ಸದ್ಯ ರಾಜ್ಯದಲ್ಲಿ ಲಂಚ-ಮಂಚದ ಸರ್ಕಾರವಿದೆ : ಪ್ರಿಯಾಂಕ್‌ ಖರ್ಗೆ

congress

ಕಲಬುರಗಿ : ಕರ್ನಾಟಕದಲ್ಲಿ(Karnataka) ಸರ್ಕಾರಿ ನೌಕರಿ ಸಿಗಬೇಕು ಅಂದರೆ ಯುವಕರು ಲಂಚ ಕೊಡಬೇಕು, ಅದೇ ರೀತಿ ಯುವತಿಯರು ಮಂಚ ಹತ್ತಬೇಕು ಎಂದು ಕಾಂಗ್ರೆಸ್‌ ನಾಯಕ(Congress Leader) ಪ್ರಿಯಾಂಕ್‌ ಖರ್ಗೆ(Priyank Kharghe)  ವಿವಾದಾತ್ಮಕ(Controversial) ಹೇಳಿಕೆ ನೀಡಿದ್ದಾರೆ.

ಕಲಬುರಗಿಯಲ್ಲಿ(Kalburgi) ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಸರ್ಕಾರಿ ನೌಕರಿ ಸಿಗಬೇಕಾದರೆ ಯುವಕರು ಲಂಚ ಕೊಡಬೇಕು. ಯುವತಿಯರು ಅಧಿಕಾರಿಗಳು ಮತ್ತು ರಾಜಕಾರಣಿಗಳಿಗಾಗಿ ಮಂಚ ಹತ್ತಬೇಕು. ಆಗ ಮಾತ್ರ ಸರ್ಕಾರಿ ನೌಕರಿ ಸಿಗುತ್ತದೆ. ಸದ್ಯ ರಾಜ್ಯದಲ್ಲಿ ಲಂಚ-ಮಂಚದ ಸರ್ಕಾರವಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಇನ್ನು ಕಳೆದ ಮೂರು ವರ್ಷಗಳಲ್ಲಿ ಬಿಜೆಪಿ ಸರ್ಕಾರ(BJP Government) ಯುವಜನತೆಗೆ ಉದ್ಯೋಗ ನೀಡುವಲ್ಲಿ ವಿಫಲವಾಗಿದೆ.  ರಾಜ್ಯದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಉದ್ಯೋಗ ಸೃಷ್ಟಿಯಲ್ಲಿ ಬಿಜೆಪಿ ಸರ್ಕಾರದ ಸಾಧನೆ ಶೂನ್ಯ. ಹೆಸರಿಗೆ ಉದ್ಯೋಗ ಮೇಳ ಮಾಡುತ್ತಿದ್ದಾರೆ. ಉದ್ಯೋಗ ಮೇಳ ಮಾಡಿದ್ರು ಒಂದು ಸಾವಿರ ಜನರಿಗೂ ಉದ್ಯೋಗ ಸಿಗುತ್ತಿಲ್ಲ. ೪೦ ಪರ್ಸೆಂಟ್‌ ಕಮಿಷನ್‌(40% Commission) ಕೊಟ್ಟರೆ ಅಕ್ರಮಗಳನ್ನು ನಡೆಸಬಹುದು.

ಹೀಗಾಗಿ ರಾಜ್ಯ ಸರ್ಕಾರ ಬಗ್ಗೆ  ಅಕ್ರಮ ಮಾಡುವವರಿಗೆ ಯಾವುದೇ ಭಯವಿಲ್ಲ. ಇದೊಂದು ಅಸಮರ್ಥ ಸರ್ಕಾರ. ೪೦ ಪರ್ಸೆಂಟ್‌ ಕಮಿಷನ್‌ ಕೊಟ್ಟರೆ ಈ ಸರ್ಕಾರದಲ್ಲಿ ವಿಧಾನಸೌಧವನ್ನು ಮಾರಿಬಿಡುತ್ತಾರೆ ಎಂದು ಲೇವಡಿ ಮಾಡಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿರುವ ನೇಮಕಾತಿ ಅಕ್ರಮಗಳನ್ನು ವಿಚಾರಣೆ ನಡೆಸಲು ಫ್ಯಾಸ್ಟ್‌ಟ್ರ್ಯಾಕ್‌ ಕೋರ್ಟ್‌(Fast Track Court) ಅನ್ನು ಸ್ಥಾಪಿಸಬೇಕು. ನಿರಂತರವಾಗಿ ತನಿಖೆ ನಡೆಸಬೇಕು.

ಹಾಲಿ ಹೈಕೋರ್ಟ್‌ ಅಥವಾ ಸುಪ್ರೀಂಕೋರ್ಟ್‌(Supreme Court) ನ್ಯಾಯಾಧೀಶರಿಂದ ತನಿಖೆ ನಡೆಸಬೇಕು. ಈಗಾಗಲೇ ರಾಜ್ಯದಲ್ಲಿ ಯುವಕರು ಬಿಜೆಪಿ ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ. ಯುವಕರಿಗೆ ನೇಮಕಾತಿಯಲ್ಲಿ ಅನ್ಯಾಯವಾಗುತ್ತಿದೆ. ಆದರೆ ಯಾವುದೇ ಬಿಜೆಪಿ ನಾಯಕರು ಅದರ ಬಗ್ಗೆ ಮಾತನಾಡುತ್ತಿಲ್ಲ. ಸರ್ಕಾರ ಯುವಕರ ಭವಿಷ್ಯವನ್ನು ಮಾರಾಟ ಮಾಡಿ, ಸರ್ಕಾರ ನಡೆಸುತ್ತಿದೆ.  ಇದರ ಬಗ್ಗೆ ಕಾಂಗ್ರೆಸ್‌ ಪಕ್ಷ ನಿರಂತರವಾಗಿ ಹೋರಾಟ ನಡೆಸಲಿದೆ ಎಂದು ತಿಳಿಸಿದರು.

Exit mobile version