ಬೆಂಗಳೂರು : ಕರ್ನಾಟಕದಾದ್ಯಂತ ವೀರ್ ಸಾವರ್ಕರ್(Veera Savarkar) ಅವರ ಪೋಸ್ಟರ್ಗಳನ್ನು ಹಾಕಲು ಶ್ರೀರಾಮ ಸೇನೆ ನಿರ್ಧರಿಸಿದ್ದು, ವೀರ್ ಸಾವರ್ಕರ್ ಅವರ ಪೋಸ್ಟರ್ಗಳನ್ನು ಮುಟ್ಟಿದರೆ ನಿಮ್ಮ ಕೈಗಳನ್ನು ಕತ್ತರಿಸುತ್ತೇವೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್(Pramod Muthalik) ಎಚ್ಚರಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ವೀರ್ ಸಾವರ್ಕರ್ ಅವರ ಪೋಸ್ಟರ್ ಅನ್ನು ನೀವು ಮುಟ್ಟಿದರೆ ನಾವು ನಿಮ್ಮ ಕೈಗಳನ್ನು ಕತ್ತರಿಸಿ ಎಸೆಯುತ್ತೇವೆ. ಇದು ಒಂದು ಎಚ್ಚರಿಕೆ. ಇನ್ನು ಸಾವರ್ಕರ್ ಅವರು ಮುಸ್ಲಿಮರ ವಿರುದ್ಧದ ವ್ಯಕ್ತಿಯಲ್ಲ, ಅವರು ಬ್ರಿಟಿಷರ ವಿರುದ್ಧ ಇದ್ದವರು. ಸ್ವಾತಂತ್ರ್ಯಕ್ಕಾಗಿ ತಮ್ಮ ಇಡೀ ಬದುಕನ್ನೇ ಮುಡಿಪಾಗಿಟ್ಟವರು.
ಇದನ್ನೂ ಓದಿ : https://vijayatimes.com/karnataka-highcourt-over-azaan-on-loudspeakers/
ವೀರ್ ಸಾವರ್ಕರ್ ಈ ದೇಶದ ವೀರಪುತ್ರ. ಭಾರತ ಮಾತೆಯ ವೀರಪುತ್ರನಿಗೆ ನೀವು ಅವಮಾನ ಮಾಡಿದರೆ, ನಾವು ಸುಮ್ಮನಿರುವುದಿಲ್ಲ. ನಾವು ಹಾಕಿರುವ ಸಾವರ್ಕರ್ ಅವರ ಚಿತ್ರ ಅಥವಾ ಬ್ಯಾನರ್ ಅನ್ನು ಯಾವುದೇ ಮುಸ್ಲಿಂ ಅಥವಾ ಕಾಂಗ್ರೆಸ್ ಕಾರ್ಯಕರ್ತರು(Congress Workers) ಮುಟ್ಟಿದರೆ ನಾವು ಅವರ ಕೈಗಳನ್ನು ಕತ್ತರಿಸುತ್ತೇವೆ ಎಂದಿದ್ದಾರೆ.

ಗಣೇಶೋತ್ಸವದ ವೇಳೆ ಸಾವರ್ಕರ್ ಉತ್ಸವದ ಮೂಲಕ ಸಾವರ್ಕರ್ ಅವರ ಕೊಡುಗೆಗಳನ್ನು ರಾಜ್ಯದ ಮನೆಮನೆಗೂ ತಲುಪಿಸುತ್ತೇವೆ. ಆದರೆ ಕೆಲವು ಕಿಡಿಗೇಡಿಗಳು ಇದನ್ನು ವಿರೋಧಿಸುತ್ತಿದ್ದಾರೆ. ಆದರೆ ನಾವು ಅದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ನಾವು ನಮ್ಮ ಕೆಲಸವನ್ನು ಮಾಡುತ್ತೇವೆ. ಇದಕ್ಕೆ ಧಕ್ಕೆ ತರುವ ಕಿಡಿಗೇಡಿಗಳಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನು ಗಣೇಶೋತ್ಸವದ ವೇಳೆ ರಾಜ್ಯಾದ್ಯಂತ ಕನಿಷ್ಠ 15,000 ಸ್ಥಳಗಳಲ್ಲಿ ವೀರ್ ಸಾವರ್ಕರ್ ಮತ್ತು ಬಾಲಗಂಗಾಧರ ತಿಲಕ್ ಅವರ ಫೋಟೋಗಳನ್ನು ಹಾಕಲು ಶ್ರೀರಾಮ್‌ಸೇನೆ ಮುಂದಾಗಿದೆ. ಈ ಇಬ್ಬರು ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಲು ಈ ಆಂದೋಲನವನ್ನು ಮಾಡಲು ನಾವು ಬಯಸುತ್ತೇವೆ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.