ಬಿಜೆಪಿ ಸಂಪ್ರದಾಯವನ್ನು ಡಿಕೆಶಿ ಕಲಿಯುವುದು ಒಳ್ಳೆಯದು : ಪ್ರಮೋದ್ ಮಧ್ವರಾಜ್ ವ್ಯಂಗ್ಯ!

dks

ಕಾಂಗ್ರೆಸ್‍ಗೆ(Congress) `ಕೈ’ ಕೊಟ್ಟು ಕಮಲ ಹಿಡಿದಿರುವ ಪ್ರಮೋದ್ ಮಧ್ವರಾಜ್(Pramod Madhvaraj) ಅವರಿಗೆ ಬಿಜೆಪಿಯಲ್ಲಿ(BJP) ವೇದಿಕೆ ಸಿಗುವುದಿಲ್ಲ.

ಕಾಂಗ್ರೆಸ್‍ನಲ್ಲಿದ್ದಾಗ ವೇದಿಕೆ ಮೇಲೆ ನನ್ನ ಪಕ್ಕದಲ್ಲಿ ಕುಳಿತುಕೊಳ್ಳುತ್ತಿದ್ದ ಪ್ರಮೋದ್ ಮಧ್ವರಾಜ್‍ಗೆ ಬಿಜೆಪಿಯಲ್ಲಿ ವೇದಿಕೆ ಮೇಲೆ ಜಾಗವಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ(Congress President) ಡಿ.ಕೆ.ಶಿವಕುಮಾರ್(DK Shivkumar) ವ್ಯಂಗ್ಯವಾಡಿದ್ದರು. ಇದೀಗ ಡಿಕೆಶಿ ಹೇಳಿಕೆಗೆ ಪ್ರಮೋದ್ ಮಧ್ವರಾಜ್ ತಿರುಗೇಟು ನೀಡಿದ್ದಾರೆ.

ಉಡುಪಿಯಲ್ಲಿ(Udupi) ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಶಿಸ್ತಿನ ಪಕ್ಷ. ಇಲ್ಲಿ ಶಾಸಕರು, ಸಂಸದರು, ಮಂತ್ರಿಗಳು ಎಲ್ಲರೂ ಕೆಳಗೆ ಕುಳಿತುಕೊಳ್ಳುತ್ತಾರೆ. ಬಿಜೆಪಿಯ ಈ ಸಂಪ್ರದಾಯವನ್ನು ಡಿ.ಕೆ.ಶಿವಕುಮಾರ್ ಅವರು ಕಲಿತುಕೊಳ್ಳುವುದು ಒಳ್ಳೆಯದು. ಕಾಂಗ್ರೆಸ್‍ನಲ್ಲಿ ವೇದಿಕೆ ಮೇಲೆ ಜನಜಂಗುಳಿ ಇರುತ್ತದೆ. ಎಲ್ಲರೂ ವೇದಿಕೆ ಹತ್ತುವವರೇ ಇರುತ್ತಾರೆ. ವೇದಿಕೆಗಾಗಿಯೇ ಹೋರಾಡುತ್ತಾರೆ. ಈ ಪರಿಸ್ಥಿತಿ ಬಿಜೆಪಿಯಲ್ಲಿ ಇಲ್ಲ ಎಂದು ಡಿ.ಕೆ.ಶಿವಕುಮಾರ್‍ಗೆ ತಿರುಗೇಟು ನೀಡಿದ್ದಾರೆ.

ಇನ್ನು ನನ್ನದು ವೇದಿಕೆ ಹುಡುಕಿಕೊಂಡು ಹೋಗುವ ಜಾಯಮಾನವಲ್ಲ. ನಾನು ಬಿಜೆಪಿಗೆ ಸಾಮಾನ್ಯ ಕಾರ್ಯಕರ್ತನಾಗಿ ಸೇರಿದ್ದೇನೆ. ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಸಾಮಾನ್ಯ ಕಾರ್ಯಕರ್ತನಾಗಿ ಕೆಳಗೆ ಕುಳಿತುಕೊಳ್ಳುತ್ತೇನೆ. ಇದರಲ್ಲಿ ಯಾವುದೇ ಮುಜುಗರ, ಬೇಸರ ನನಗಿಲ್ಲ. ನಾನು ಸಾಕಷ್ಟು ಯೋಚನೆ ಮಾಡಿಯೇ ಬಿಜೆಪಿ ಸೇರಿದ್ದೇನೆ. ಬಿಜೆಪಿಯಲ್ಲಿದ್ದುಕೊಂಡು ಸಮಾಜಮುಖಿ ಕೆಲಸಗಳನ್ನು ಮುಂದುವರೆಸುತ್ತೇನೆ. ನಾನು ಬಿಜೆಪಿ ಸೇರಿರುವುದಕ್ಕೆ ಪಶ್ಚಾತ್ತಾಪ ಪಡುವ ಪ್ರಮೇಯವೇ ಬರುವುದಿಲ್ಲ.

ಆದರೆ ಕಾಂಗ್ರೆಸ್ ಪಕ್ಷ ನನ್ನನ್ನು ಕಳೆದುಕೊಂಡು ಉಡುಪಿ ಜಿಲ್ಲೆಯಲ್ಲಿ ಪಶ್ಚಾತ್ತಾಪ ಪಡುವ ದಿನಗಳು ದೂರವಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನನ್ನ ನೆನಪು ಕಾಂಗ್ರೆಸ್‍ಗೆ ಕಾಡಲಿದೆ ಎಂದು ತಿರುಗೇಟು ನೀಡಿದರು. ಇನ್ನು ಉಡುಪಿ ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ನಾಯಕರಾಗಿದ್ದ ಪ್ರಮೋದ್ ಮಧ್ವರಾಜ್ ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು.

Exit mobile version