ಹಳೇ ಹುಬ್ಬಳ್ಳಿ ಘಟನೆ, ಇದೊಂದು ಪೂರ್ವನಿಯೋಜಿತ ಕೃತ್ಯ : ಪ್ರಹ್ಲಾದ್ ಜೋಶಿ!

pralhad joshi

ಭಾನುವಾರ ಹಳೇ ಹುಬ್ಬಳ್ಳಿಯಲ್ಲಿ(Hubbali) ನಡೆದ ಹಿಂಸಾಚಾರ ರಾಜ್ಯದ(State) ಪ್ರಮುಖ ಸುದ್ದಿಯಾಗಿ ಪರಿವರ್ತನೆಗೊಂಡಿತು. ಹೌದು, ಹಳೇ ಹುಬ್ಬಳ್ಳಿಯಲ್ಲಿ ಹಿಂಸಾಚಾರದ ಗಲಭೆ(Fights) ಸಂಭವಿಸಲು ಕೇವಲ ಒಂದು ವ್ಯಾಟ್ಸಾಪ್(Whats App) ಸ್ಟೇಟಸ್ ಎಂಬುದು ಕೊಂಚ ಅಶ್ಚರ್ಯಕರ ಸಂಗತಿಯಾದರೂ ಅದೇ ನಿಜ!

ವಾಟ್ಸಾಪ್ ಸ್ಟೇಟಸ್ ನಿಂದ ಗಲಾಟೆಯಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಈಗಾಗಲೇ 100ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ನಗರದ ಅಂಗಡಿಗಳು ಸೇರಿದಂತೆ ಪೊಲೀಸ್ ವಾಹನಗಳನ್ನು ಧ್ವಂಸ ಮಾಡಲಾಗಿದೆ. ಏಕಾಏಕಿ ರಾತ್ರಿ ವೇಳೆ ಹುಬ್ಬಳಿ ನಗರದಲ್ಲಿ ಇಂಥ ದೊಡ್ಡ ಗಲಭೆ ಸೃಷ್ಟಿಯಾಗಿದ್ದು, ರಾಜ್ಯದಲ್ಲಿ ಸಂಚಲನವನ್ನು ಸೃಷ್ಟಿಸಿದೆ.

ಗಲಭೆ ಕುರಿತು ಮಾತನಾಡಿದ ಪ್ರಹ್ಲಾದ್ ಜೋಶಿ(Prahalad Joshi), ನಿನ್ನೆ ಮಧ್ಯರಾತ್ರಿ ಹಳೇ ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಖಂಡನೀಯ. ಈ ರೀತಿ ಕಾನೂನನ್ನು ಕೈಗೆತ್ತಿಕೊಂಡು ದೇವಸ್ಥಾನಗಳ ಮತ್ತು ಕಾನೂನು ಪಾಲನೆಗೆ ಇರುವ ಪೋಲಿಸ್ ಠಾಣೆಗಳ ಮೇಲೆ, ಪೋಲಿಸರ ಮೇಲೆ ಮತ್ತು ಪೋಲಿಸ್ ವಾಹನಗಳ ಮೇಲೆ ಪ್ರತಿಭಟನೆ ಸ್ವರೂಪದಲ್ಲಿ ಹಿಂಸಾತ್ಮಕ ದಾಳಿ ಮಾಡಿರುವುದು ಅಕ್ಷಮ್ಯ ಅಪರಾಧ!

ಈ ಗಲಭೆಯ ತನಿಖೆ ಮಾಡಿ ಸಮಾಜದಲ್ಲಿ ಅಶಾಂತಿಯನ್ನುಂಟು ಮಾಡಿದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇನೆ ಇದೊಂದು ಪೂರ್ವನಿಯೋಜಿತ ಕೃತ್ಯ ಎಂಬುದರ ಬಗ್ಗೆಯೂ ತನಿಖೆಯನ್ನು ಮಾಡಿ ಈ ರೀತಿ ಘಟನೆ ಮರುಕಳಿಸದಂತೆ ಜಾಗೃತಿ ವಹಿಸಬೇಕು ಮತ್ತು ಪ್ರತಿಯೊಬ್ಬರು ನಗರದಲ್ಲಿ ಶಾಂತಿ, ಸಾಮರಸ್ಯವನ್ನು ಕಾಪಾಡಬೇಕೆಂದು ವಿನಂತಿಸುತ್ತೇನೆ” ಎಂದು ಬರೆದು ಟ್ವೀಟ್ ಮಾಡಿದ್ದಾರೆ.

Exit mobile version