ಗರ್ಭಿಣಿಯರನ್ನು ಕೆಲಸದಿಂದ ವಜಾ ಮಾಡಿದ್ರೆ 3 ತಿಂಗಳು ಜೈಲು: ಸಚಿವ ಸುಧಾಕರ್ ವಾರ್ನಿಂಗ್

ಬೆಂಗಳೂರು, ಮಾ. 10: ಗರ್ಭಿಣಿಯರನ್ನು ಯಾವುದೇ ಕಾರಣಕ್ಕೂ ಕೆಲಸದಿಂದ ವಜಾಗೊಳಿಸಬಾರದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಅವರು ತಿಳಿಸಿದ್ದಾರೆ.

ಹಾಗೊಂದುವೇಳೆ ಅವರನ್ನು ವಜಾಗೊಳಿಸಿದರೆ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ. ಅಂತಹ ಉದ್ಯೋಗದಾತರಿಗೆ ಮೂರು ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಅಲ್ಲದೇ, ಈ ತಪ್ಪಿಗಾಗಿ ದಂಡವನ್ನೂ ವಿಧಿಸಲಾಗುತ್ತದೆ. ಅಶಕ್ತರು, ಅನಾರೋಗ್ಯ ರಜೆ ಬೇಕಾಗುತ್ತದೆ ಎನ್ನುವ ಕಾರಣಕ್ಕೆ ಗರ್ಭಿಣಿಯರನ್ನು ಯಾವುದೇ ಕಾರಣಕ್ಕೂ ಕೆಲಸದಿಂದ ತೆಗೆದುಹಾಕುವಂತಿಲ್ಲ ಎಂದು ಅವರು ತಿಳಿಸಿದ್ದಾರೆ.

Exit mobile version