ಬೆಂಗಳೂರು, ಏ. 23: ಕೊರೊನಾ ದೃಢಪಟ್ಟರೆ ಆತಂಕಕ್ಕೊಳಗಾಗುವುದು ಬೇಡ. ಶೇ.90ರಷ್ಟು ಸೋಂಕಿತರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಅಗತ್ಯವಿಲ್ಲ. ಸೋಂಕಿತರು ತಮ್ಮ ಮನೆಯಲ್ಲೇ ಚಿಕಿತ್ಸೆ ಪಡೆಯಬಹುದು. ರೆಮ್‌ಡೆಸಿವಿ ಅಗತ್ಯದಷ್ಟು ಸಪ್ಲೈ ಇದೆ. ಬಯೋಕಾನ್ ಅಧ್ಯಕ್ಷ ಮುಜುಂದಾರ್ ಷಾ ಅವರೊಂದಿಗೂ ಕೂಡ ಮಾತನಾಡಿದ್ದೇನೆ. ಈ ತಿಂಗಳಲ್ಲಿ ವಯಲ್ಸ್ ಕೊಡ್ತೀನೆ ಎಂದು ಬರವಸೆ ನೀಡಿದ್ದಾರೆ. ಜನರು ಆತಂಕ, ಭಯಪಡುವ ಆವಶ್ಯಕತೆ ಇಲ್ಲ ಎಂದು ಡಾ ಕೆ.ಸುಧಾಕರ್ ತಿಳಿಸಿದ್ದಾರೆ.
ಯಾರಿಗೋ ಒಬ್ಬ ವ್ಯಕ್ತಿಗೆ ಆಕ್ಸಿಜನ್ ಕಡಿಮೆ ಅಗ್ತಿದೆ. ಯುಕೆಯಲ್ಲಿ ಟೆಲಿ ಕಾಲರ್ ಮೂಲಕ ಔಷಧಿ ಪಡೆಯುತ್ತಿದ್ದಾರೆ. ಯಾರಿಗೆ ನಿಜವಾಗಿಯೂ ಅವಶ್ಯಕತೆ ಇದೆ ಅವ್ರು ಮಾತ್ರ ಆಸ್ಪತ್ರೆ ತೆರಳಿ, ದಯವಿಟ್ಟು ನಾನು ಮನವಿ ಮಾಡುತ್ತೇನೆ. ಕೆಲವು ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದ್ದೇವೆ. ಬೆಂಗಳೂರಿನಲ್ಲಿ ಆಕ್ಸಿಜನ್, ವೆಂಟಿಲೇಟರ್ ಬೆಡ್ ಬೇಕಾಗಿದೆ. ವಿಕ್ಟೋರಿಯಾ ಆಸ್ಪತ್ರೆಯ ಹೊಸ ಕಟ್ಟಡದಲ್ಲಿ 500 ಬೆಡ್, 2500 ಬೆಡ್‌ಗಳಿರುವ ಮೇಕ್ ಶಿಫ್ಟ್ ಆಸ್ಪತ್ರೆಯಲ್ಲಿ ಐಸಿಯು ಬೆಡ್ ಮಾಡುತ್ತೇವೆ. 800 ರಿಂದ 1000 ವೆಂಟಿಲೇಟರ್ ವ್ಯವಸ್ಥೆಯನ್ನು ಅತಿಶೀಘ್ರದಲ್ಲಿ ಮಾಡುತ್ತೇವೆ.
ಇಂತಹ ಸಾಂಕ್ರಾಮಿಕ ರೋಗ ಬಂದಾಗ ತೊಂದರೆ ಆಗೋದು ಸಹಜ. ಅಮೇರಿಕಾದಂತಹ ಬಹುದೊಡ್ಡ ದೇಶದಲ್ಲೇ ಆರ್ಥಿಕತೆ ಕುಸಿದಿದೆ. ಅದನ್ನು ಹೋಲಿಸಿದ್ರೆ ನಮ್ಮಲ್ಲಿ ಪರಿಸ್ಥಿತಿ ಬೇರೆಯೇ ಇದೆ. ದಿನನಿತ್ಯ ಪ್ರಾಣಾಯಾಮ ಮಾಡಿ, ಇದು ಶ್ವಾಸಕೋಶಕ್ಕೆ ಉತ್ತಮ. ರೋಗನಿರೋಧಕ ಶಕ್ತಿ ಹೆಚ್ಚಾದಾಗ CRIC ಯಾವ ರೋಗ ಹತ್ತಿರ ಬರುವುದಿಲ್ಲ. ವೀಕೆಂಡ್ ಕರ್ಪ್ಯೂಗಳನ್ನು ತಪ್ಪದೇ ಪಾಲಿಸಬೇಕು. ನೈಟ್ ಕರ್ಪ್ಯೂ ಬಗ್ಗೆ ಕೆಲವರು ಟೀಕೆ ಮಾಡಿದ್ದಾರೆ. ಬೇರೆ ದೇಶಗಳಲ್ಲಿ ಎರಡನೇ ಅಲೆ, ಮೂರನೇ ಅಲೆ, ನಾಲ್ಕನೇ ಅಲೆ ಬಂದಿದೆ. ಎಲ್ಲ ರಾಜ್ಯಗಳಲ್ಲೂ ಈ ರೂಪಾಂತರಗೊಂಡಿರುವ ವೈರಾಣು ಇದೆ. ವೈದ್ಯಕೀಯ ಜಗತ್ತಿಗೆ ಸವಾಲು ಆಗಿರೋ ವೈರಣು ಇದು. ಇಡೀ ದೇಶದಲ್ಲಿಯೇ ಆರೋಗ್ಯ ತುರ್ತು ಪರಿಸ್ಥಿತಿ ಇದೆ. ಇದು ಬರೀ ನಮ್ಮ ರಾಜ್ಯದಲ್ಲಿ ಮಾತ್ರಾನಾ? ಯಾವುದೇ ಸಂದರ್ಭದಲ್ಲಿ ಸರ್ಕಾರ ಹಿಂದೇಟು ಹಾಕುವುದಿಲ್ಲ ಜನರನ್ನು ಕೈ ಬಿಡುವುದಿಲ್ಲ ಎಂದು ಸುಧಾಕರ್ ತಿಳಿಸಿದ್ದಾರೆ.
ಜನರು ಪ್ರತಿದಿನ ಬೆಳಗ್ಗೆ 30 ನಿಮಿಷ ಲಘು ವ್ಯಾಯಾಮ ಮಾಡಬೇಕು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸಲಹೆ ನೀಡಿದ್ದಾರೆ. ಮುಂಜಾನೆ ಮತ್ತೆ 5-6 ಗಂಟೆಗೆ ಒಳ್ಳೆ ಗಾಳಿ ಇರುವಲ್ಲಿ ಕುಳಿತು ಪ್ರಾಣಾಯಾಮ ಮಾಡಿ. ಇದರಿಂದ ಶ್ವಾಸಕೋಶದ ಉಸಿರಾಡುವ ಶಕ್ತಿ ಬಲವಾಗುತ್ತೆ. ಬೇರೆಯವರಿಗೆ ಆಕ್ಸಿಜನ್ ಸಿಗುತ್ತಿಲ್ಲವೆಂಬ ಸುದ್ದಿ ನೋಡಿ ಜನರು ಆತಂಕಕ್ಕೆ ಒಳಗಾಗುತ್ತಿದ್ದಾರೆ. ಕೊವಿಡ್ ಪಾಸಿಟಿವ್ ಬಂದ ತಕ್ಷಣ ಆಕ್ಸಿಜನ್ ಕೇಳ್ತಿದ್ದಾರೆ.