ಸಿಹಿ ಸುದ್ದಿ: ವಿವೋ X90 ಪ್ರೊ ಬೆಲೆಯಲ್ಲಿ ಬರೋಬ್ಬರಿ 10,000 ರೂ.ಇಳಿಕೆ, ಏನೆಲ್ಲಾ ಫೀಚರ್ಸ್ ಹೊಂದಿದೆ

ದೇಶದಾದ್ಯಂತ ಈಗಲೂ ಟ್ರೆಡಿಂಗ್​ನಲ್ಲಿರುವ ವಿವೋ (Vivo) X90 ಪ್ರೊ ಬೆಲೆಯಲ್ಲಿ ಭರ್ಜರಿ ಇಳಿಕೆ ಮಾಡಿದ್ದು, ವಿವೋ (price decrease on Vivo X90) ಕಂಪನಿಯು ಕಳೆದ ಏಪ್ರಿಲ್​ನಲ್ಲಿ

ರಿಲೀಸ್ ಮಾಡಿತ್ತು. ದುಬಾರಿ ಬೆಲೆಯ ಈ ಫೋನಿನ ಮೇಲೆ ಬರೋಬ್ಬರಿ 10,000 ರೂ. ಬೆಲೆ ಕಡಿತವಾಗಿದ್ದು, ವಿವೋ X90 ಪ್ರೊ ನೂತನ ಬೆಲೆ ಎಷ್ಟು? ಏನೆಲ್ಲ ಫೀಚರ್ಸ್ (Features)

ಹೊಂದಿದೆ (price decrease on Vivo X90) ಎಂದು ತಿಳಿಯೋಣ.

ಭಾರತದಲ್ಲಿ ಒಂದರ ಹಿಂದೆ ಒಂದರಂತೆ ವಿವೊ ಕಂಪನಿಯ ಸ್ಮಾರ್ಟ್​ಫೋನ್​ಗಳು (Smartphone) ಅನಾವರಣಗೊಳ್ಳುತ್ತಿದ್ದು, ಇದರ ಜೊತೆಗೆ ಕಂಪನಿ ಈಗಾಗಲೇ ಬಿಡುಗಡೆ ಮಾಡಿದ ಕೆಲವು

ಫೋನುಗಳ ಬೆಲೆಯಲ್ಲಿ ಕೂಡ ಇಳಿಕೆ ಮಾಡುತ್ತಿದೆ.

ನೂತನ ಬೆಲೆ
ಭಾರತದಲ್ಲಿ ವಿವೋ X90 ಪ್ರೊ ಮೂಲ ಬೆಲೆಯಲ್ಲಿ ಈಗ 10,000 ರೂ. ಕಡಿಮೆ ಮಾಡಲಾಗಿದೆ. ಈ ಹ್ಯಾಂಡ್‌ಸೆಟ್ (Headset) ಪ್ರಸ್ತುತ ಏಕೈಕ ಮಾದರಿಯಲ್ಲಿ ಲಭ್ಯವಿದ್ದು, ಇದರ 12GB RAM + 256GB

ಸ್ಟೋರೇಜ್ (Storeage) ರೂಪಾಂತರಕ್ಕಾಗಿ 74,999 ರೂ. ನಿಗದಿ ಮಾಡಲಾಗಿದೆ. ಬಿಡುಗಡೆಗೊಂಡಾಗ ಇದರ ಬೆಲೆ 84,999 ರೂ. ಇತ್ತು. ಇದು ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟವಾಗುತ್ತಿದೆ.

ವಿವೋ X90 ಪ್ರೊ ಫೀಚರ್ಸ್
ಡ್ಯುಯಲ್ ಸಿಮ್ (Dual SIM) (ನ್ಯಾನೋ) ವಿವೋ X90 ಪ್ರೊ ಸ್ಮಾರ್ಟ್​ಫೋನ್ ಆಂಡ್ರಾಯ್ಡ್ 13-ಆಧಾರಿತ FunTouch OS 13 ಮೂಲಕ ರನ್ ಆಗುವುದಲ್ಲದೆ 120Hz ರಿಫ್ರೆಶ್ ದರದೊಂದಿಗೆ 6.78-ಇಂಚಿನ

(1,260x 2,800 ಪಿಕ್ಸೆಲ್‌ಗಳು) AMOLED 3D ಕರ್ವ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಆಕ್ಟಾ-ಕೋರ್ 4nm ಮೀಡಿಯಾ ಟೆಕ್ ಡೈಮೆನ್ಸಿಟಿ 9200 SoC ಜೊತೆಗೆ ವಿವೋದ V2 ಚಿಪ್, 12GB ವರೆಗಿನ

LPDDR5 RAM ಮತ್ತು ಇಮ್ಮಾರ್ಟಲಿಸ್ G715 GPU ನಲ್ಲಿ ಕಾರ್ಯನಿರ್ವಹಿಸುತ್ತದೆ.

ಇನ್ನು ಕ್ಯಾಮೆರಾ ವಿಷಯಕ್ಕೆ ಬಂದರೆ, ವಿವೋ X90 ಪ್ರೊ ಹಿಂಬದಿ ಟ್ರಿಪಲ್ ಕ್ಯಾಮೆರಾ (Triple Camera) ಸೆಟಪ್ ಅನ್ನು ಹೊಂದಿದ್ದು, OIS (ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್) ಬೆಂಬಲದೊಂದಿಗೆ

50-ಮೆಗಾಪಿಕ್ಸೆಲ್ ಸೋನಿ IMX 989 ಪ್ರಾಥಮಿಕ ಕ್ಯಾಮೆರಾ ಇದೆ. ಹಾಗೆಯೆ 50-ಮೆಗಾಪಿಕ್ಸೆಲ್ ಸೋನಿ IMX 758 ಸಂವೇದಕ ಮತ್ತು 12-ಮೆಗಾಪಿಕ್ಸೆಲ್ ಸೋನಿ IMX 663 ಸಂವೇದಕವಿದೆ.

ಮುಂಭಾಗದಲ್ಲಿ, ಇದು 32-ಮೆಗಾಪಿಕ್ಸೆಲ್ (Megapixel) ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ರೇಟಿಂಗ್ ಅನ್ನು ಹೊಂದಿದ್ದು, ವಿವೋ X90 ಪ್ರೊನಲ್ಲಿ ದೃಢೀಕರಣಕ್ಕಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ (Fingerprint) ಸಂವೇದಕವಿದೆ.

ಇದು 120W ವೇಗದ ಚಾರ್ಜಿಂಗ್ ಬೆಂಬಲ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ 4,870mAh ಬ್ಯಾಟರಿಯಿಂದ ಬೆಂಬಲಿತವಾಗಿದೆ.

ಇದನ್ನು ಓದಿ: ಬೆಂಗಳೂರಿಗೆ ರಾಮನಗರ ಸೇರ್ಪಡೆ: ಡಿಕೆಶಿ v/s ಎಚ್‌ಡಿಕೆ ನಡುವೆ ಸವಾಲು ಪ್ರತಿಸವಾಲು

Exit mobile version