಗಿ ಕಾಯುತ್ತಿದೆ” ಎಂಬ ಉತ್ತರ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರ ಹೇಳಿಕೆಗೆ ರಿಚಾ ಪ್ರತಿಕ್ರಿಯಿಸಿದ್ದರು.

ಈ ಹೇಳಿಕೆಯನ್ನು ಹಂಚಿಕೊಂಡ ರಿಚಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಗಾಲ್ವಾನ್ ಹಾಯ್ ಹೇಳುತ್ತಾರೆ ಎಂದು ಬರೆದಿದ್ದಾರೆ. ಬಳಿಕ ರಿಚಾ ಟ್ವೀಟ್ ಮೂಲಕ ಕ್ಷಮೆಯಾಚಿಸುವ ಹೇಳಿಕೆ ನೀಡಿದ್ದಾರೆ.

ವಿವಾದಕ್ಕೆ ಎಳೆದಾಡುತ್ತಿರುವ 3 ಪದಗಳು ಯಾರನ್ನಾದರೂ ನೋಯಿಸಿದ್ದರೆ ಅದು ನನ್ನ ಉದ್ದೇಶವಾಗಿರಲು ಸಾಧ್ಯವಿಲ್ಲ.

ಇದನ್ನೂ ಓದಿ : https://vijayatimes.com/kantara-ott-war/

ನಾನು ಕ್ಷಮೆಯಾಚಿಸುತ್ತೇನೆ ಮತ್ತು ಉದ್ದೇಶಪೂರ್ವಕವಾಗಿ ನನ್ನ ಮಾತುಗಳು ಇದನ್ನು ಪ್ರಚೋದಿಸಿದರೆ, ಅದು ನನಗೆ ದುಃಖವಾಗುತ್ತದೆ ಎಂದು ಹೇಳುತ್ತೇನೆ ಎಂದು ಹೇಳಿದ್ದರು.

ಆದರೆ ಈ ಹೇಳಿಕೆಯನ್ನು ನಟ ಪ್ರಕಾಶ್ ರಾಜ್ ಬೆಂಬಲಿಸಿ, ಕ್ಷಮೆ ಕೋರುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

Exit mobile version