ಪೆಟ್ರೋಲ್ ಹಾಗೂ ಡಿಸೇಲ್ ಜಿಎಎಸ್‌ಟಿ ವ್ಯಾಪ್ತಿಗೆ ತರಲು ರಾಜ್ಯದ ವಿರೋಧ

ಬೆಂಗಳೂರು ಸೆ 16 : ದಿನದಿಂದ ದಿನಕ್ಕೆ ಪೆಟ್ರೋಲ್ ಹಾಗೂ ಡಿಸೇಲ್ ದರ ಏರುತ್ತಿರುವ ಹಿನ್ನಲೆಯಲ್ಲಿ ತೈಲೋತ್ಪನ್ನಗಳನ್ನು ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ) ಅಡಿ ತರುವ ಮಹತ್ವದ ಪ್ರಸ್ತಾಪವು ಜಿಎಸ್‌ಟಿ ಮಂಡಳಿಯ ಮುಂದೆ ಬಂದಿದೆ. ಸೆಪ್ಟೆಂಬರ್‌ 17ರ ಶುಕ್ರವಾರ ನಡೆಯಲಿರುವ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಲಿದೆ

ಕಳೆದ ಹಲವು ತಿಂಗಳಿನಿಂದ ಕಳೆದ ಜೂನ್‌ನಲ್ಲಿ ಕೇರಳ ಹೈಕೋರ್ಟ್‌, ಪೆಟ್ರೋಲ್‌, ಡೀಸೆಲ್‌ ದರಗಳನ್ನು ಜಿಎಸ್‌ಟಿ ಅಡಿ ತರುವ ಬಗ್ಗೆ ಪರಿಶೀಲಿಸಿ ಎಂದು ಸೂಚಿಸಿತ್ತು. ಏಕೆಂದರೆ ಇವುಗಳ ದರಗಳ ಮೇಲೆ ರಾಜ್ಯಗಳು ಹಾಗೂ ಕೇಂದ್ರವು ಪ್ರತ್ಯೇಕ ತೆರಿಗೆ ಹಾಕುತ್ತಿದ್ದು, ದರ ಏರಿಕೆಗೆ ಇದೂ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಈ ಸಭೆಯಲ್ಲಿ ತೆಗೆದುಕೊಳ್ಳಬಹುದಾದ ನಿರ್ಣಯದ ಬಗ್ಗೆ ಕುತೂಹಲ ಮೂಡಿದೆ. ಒಂದು ವೇಳೆ ಪೆಟ್ರೋಲ್‌, ಡೀಸೆಲ್‌ ಜಿಎಸ್‌ಟಿ ಅಡಿ ಬಂದರೆ ಅವುಗಳ ಮೇಲಿನ ತೆರಿಗೆ ಏಕರೂಪಗೊಂಡು, ದರ ಇಳಿಕೆ ಆಗುವ ಸಾಧ್ಯತೆ ಇದೆ.

ಪೆಟ್ರೋಲ್ ಹಾಗೂ ಡಿಸೇಲ್‌ ಜಿಎಸ್‌ಟಿ ವ್ಯಾಪ್ತಿಗೆ ತರಲು ರಾಜ್ಯದ ವಿರೋಧ :

ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಪೆಟ್ರೋಲ್ ಹಾಗೂ ಡಿಸೇಲ್‌ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ವಿರೋಧ ವೆಕ್ತಪಡಿಸಿವೆ. ಜಿಎಸ್‌ಟಿ ವ್ಯಾಪ್ತಿಯಲ್ಲಿ ಗರಿಷ್ಠ ತೆರಿಗೆ ದರ ಶೇ.28. ಆದರೆ ತೈಲೋತ್ಪನ್ನಗಳು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿರುವ ಕಾರಣ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇವುಗಳ ಮೇಲೆ ಭಾರೀ ಪ್ರಮಾಣದ ತೆರಿಗೆ, ಅಧಿಬಾರ ತೆರಿಗೆ ವಿಧಿಸುತ್ತಿವೆ. ಕೇಂದ್ರ ಮತ್ತು ರಾಜ್ಯ ಎರಡಕ್ಕೂ ತೈಲೋತ್ಪನ್ನಗಳು ದೊಡ್ಡ ಆದಾಯದ ಮೂಲ. ಜಿಎಸ್‌ಟಿ ವ್ಯಾಪ್ತಿಗೆ ಇದು ಸೇರಿದರೆ ಕೇಂದ್ರ, ರಾಜ್ಯ ಎರಡರ ಬೊಕ್ಕಸಕ್ಕೂ ನಷ್ಟ ಖಚಿತವಾಗಲಿದ್ದು ಈ ಹಿನ್ನ್ಲೆಯಲ್ಲಿ ಹಲವು ರಾಜ್ಯಗಳು ಇದನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ವಿರೋಧ ವೆಕ್ತಪಡಿಸುತ್ತಿವೆ.

Exit mobile version