ಚೈತ್ರಾ ವಂಚನೆ ಕೇಸ್​ನಲ್ಲಿ ಪರಪ್ಪನ ಅಗ್ರಹಾರ ಸೇರಿದ್ದ ಹಾಲಶ್ರೀ ಬಿಡುಗಡೆ:​ ಪ್ರಮೋದ್ ಮುತಾಲಿಕ್ ಸ್ವಾಗತ

Anekal: ಅಭಿನವ ಹಾಲಶ್ರೀಯನ್ನು (Pramod Muthalik welcome Halashree) ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಂಎಲ್​ಎ ಟಿಕೆಟ್ ಕೊಡಿಸುವುದಾಗಿ ಉದ್ಯಮಿಗೆ 5 ಕೋಟಿ ವಂಚನೆ ಮಾಡಿದ್ದ

ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿದ್ದರು. ನ್ಯಾಯಮೂರ್ತಿ ವಿಶ್ವಜಿತ್‌ ಶೆಟ್ಟಿ ಅವರಿದ್ದ ನ್ಯಾಯಪೀಠ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ಈ ಹಿನ್ನೆಲೆ ಇಂದು ಹಾಲಶ್ರೀ ಅವರು ಜೈಲಿನಿಂದ

ಹೊರ ಬಂದಿದ್ದು ಪ್ರಮೋದ್ ಮುತಾಲಿಕ್ (Pramod Muthalik) ಅವರು ಕೇಸರಿ ಶಾಲು ಹೊದಿಸಿ ಸ್ವಾಗತಿಸಿದರು.

ಉದ್ಯಮಿಯೊಬ್ಬರಿಗೆ ಚೈತ್ರಾ (Chitra) ಗ್ಯಾಂಗ್​ನಿಂದ 5 ಕೋಟಿ ವಂಚನೆ ಕೇಸ್ ಸಂಬಂಧ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಅಭಿನವ ಹಾಲಶ್ರೀ ಬಿಡುಗಡೆಯಾಗಿದ್ದಾರೆ. ಹೈಕೋರ್ಟ್​ನಿಂದ

ಜಾಮೀನು (Pramod Muthalik welcome Halashree) ಮಂಜೂರು ಹಿನ್ನೆಲೆ ವಿಜಯನಗರ ಜಿಲ್ಲೆ ಹಿರೇಹಡಗಲಿ ಹಾಲಸ್ವಾಮಿ ಮಠದ ಹಾಲಶ್ರೀ ಜೈಲಿನಿಂದ ಹೊರ ಬಂದಿದ್ದಾರೆ.

ಈ ಹಿನ್ನೆಲೆ ಇಂದು ಹಾಲಶ್ರೀ ಅವರು ಜೈಲಿನಿಂದ (Jail) ಹೊರ ಬಂದಿದ್ದು ಪ್ರಮೋದ್ ಮುತಾಲಿಕ್ ಅವರು ಕೇಸರಿ ಶಾಲು ಹೊದಿಸಿ ಸ್ವಾಗತಿಸಿದರು. ಜೈಲಿನಿಂದ ಹೊರ ಬರುತ್ತಿದ್ದಂತೆ ಮಾಧ್ಯಮಗಳಿಗೆ

ಪ್ರತಿಕ್ರಿಯೆ ನೀಡಿದ ಹಾಲಶ್ರೀ, ಪ್ರತ್ಯಕ್ಷವಾಗಿ ಕಂಡರು ಪ್ರಮಾಣಿಸಿ ನೋಡಬೇಕು. ಅದನ್ನು ಪ್ರಕರಣದ ತನಿಖೆ ವೇಳೆ ಪರಿಗಣಿಸಬೇಕು.

ಮುಂದೊಂದು ದಿನ ಈ ಪ್ರಕರಣದ ಬಗ್ಗೆ ಮಾತನಾಡುತ್ತೇನೆ. ನಮ್ಮನ್ನ ನಂಬಿ ಅರಾಧಿಸುವ ಸಮಾಜಕ್ಕೆ ನಮ್ಮ ಮೇಲೆ ನಂಬಿಕೆಯಿಟ್ಟಿರುವ ಭಕ್ತ ಸಮೂಹದ ಆಶಯಕ್ಕೆ ಯಾವುದೇ ಧಕ್ಕೆ ಬರದಂತೆ ಬದುಕು

ಕಟ್ಟಿಕೊಂಡು ಬಂದಿದ್ದೆನೆ. ಮುಂದೆಯೂ ಅದೇ ರೀತಿ ಬದುಕು ಸಾಗಿಸುತ್ತೇನೆ ಎಂದರು.

ಇದನ್ನು ಓದಿ: ಸಿಬಿಎಸ್‌ಇ ಇಂದ 10th, 12th ಪರೀಕ್ಷೆ ವೇಳಾಪಟ್ಟಿ, ಶೀಘ್ರದಲ್ಲೇ ಪ್ರಕಟಣೆ: ಕೇಂದ್ರ ಪ್ರೌಢಶಿಕ್ಷಣ ಮಂಡಳಿ

Exit mobile version