Mysore: `’ಸಿದ್ದರಾಮಯ್ಯ, ಎಂ.ಬಿ.ಪಾಟೀಲ್ (prathapsimha about guarantee scheme), ಡಿ.ಕೆ.ಶಿವಕುಮಾರ್, ಉಚಿತ ಗ್ಯಾರಂಟಿಗಳನ್ನು ತಮ್ಮ ಸ್ವಂತ ಆಸ್ತಿ ಮಾರಿ ಕೊಡುತ್ತಾರಾ?
ಗ್ಯಾರಂಟಿ ಯೋಜನೆಗಳಿಗೆ ಹೇಗೆ ಸಂಪನ್ಮೂಲ ಕ್ರೂಡೀಕರಣ ಮಾಡುತ್ತಾರೆ? ಗ್ಯಾರಂಟಿ ಯೋಜನೆಗೆ ಎಷ್ಟೇ ಕಷ್ಟ ಆದರೂ ಹಣ ಹೊಂದಿಸುತ್ತೇವೆ ಎಂಬ ಸಿದ್ದರಾಮಯ್ಯ (Siddaramaiah)
ಹೇಳಿಕೆಗೆ ಸಂಸದ ಪ್ರತಾಪ ಸಿಂಹ (prathapsimha about guarantee scheme) ನೀಡಿರುವ ತಿರುಗೇಟು.

ಸಿದ್ದರಾಮಯ್ಯ ತಮ್ಮ ರಾಜಕೀಯ ಅವಧಿಯಲ್ಲಿ ಈಗಾಗಲೇ ಹದಿಮೂರು ಬಜೆಟ್ ಮಂಡಿಸಿದ್ದು, ಈಗ ಹದಿನಾಲ್ಕನೇ ಬಜೆಟ್ ಮಂಡಿಸಲು ಸಿದ್ಧತೆ ನಡೆಸಿದ್ದಾರೆ. ಗ್ಯಾರಂಟಿ ಈಡೇರಿಸಲು ಎಷ್ಟೇ ಕಷ್ಟವಾದರೂ
ಗ್ಯಾರಂಟಿಗೆ ಹಣ ತರ್ತೀವಿ ಎಂದು ಹೇಳುತ್ತಿದ್ದೀರಲ್ವಾ? ನೀವೇನು ಕಷ್ಟಪಟ್ಟು ಜನಕ್ಕೆ ಕೊಡ್ತಿದ್ದೀರಾ? ಅಥವಾ ನಿಮ್ಮ ಆಸ್ತಿ ಪಾಸ್ತಿ ಮಾರಿ ಕೊಡ್ತಿದ್ದೀರಾ? ತೆರಿಗೆ ಹೆಚ್ಚಿಸುವುದು, ಸುಲಿಗೆ ಮಾಡುವುದು ವಾಡಿಕೆಯೇ?
ಇದು ಕಾಂಗ್ರೆಸ್ (prathapsimha about guarantee scheme) ಸಂಸ್ಕೃತಿಯ ಭಾಗವೇ?
ಇದನ್ನು ಓದಿ: ಪ್ರತಿಪಕ್ಷಗಳ ತಂತ್ರಗಾರಿಕೆ ಸಭೆ ಶಿಮ್ಲಾ ಬದಲಿಗೆ ಬೆಂಗಳೂರಿಗೆ ಶಿಫ್ಟ್..!
ಐವತ್ತು ಸಾವಿರ ಕೋಟಿ ಖರ್ಚಾಗುತ್ತದೆ ಎಂದು ಈಗಾಗಲೇ ಹೇಳಿದ್ದೀರಿ. ಅಷ್ಟು ಹಣವನ್ನು ಎಲ್ಲಿಂದ ತರ್ತೀರಿ ಎಂದು ನಾವು ಕೇಳಿದ್ದೇವಷ್ಟೇ.. ಜನರು ಬಿಜೆಪಿಯ ಬಗ್ಗೆ ಅಸಮಾಧಾನ ಹೊಂದಿದ್ದರಿಂದ ಮತ್ತು
ನಿಮ್ಮ ಭರವಸೆಗಳನ್ನು ನಂಬಿ ನಿಮಗೆ ಮತ ಹಾಕಿದ್ದಾರೆ. ಆದರೆ ಈಗ ಆರ್‌ಎಸ್‌ಎಸ್ ಪಠ್ಯ, ಮನು ಸಂಸ್ಕೃತಿ ಎಂದೆಲ್ಲಾ ವಿಷಯಾಂತರ ಮಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರ ವಿದ್ಯುತ್ ದರ ಹೆಚ್ಚಿಸಿದೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರತಾಪಸಿಂಹ, ‘ಸ್ವತಂತ್ರ ಸಂಸ್ಥೆಯಾದ ಕೆಇಆರ್‌ಸಿ (KERC) ದರ ಏರಿಕೆಗೆ ಸೂಚಿಸಿದೆ. ಅದನ್ನು ತಡೆಯುವ ಅಥವಾ
ತಿರಸ್ಕರಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿದೆ. ಆದೇಶವನ್ನು ತಡೆಯಲು ನೀವು ಯೋಜಿಸಬಹುದಿತ್ತು. ಹಿಂದಿನ ಸರ್ಕಾರದ ಅವಧಿಯಲ್ಲಿ ಕಾಮಗಾರಿ ಮಾಡಿದ್ದ ಗುತ್ತಿಗೆದಾರರ ಹಣ ಬಿಡುಗಡೆ ಆದೇಶಕ್ಕೆ ತಡೆ ಹಾಕುತ್ತೀರಿ.
ಆದರೆ ವಿದ್ಯುತ್ದರ ಹೆಚ್ಚಳದ ಆದೇಶವನ್ನು ಏಕೆ ನಿಲ್ಲಿಸಿಲ್ಲ,’’ ಎಂದು ಪ್ರಶ್ನಿಸಿದರು.
ಎಲ್ಲವನ್ನೂ ಹಿಂದಿನ ಸರಕಾರವೇ ಮಾಡಿದ್ದರೆ, ಹಿಂದಿನ ಬಿಜೆಪಿ(BJP) ಸರಕಾರವು ಮತಾಂತರ ನಿಷೇಧ ಕಾಯಿದೆ ಜಾರಿಗೊಳಿಸಿದೆ.ಗೋಹತ್ಯೆ ತಡೆ ಕಾಯಿದೆ ಜಾರಿಗೊಳಿಸಿದೆ. ಮೀಸಲಾತಿ ವ್ಯವಸ್ಥೆಯನ್ನೂ ಬದಲಾಯಿಸಿದೆ.
ಮುಸನ್ಮಾನ್‌ಗಳಿಗೆ ಅಕ್ರಮವಾಗಿ ಒದಗಿಸಿದ ಶೇ.4 ಮೀಸಲಾತಿಯನ್ನೂ ಹಿಂಪಡೆಯಲಾಗಿದೆ.
ಹಾಗಿದ್ದಲ್ಲಿ, ನೀವು ಇದನ್ನು ಸಹ ಮಾಡಬಹುದು. ಇಲ್ಲದಿದ್ದಲ್ಲಿ ರಾಜ್ಯದ ಜನರನ್ನು ದಾರಿ ತಪ್ಪಿಸುವ ಕೆಲಸ ದಯವಿಟ್ಟು ಮಾಡಬೇಡಿ.

ಮಾನ್ಯ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ರವರೇ(D K Shiva Kumar) ನೀವೂ ಮೊದಲು ವಿದ್ಯುತ್ ಸಚಿವರಾಗಿದ್ದಿರಿ. ಎಲ್ಲ ಎಸ್ಕಾಂಗಳ (ESCOM) ಅಭಿಪ್ರಾಯ ಪಡೆದುಕೊಂಡ ನಂತರವೇ
ಕೆಇಆರ್ ಸಿ ವಿದ್ಯುತ್ ದರ ಇಷ್ಟು ಹೆಚ್ಚಿಸಬೇಕೆಂದು ಶಿಫಾರಸು ಮಾಡುವ ಕ್ರಮ. ಅದರಂತೆ ಮೇ 12 ರಂದು ದರ ಏರಿಕೆ ಬಗ್ಗೆ ಶಿಫಾರಸು ಮಾಡಿದರು. ಅಂತಹ ಪ್ರಸ್ತಾವನೆಗಳನ್ನು ತಡೆಹಿಡಿಯುವ
ಮತ್ತು ತಿರಸ್ಕರಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ. ನೀವು ಅದನ್ನು ತಿರಸ್ಕರಿಸಬೇಕಿತ್ತು
ಆರ್ಥಿಕ ವರ್ಷದಲ್ಲಿ ಟೋಲ್ ಹೆಚ್ಚಳ ಸಹಜ:
ಆರ್ಥಿಕ ವರ್ಷದಲ್ಲಿ ಟೋಲ್(Toll) ಏರಿಕೆ ಸಾಮಾನ್ಯವಾಗಿದೆ ಏಕೆಂದರೆ “ರಾಷ್ಟ್ರೀಯ ಹಣಕಾಸು ವರ್ಷದ ಆರಂಭದಲ್ಲಿ ಟೋಲ್‌ಗಳನ್ನು ಹೆಚ್ಚಿಸುವುದು ಸಹಜ. ಈ ಹೈವೇಗೆ ಟೋಲ್‌ಗಳು ಏಪ್ರಿಲ್‌ನಲ್ಲಿ ಹೆಚ್ಚಾಗಬೇಕಿತ್ತು.
ಈಗ ಅದು 22 ಶೇಕಡಾ ಹೆಚ್ಚಳವಾಗಿದೆ. ಒಂದು ವೇಳೆ ಫಾಸ್ಟ್ ಟ್ಯಾಗ್(Fastag) ಇಲ್ಲದಿದ್ದರೆ ಅವಶ್ಯಕವಾಗಿ ಡಬಲ್ ಚಾರ್ಜ್ ಬೀಳುತ್ತದೆ. ಇದನ್ನು ಟೋಲ್ ಹೆಚ್ಚಳ ಎಂದು ಯಾರೂ ಭಾವಿಸಬಾರದು”
ಎನ್ನುವ ಮೂಲಕ ಮೈಸೂರು-ಬೆಂಗಳೂರು ಹೈವೇ (Bangalore Mysore) ಟೋಲ್ ಹೆಚ್ಚಳ ಮಾಡಿರುವ ಬಗ್ಗೆ ಸಮರ್ಥಿಸಿಕೊಂಡರು.
ರಶ್ಮಿತಾ ಅನೀಶ್