ಗರ್ಭಿಣಿಯರು ಸಹ ಲಸಿಕೆ ಪಡೆಯಬಹುದು: ಆರೋಗ್ಯ ಇಲಾಖೆ

ನವದೆಹಲಿ,ಜೂ.26: ಗರ್ಭಿಣಿಯರಿಗೆ ಕೋವಿಡ್-19 ಲಸಿಕೆ ನೀಡಬಹುದು ಎಂದು ಹೇಳಿರುವ ಆರೋಗ್ಯ ಇಲಾಖೆಯು, ಅಗತ್ಯವಾಗಿ ನೀಡಲೇಬೇಕು ಎಂದೂ ತಿಳಿಸಿದೆ.

ಗರ್ಭಿಣಿಯರು ಮಾರಣಾಂತಿಕ ವೈರಸ್‌ನ ಸೋಂಕಿಗೆ ಒಳಗಾಗುವ ಆತಂಕಗಳು ವ್ಯಕ್ತವಾಗುತ್ತಿರುವ ನಡುವೆಯೇ ಆರೋಗ್ಯ ಇಲಾಖೆ ಈ ನಿರ್ದೇಶನ ನೀಡಿದೆ.

ಗರ್ಭಿಣಿಯರಿಗೆ ಲಸಿಕೆ ನೀಡಬಹುದು ಎಂದು ಸರ್ಕಾರದ ಮಾರ್ಗಸೂಚಿಗಳಲ್ಲಿ ತಿಳಿಸಲಾಗಿದೆ. ಗರ್ಭಿಣಿಯರಿಗೆ ಲಸಿಕೆಯು ಉಪಯುಕ್ತವಾದದ್ದು. ಲಸಿಕೆಯನ್ನು ಅವರಿಗೆ ಅಗತ್ಯವಾಗಿ ನೀಡಬೇಕು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಮಹಾನಿರ್ದೇಶಕ ಡಾ.ಬಲರಾಮ್‌ ಭಾರ್ಗವ ಅವರು ಸುದ್ದಿ ಸಂಸ್ಥೆ ಎಎನ್‌ಐಗೆ ಮಾಹಿತಿ ನೀಡಿದ್ದಾರೆ.

Exit mobile version