Bengaluru : ಮಧ್ಯಪ್ರದೇಶದ ಇಂದೋರ್‌ನಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ನಟಿ ದೀಪಿಕಾ ಪಡುಕೋಣೆ ಅವರ ಫೋಟೋ ಇರುವ ಪೋಸ್ಟರ್ ಸುಟ್ಟುಹಾಕಿದ ಪ್ರತಿಭಟನಾಕಾರರ ವಿರುದ್ಧ ನಟ ಮತ್ತು ರಾಜಕಾರಣಿ ಪ್ರಕಾಶ್ ರಾಜ್ (Prakash Slams Right Wing) ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ಒಂದು ವಾರದಿಂದ ಸಾಮಾಜಿಕ ಜಾಲತಾಣದಲ್ಲಿ ಹುಟ್ಟಿಕೊಂಡಿರುವ ‘ಕೇಸರಿ’ ವಿವಾದ ಇದೀಗ ತಾರಕಕ್ಕೆ ಏರಿದ್ದು, ಬಾಲಿವುಡ್ ಚಿತ್ರರಂಗದಿಂದ ಮುಂಬರುವ ಸಿನಿಮಾ ‘ಪಠಾನ್’ ಚಿತ್ರದ ‘ಬೇಷರಂ ರಂಗ್’ ಹಾಡು ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ.
ಈ ಚಿತ್ರದ ಹಾಡಿನಲ್ಲಿ ನಟಿ ದೀಪಿಕಾ ಕೇಸರಿ ಬಟ್ಟೆಯನ್ನು ಧರಿಸಿ, ಮೈಚಳಿ ಬಿಟ್ಟು ಕುಣಿದಿರುವುದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ!
ನಟಿ ದೀಪಿಕಾ ಧರಿಸಿದ ಕೇಸರಿ ಬಣ್ಣದ ವಸ್ತ್ರದ ವಿರುದ್ಧ ತೀವ್ರ ಅಸಮಾಧಾನ, ಆಕ್ರೋಶ ಹುಟ್ಟಿಕೊಂಡಿರುವುದು ಮಾತ್ರವಲ್ಲದೇ, ರಾಜಕೀಯ ತಿರುವುಗಳನ್ನು ಪಡೆದುಕೊಂಡಿದೆ.
ಈ ವಿವಾದದ ಬಗ್ಗೆ ಕೆರಳಿದ ಕೆಲವರು, ನಟಿ ದೀಪಿಕಾ ಹಾಗೂ ಶಾರೂಖ್ ಅವರನ್ನು ‘ಮತಾಂಧರು’ ಎಂದು ಕರೆದು ಅವರ ಪೋಸ್ಟರ್ ಅನ್ನು ರಸ್ತೆಯಲ್ಲಿ ಸುಟ್ಟುಹಾಕಿದ್ದಾರೆ.
ಇನ್ನು ಈ ಆಕ್ರೋಶದ ಬಗ್ಗೆ ಧ್ವನಿ ಎತ್ತಿದ ನಟ, ರಾಜಕಾರಣಿ ಪ್ರಕಾಶ್ ರಾಜ್ ಟ್ವೀಟ್ (Tweet) ಮಾಡಿದ್ದು, ಧಾರ್ಮಿಕ ವ್ಯಕ್ತಿಯೊಬ್ಬರು ಕೇಸರಿ ತೊಟ್ಟು ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿದ್ರೆ,
ಅವರ ವಿರುದ್ಧ ಯಾಕೆ ಆಕ್ರೋಶ, ಅಸಮಾಧಾನ ಕೇಳಿಬರಲ್ಲ? ಕೇವಲ ಒಂದು ಸಿನಿಮಾದವರ ವಿರುದ್ಧ ಮಾತ್ರ ಯಾಕೆ? ಎಂದು ಪ್ರಶ್ನಿಸಿದ್ದಾರೆ.
ಬೇಷರಮ್ ಮತಾಂಧರೇ… ಹಾಗಿದ್ರೆ ಕೇಸರಿ ತೊಟ್ಟ ಗಂಡಸರು ಬಲಾತ್ಕಾರ ಮಾಡಿದ್ರೂ ಪರವಾಗಿಲ್ಲ? ದ್ವೇಷದ ಭಾಷಣ ಮಾಡುವರು, ದಲ್ಲಾಳಿ ಎಂಎಲ್ ಎಗಳು,
ಕೇಸರಿ ತೊಟ್ಟ ಸ್ವಾಮೀಜಿ ಅಪ್ರಾಪ್ತರ ಮೇಲೆ ಅತ್ಯಾಚಾರ ಮಾಡ್ತಾರೆ, ಆದ್ರೆ ಸಿನಿಮಾದಲ್ಲಿ ಕೇಸರಿ ತೊಟ್ಟರೇ ಮಾತ್ರ ತಪ್ಪು? ಎಂದು ಹೇಳಿದ್ದಾರೆ.

ಬುಧವಾರ ಬಲಪಂಥೀಯ ಗುಂಪಿನ ಸದಸ್ಯರು ಇಂದೋರ್‌ನಲ್ಲಿ ‘ಪಠಾಣ್’ ಚಿತ್ರದ ವಿರುದ್ಧ ಪ್ರತಿಭಟನೆ ನಡೆಸಿ, ನಟ ಶಾರುಖ್ ಖಾನ್ ಮತ್ತು ನಟಿ ದೀಪಿಕಾ ಪಡುಕೋಣೆ ಅವರ ಪ್ರತಿಕೃತಿಗಳನ್ನು ಸುಟ್ಟುಹಾಕಿದ್ದಾರೆ.
ಪಠಾಣ್ ಚಲನಚಿತ್ರವನ್ನು ಬಿಡುಗಡೆ ಮಾಡಬಾರದು ಬದಲು ಅದನ್ನು ಬಹಿಷ್ಕಾರ (Boycott) ಮಾಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ : https://vijayatimes.com/bsy-epic-reply/
ಈ ವಿವಾದದ ಬಗ್ಗೆ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಮಾತನಾಡಿ, ಆಗಾಗ್ಗೆ ಚಲನಚಿತ್ರಗಳು, ಟಿವಿ ಮತ್ತು ವೆಬ್ ಧಾರಾವಾಹಿಗಳು ಮತ್ತು ಜಾಹೀರಾತುಗಳನ್ನು ಗುರಿಯಾಗಿಟ್ಟುಕೊಂಡು ಹಿಂದೂ ಧರ್ಮವನ್ನು ಅವಮಾನಿಸಲಾಗುತ್ತಿದೆ.
‘ಕೊಳಕು ಮನಸ್ಥಿತಿ’ಯೊಂದಿಗೆ ಚಿತ್ರೀಕರಿಸಿದ ಆ ದೃಶ್ಯಗಳನ್ನು ಸರಿಪಡಿಸುವುದು ಒಳಿತು ಎಂದು ಚಿತ್ರದ ನಿರ್ಮಾಪಕರಿಗೆ ಒತ್ತಾಯಿಸಿದ್ದಾರೆ.
https://twitter.com/prakashraaj/status/1603266838288564225?s=20&t=cY3crC1i9L9GVxq_0nAQZA
ಇನ್ನು ಭಾರತೀಯ ಜನತಾ ಪಕ್ಷದ ಮಹಾರಾಷ್ಟ್ರದ ಶಾಸಕ ರಾಮ್ ಕದಮ್, ಈ ಹಾಡಿನಿಂದ ಬಹಳ ನೋವಾಗಿದೆ. ಈ ಹಾಡಿನಿಂದ ಮನನೊಂದಿರುವ ‘ಕೋಟ್ಯಂತರ ಜನರಿಗೆ’ ಚಿತ್ರದ ನಿರ್ಮಾಪಕರು ಸೂಕ್ತ ವಿವರಣೆ ನೀಡಬೇಕು ಎಂದು ಒತ್ತಾಯಿಸಿದರು.
ಮತ್ತೊಂದು ವೇದಿಕೆಯಲ್ಲಿ ಮಾತನಾಡಿದ ಶಾಸಕ ಮಿಶ್ರಾ ಮತ್ತು ರಾಮ್ ಕದಮ್ ಇಬ್ಬರೂ ಕೂಡ ನಟಿ ದೀಪಿಕಾ ಪಡುಕೋಣೆ ವಿರುದ್ಧ ವಾಗ್ದಾಳಿ ನಡೆಸಿದರು.
https://fb.watch/hrNNhIGXmH/ ಬ್ಯಾಂಕ್ ಲಾಕರ್ ಚಿನ್ನಮಾಯ! Bank locker fraud!
ಸದ್ಯ ವಿವಾದಗಳ ಮಧ್ಯೆ ಸಿಲುಕಿಕೊಂಡಿರುವ ಪಠಾಣ್ ಚಿತ್ರದ ಬೇಷರಂ ಹಾಡು, ನಟಿ ದೀಪಿಕಾ ಪಡುಕೋಣೆ, ಚಿತ್ರದ ನಿರ್ಮಾಪಕರಿಗೆ ಭಾರಿ ಗೊಂದಲಗಳು ಎದುರಾಗಿದೆ.