ಉತ್ತರ ಪ್ರದೇಶ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ 40% ಮೀಸಲಾತಿ – ಪ್ರಿಯಾಂಕ ಗಾಂಧಿ

ನವದೆಹಲಿ ಅ 20 : ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ಶೇಕಡ 40% ಮಹಿಳೆಯರಿಗೆ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್‌ ನೀಡಲಾಗುವುದು ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಹೇಳಿದ್ದಾರೆ.

ಸುದ್ದಿಘೋಷ್ಠಿಯಲ್ಲಿ ಮಾತನಾಡಿದ ಪ್ರಿಯಾಂಕ ʻರಾಜಕೀಯದಲ್ಲಿ ಮಹಿಳೆಯರು ಪೂರ್ಣ ಪ್ರಮಾಣದ ಪಾಲುದಾರರಾಗಬೇಕೆಂದು ನಾವು ಬಯಸುತ್ತೇವೆʼ. ನಾನು ನಮ್ಮ ಮೊದಲ ಭರವಸೆಯ ಬಗ್ಗೆ ಮಾತನಾಡಲಿದ್ದೇನೆ. ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಮಹಿಳೆಯರಿಗೆ ಶೇಕಡಾ 40 ರಷ್ಟು ಟಿಕೆಟ್ ನೀಡಲಿದೆ ಎಂದು ತಿಳಿಸಿದ್ದಾರೆ.

ನಾವು ವ್ಯವಸ್ತೆಯಲ್ಲಿ ಬದಲಾವಣೆಯನ್ನು ತರಲು ಬಯಸುತ್ತಿದ್ದೇವೆ, ಬದಲಾವಣೆ ಬಯಸುವ ಎಲ್ಲಾ ಮಹಿಳೆಯರು ನಮ್ಮ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಲು ಅವಕಾಶವಿದೆ ಸ್ಪರ್ಧಿಸಲು ಬಯಸುವ ಮಹಿಳೆಯರು ನವೆಂಬರ್‌ 15ರ ಒಳಗೆ ಅರ್ಜಿಯನ್ನು ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಅನುಸರಿಸಿದ ಕ್ರಮವನ್ನೇ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಜಾರಿ ಮಾಡುತ್ತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕ, ನಾನು ಉತ್ತರ ಪ್ರದೇಶದ ಉಸ್ತುವಾರಿಯನ್ನು ವಹಿಸಿಕೊಂಡಿದ್ದೇನೆ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಈ ಕ್ರಮವನ್ನ ಅನುಸರಿಸಿದರೆ ಸ್ವಾಗತಾರ್ಹಾ ಎಂದು ಹೇಳಿದ್ದಾರೆ.

ಈ ನಿರ್ಧಾರ ಕೈಗೊಳ್ಳಲು ಮುಖ್ಯ ಕಾರಣ ಏನೆಂದರೆ “ಉನ್ನಾವೊದಲ್ಲಿ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಗಾಗಿ, ನ್ಯಾಯ ಸಿಗದ ಹತ್ರಾಸ್‌ನ ಬಲಿಪಶುಗಾಗಿ, ನಾನು ಪ್ರಧಾನಿಯಾಗಲು ಬಯಸುತ್ತೇನೆ ಎಂದು ಹೇಳಿದ ಲಖಿಂಪುರ್ ಖೇರಿಯಲ್ಲಿ ಹಿಂಸಾಚಾರದಲ್ಲಿ ಸಾವನಪ್ಪಿದ ಪತ್ರಕರ್ತ ರಮೇಶ್‌ ಕಶ್ದಯಪ್‌ ಅವರ ಮಗಳಿಗಾಗಿ ಈ ನಿರ್ಧಾರವನ್ನ ತೆಗೆದುಕೊಳ್ಳಲಾಗಿದೆ. ಉತ್ತರ ಪ್ರದೇಶವನ್ನು ಮುಂದುವರಿಸಲು ಬಯಸುವ ಪ್ರತಿಯೊಬ್ಬ ಮಹಿಳೆಗಾಗಿ”ಎಂದು ಹೇಳಿದ್ದಾರೆ

Exit mobile version