ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆ ಮೋದಿ ಪಿಕ್ನಿಕ್‌ ಆಲ್ಬಮ್ ನಂತಿದೆ ಎಂದು ವ್ಯಂಗ್ಯವಾಡಿದ ಪ್ರಿಯಾಂಕ್ ಖರ್ಗೆ

Bengaluru: ಲೋಕಸಭಾ ಚುನಾವಣೆಯ (Loksabha Election) ಹಿನ್ನೆಲೆ ಅಭ್ಯರ್ಥಿಗಳ (Priyank Kharge Slams BJP Manifesto) ಪ್ರಚಾರ ಕಾರ್ಯ ಬಿರುಸಾಗಿ ಸಾಗಿದ್ದು ವಿಪಕ್ಷಗಳ ನಡುವೆ

ವಾಕ್ಸಮರ ಜೋರಾಗಿದೆ. ಈಗಾಗಲೇ ಲೋಕಸಭಾ ಚುನಾವಣೆಗೆ ಉಭಯ ಪಕ್ಷಗಳು ಪ್ರಣಾಳಿಕೆ ಬಿಡುಗಡೆ ಮಾಡಿದ್ದು ಬಿಜೆಪಿ (BJP) ಬಿಡುಗಡೆ ಮಾಡಿರುವ ಪ್ರಣಾಳಿಕೆ ಮೋದಿ ಪಿಕ್ನಿಕ್‌ ಆಲ್ಬಮ್ (Picnic

Album) ನಂತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ವ್ಯಂಗ್ಯವಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಈ ಕುರಿತಾಗಿ ಮಾತನಾಡಿರು ಅವರು, ಪ್ರಣಾಳಿಕೆ ಪುಸ್ತಕದಲ್ಲಿ ಮೋದಿ ಅವರು ಪಿಕ್ನಿಕ್‌ನ ತರಹೇವಾರಿ ಫೋಟೊಗಳು ಬಿಟ್ಟರೆ ಯುವಕರು,‌ ಮಹಿಳೆಯರು, ರೈತರು, ಬಡವರು,

ಶ್ರಮಿಕರು ಹಾಗೂ ನಿರ್ಗತಿಕರಿಗೆ ಉಪಯೋಗ ಆಗುವಂತ ಯಾವುದೇ ಅಂಶಗಳಿಲ್ಲ. ಕೊಟ್ಟ ಆಶ್ವಾಸನೆಗಳು ಹೇಗೆ, ಯಾವಾಗ ಈಡೇರಿಸುತ್ತೇವೆ ಎನ್ನುವ ಸ್ಪಷ್ಟತೆ ಕಾಣಿಸುತ್ತಿಲ್ಲ ನಮ್ಮನ್ನು ನೋಡಿ ತಾವು

ಕೂಡ ಏನಾದರೂ ಕೊಡಬೇಕೆಂದು ಒಂದಿಷ್ಟು ಯೋಜನೆ (Priyank Kharge Slams BJP Manifesto) ಸೇರಿಸಿದಂತಿದೆ ಎಂದು ಹೇಳಿದ್ದಾರೆ.

ಈಗಾಗಲೇ ಎಲ್ಲಾರಿಗೂ ತಿಳಿದಿರುವ ಪ್ರಕಾರ ಕೇಂದ್ರದ ಅಂಕಿ ಅಂಶಗಳ ಪ್ರಕಾರ, ಕೇಂದ್ರದ ವಿವಿಧ ಇಲಾಖೆಗಳಲ್ಲಿ 30 ಲಕ್ಷ ಹುದ್ದೆಗಳು ಖಾಲಿ ಇವೆ. ಹಣಕಾಸು ಇಲಾಖೆಯಲ್ಲಿ 9.64 ಲಕ್ಷ, ರೈಲ್ವೆಯಲ್ಲಿ 3 ಲಕ್ಷ,

ಸೇನೆಯ ನಾಗರಿಕ ವಿಭಾಗದಲ್ಲಿ 2.2 ಲಕ್ಷ, ಅಂಚೆ ಇಲಾಖೆಯಲ್ಲಿ 1.20 ಲಕ್ಷ, ಕಂದಾಯ ಇಲಾಖೆಯಲ್ಲಿ 74 ಸಾವಿರ ಹುದ್ದೆಗಳು ಖಾಲಿ ಇವೆ. ಇವುಗಳನ್ನು ಯಾವಾಗ ಭರ್ತಿ ಮಾಡುತ್ತಾರೆ ಎಂಬ ಕುರಿತು ಪ್ರಸ್ತಾಪ

ಪ್ರಣಾಳಿಕೆಯಲ್ಲಿ ಮಾಡಿಲ್ಲ ಯುವ ಜನತೆ ಮೋದಿ ಬದಲು ಮಾಡುತ್ತಾರೆ ಉಗ್ಯೋಗ ನೀಡುತ್ತಾರೆ ಎಂಬ ಆಸೆಯಿಂದ ಕಾದು ಕುಳಿತಿದ್ದಾರೆ.

ಅಚ್ಚೇದಿನ್, ಅಮೃತ ಕಾಲ, ಸ್ಕಿಲ್ ಇಂಡಿಯಾ, ಮೇಕ್ ಇನ್ ಇಂಡಿಯಾ (Make in India) ಘೋಷಣೆಗಳು ಮಾಯವಾಗಿ ಹೋಗಿದೆ.ವಾರಂಟಿಯೇ ಇಲ್ಲದ ಮೋದಿ ಗ್ಯಾರಂಟಿಗಳನ್ನು (Modi Guarantee)

ಜನರು ನಂಬುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನು ಓದಿ: ದಾವಣಗೆರೆಯಲ್ಲಿ ಕೈ ಬಂಡಾಯ ಅಭ್ಯರ್ಥಿ ವಿನಯ್ ಕುಮಾರ್ ʼಕುರುಬಾಸ್ತ್ರʼ ; ಕೈ ಕಂಗಾಲು..?!

Exit mobile version