ಕೇಸರಿ ಪಕ್ಷದ ರಾಜಕೀಯ ಭವಿಷ್ಯ ನುಡಿದ ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್..!

New Delhi: ಮುಂಬರುವ ಲೋಕಸಭಾ ಚುನಾವಣೆಯಲ್ಲಿ (Loksabha Election) ಬಿಜೆಪಿ ತನ್ನ ರಾಜಕೀಯ ಹಾಗೂ ಸಂಘಟನಾತ್ಮಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲಿದೆ. ಆದರೆ ಬಿಜೆಪಿ ಏಕಾಂಗಿಯಾಗಿ 370 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗುವುದಿಲ್ಲ ಎಂದು ಚುನಾವಣಾ ತಂತ್ರಗಾರಿಕಾ ನಿಪುಣ ಪ್ರಶಾಂತ್ ಕಿಶೋರ್ (Prashanth Kishore) ಅಭಿಪ್ರಾಯಪಟ್ಟಿದ್ದಾರೆ.

ಖಾಸಗಿ ವಾಹಿನಿಗೆ ನೀಡಿರುವ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ಮತ್ತು ಪೂರ್ವ ರಾಜ್ಯಗಳಲ್ಲಿ ಬಿಜೆಪಿ ಗಮನಾರ್ಹ ಮುನ್ನಡೆ ಸಾಧಿಸಲಿದೆ. ಈ ಮೂಲಕ ಕೇಸರಿ ಪಕ್ಷವು ಪೂರ್ವ ಮತ್ತು ದಕ್ಷಿಣ ಭಾರತದಲ್ಲಿ ಗಣನೀಯವಾಗಿ ತನ್ನ ಸ್ಥಾನಗಳನ್ನು ಹೆಚ್ಚಿಸಿಕೊಳ್ಳಲಿದೆ. ಒಂದು ವರ್ಷದ ಹಿಂದೆಯೇ ನಾನು ತಮಿಳುನಾಡಿನಲ್ಲಿ (Tamilnadu) ಬಿಜೆಪಿಯು ಮತ ಹಂಚಿಕೆಯಲ್ಲಿ ಮೊದಲ ಬಾರಿಗೆ ಎರಡಂಕಿಯಲ್ಲಿ ನೋಡುತ್ತಿದ್ದೇನೆ ಎಂದು ಹೇಳಿದ್ದೆ.

ಅದೇ ರೀತಿ ತೆಲಂಗಾಣದಲ್ಲಿ (Telangana) ಮೊದಲ ಅಥವಾ ಎರಡನೇ ಪಕ್ಷವಾಗಲಿದೆ. ಇನ್ನೊಂದೆಡೆ ಒಡಿಶಾದಲ್ಲಿ ಖಚಿತವಾಗಿ ನಂಬರ್ ಒನ್ ಪಕ್ಷವಾಗಿ ಬಿಜೆಪಿ (BJP) ಹೊರಹೊಮ್ಮಲಿದೆ. ಅದೇ ರೀತಿ ಬಿಜೆಪಿಯು ಪಶ್ಚಿಮ ಬಂಗಾಳದಲ್ಲಿಯೂ ನಂಬರ್ ಒನ್ ಪಕ್ಷವಾಗಲಿದೆ ಎಂದು ಪ್ರಶಾಂತ್ ಕಿಶೋರ್ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಇನ್ನು ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಗುರಿಯಾಗಿರುವ 540 ಸದಸ್ಯ ಬಲದ ಲೋಕಸಭೆಯಲ್ಲಿ ಬಿಜೆಪಿ 370 ಸ್ಥಾನಗಳನ್ನು ಮೀರುವ ಸಾಧ್ಯತೆ ಕಡಿಮೆ. 2014 ಅಥವಾ 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ತೆಲಂಗಾಣ, ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಒಡಿಶಾ (Andrapradesh, Odissa, Kerala) ಪಶ್ಚಿಮ ಬಂಗಾಳ ಮತ್ತು ಬಿಹಾರದಲ್ಲಿ ಒಟ್ಟಾರೆಯಾಗಿ 50 ಸ್ಥಾನಗಳನ್ನು ದಾಟಲು ವಿಫಲವಾಗಿದೆ. ಬಿಜೆಪಿ ಪಕ್ಷವು 2014 ರಲ್ಲಿ ಈ ರಾಜ್ಯಗಳಲ್ಲಿ 29 ಸ್ಥಾನಗಳನ್ನು ಮತ್ತು 2019 ರಲ್ಲಿ 47 ಕ್ಷೇತ್ರಗಳನ್ನು ಗೆದ್ದಿದೆ.

ಹಿಂದಿ ಹೃದಯಭಾಗದ ರಾಜ್ಯಗಳು ಮತ್ತು ಪಶ್ಚಿಮ ಭಾರತದಲ್ಲಿ ಬಿಜೆಪಿ ತನ್ನ ನೆಲೆಯನ್ನು ಗಟ್ಟಿಗೊಳಿಸಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕಳೆದ ಐದು ವರ್ಷಗಳಲ್ಲಿ ತಮಿಳುನಾಡಿಗೆ ಎಷ್ಟು ಬಾರಿ ಭೇಟಿ ನೀಡಿದ್ದಾರೆ. ಅದೇ ರೀತಿ ರಾಹುಲ್ ಗಾಂಧಿ ಅಥವಾ ಸೋನಿಯಾ ಗಾಂಧಿ (Sonia Gandhi) ಅಥವಾ ಯಾವುದೇ ವಿರೋಧ ಪಕ್ಷದ ನಾಯಕರ ತಮಿಳುನಾಡಿಗೆ ಭೇಟಿ ನೀಡಿದ ಸಂಖ್ಯೆಯನ್ನು ಎಣಿಸಿ, ಉತ್ತರ ಸ್ಪಷ್ಟವಾಗುತ್ತದೆ. ಕಾಂಗ್ರೆಸ್ನ ಹೋರಾಟವು ಉತ್ತರ ಪ್ರದೇಶ, ಬಿಹಾರ (Uttar Pradesh) ಮತ್ತು ಮಧ್ಯಪ್ರದೇಶದಲ್ಲಿದೆ, ಆದರೆ ಅವರು ಮಣಿಪುರ ಮತ್ತು ಮೇಘಾಲಯದಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಹೀಗಾದರೆ ಯಶಸ್ಸು ಹೇಗೆ ಸಿಗುತ್ತದೆ ಎಂದು ಪ್ರಶ್ನಿಸಿದ್ದಾರೆ.

Exit mobile version