ಪ್ರಪ್ರಥಮ ಬಾರಿಗೆ ಸೆನ್ಸೆಕ್ಸ್‌ನಲ್ಲಿ ಗರಿಷ್ಠ ಮಟ್ಟದ ಏರಿಕೆ

ನವದೆಹಲಿ, ಡಿ. 04: ಆರ್‌ಬಿಐ ತನ್ನ ಜಿಡಿಪಿ ಮುನ್ನೋಟವನ್ನು ಪರಿಷ್ಕರಿಸಿದ ನಂತರ ಸೆನ್ಸೆಕ್ಸ್ ಮೊದಲ ಬಾರಿಗೆ 45,000ದ ಗರಿಷ್ಠ ಮಟ್ಟಕ್ಕೇರಿದ್ದು, 2020-21ರ ನೈಜ ಜಿಡಿಪಿ ಬೆಳವಣಿಗೆ ಅಂದಾಜು – 9. 5 ಪ್ರತಿಶತದಿಂದ – 7.5 ಕ್ಕೆ ಏರಿಕೆ ಕಂಡಿದೆ.

ವರದಿಗಳ ಪ್ರಕಾರ ಸೆನ್ಸೆಕ್ಸ್ 350 ಅಂಕಗಳ ಏರಿಕೆಯೊಂದಿಗೆ 45,000 ಮಟ್ಟಗಳಲ್ಲಿ ವಹಿವಾಟು ನಡೆಸಿತ್ತು. ನಿಫ್ಟಿ 50 ಸೂಚ್ಯಂಕವು 13,200ಕ್ಕಿಂತ ಹೆಚ್ಚಿನ ಮಟ್ಟದಲ್ಲಿತ್ತು.

ಅಲ್ಲದೇ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ರೆಪೊ ದರವನ್ನು ಶೇ.4ರಷ್ಟು ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳಲು ನಿರ್ಧರಿಸಿದ ಹಿನ್ನೆಲೆಯಲ್ಲಿ, ದೇಶೀಯ ಮಾರುಕಟ್ಟೆಗಳು 45,000ಕ್ಕೆ ಏರಿಕೆಯನ್ನು ಕಂಡಿದೆ. ಈ ಮೂಲಕ ಇದೇ ಮೊದಲ ಬಾರಿಗೆ 45,000 ಪಾಯಿಂಟ್ಸ್ ಸೆನ್ಸೆಕ್ಸ್ ಏರಿಕೆ ಕಂಡಿದೆ.

Exit mobile version