ಮತಾಂತರ ತಡೆ ಕಾನೂನು ರದ್ದುಗೊಳಿಸಲು ರಾಜ್ಯ ಸಚಿವ ಸಂಪುಟ ನಿರ್ಧಾರ

Bengaluru : 2021ರಲ್ಲಿ ಬಿಜೆಪಿ ಆಡಳಿತದಲ್ಲಿ ಜಾರಿಗೆ ತಂದಿದ್ದ ಮತಾಂತರ ವಿರೋಧಿ ಕಾನೂನನ್ನು ರದ್ದುಗೊಳಿಸಲು ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ (Prohibition of Conversion Act) ಸಭೆ ನಿರ್ಧರಿಸಿದೆ.

ಇಂದು ನಡೆದ ಸಚಿವ ಸಂಪುಟ ಸಭೆಯ ನಂತರ ರಾಜ್ಯ ಸರ್ಕಾರ ಈ ನಿರ್ಧಾರಕ್ಕೆ (Prohibition of Conversion Act) ಬಂದಿದೆ.

ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ರಕ್ಷಣೆ ಮಸೂದೆ, 2021, ಅಥವಾ ಮತಾಂತರ ವಿರೋಧಿ ಮಸೂದೆಯನ್ನು ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಅಂಗೀಕರಿಸಲಾಗಿತ್ತು.

ಆಗ ಪ್ರತಿಪಕ್ಷ ಕಾಂಗ್ರೆಸ್ ಸಭಾತ್ಯಾಗ ನಡೆಸಿತ್ತು. ಇದೀಗ ಈ ಕಾನೂನನ್ನು ಕಾಂಗ್ರೆಸ್ ರದ್ದು ಮಾಡಲು ಸಿದ್ದತೆ ನಡೆಸಿದೆ.

ಬಿಜೆಪಿ ಆಡಳಿತದಲ್ಲಿ ಬಲಪಂಥೀಯ ಗುಂಪುಗಳಿಗೆ ಮಾಡಿದ ಭೂ ಮಂಜೂರಾತಿ, ಪಠ್ಯಪುಸ್ತಕ ಪರಿಷ್ಕರಣೆ ಮತ್ತು ಹಿಜಾಬ್ ನಿಷೇಧದಂತಹ ಕ್ರಮಗಳನ್ನು ಪರಿಶೀಲಿಸುವುದು ಸೇರಿದಂತೆ ಹಿಂದಿನ ಬಿಜೆಪಿ

ಆಡಳಿತದ ಅಡಿಯಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಕಾಂಗ್ರೆಸ್ ಸರ್ಕಾರವು ಒದೊಂದಾಗಿ ರದ್ದು ಮಾಡಲು ಮುಂದಾಗಿದೆ.

ಪಠ್ಯ ಪರಿಷ್ಕರಣೆ : ಕಾರ್ಕೋಟ ಮತ್ತು ಅಹೋಮ್ ರಾಜವಂಶಗಳ ಪಾಠ ಕೈಬಿಟ್ಟ ಕಾಂಗ್ರೆಸ್ ಸರ್ಕಾರ..!

ರಾಜ್ಯದಲ್ಲಿ ಮತಾಂತರ ವಿರೋಧಿ ಕಾನೂನಿನಡಿಯಲ್ಲಿ ಮೊದಲ ಪ್ರಕರಣವನ್ನು 2021ರ ಅಕ್ಟೋಬರ್ನಲ್ಲಿ ದಾಖಲಿಸಲಾಯಿತು. 24 ವರ್ಷದ ಮುಸ್ಲಿಂ ಯುವಕನನ್ನು ಮದುವೆಯಾಗುವ ನೆಪದಲ್ಲಿ ಮಹಿಳೆಯನ್ನು ಮತಾಂತರಿಸಿದ

ಆರೋಪದ ಮೇಲೆ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ನಂತರ ನವೆಂಬರ್ನಲ್ಲಿ, ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದಲ್ಲಿ ಅನ್ಯ ಧರ್ಮದ ಹುಡುಗಿಗೆ ಆಮಿಷ ಒಡ್ಡಿ ಮದುವೆಗಾಗಿ ಕಿರುಕುಳ

ನೀಡಿದ ಆರೋಪದ ಮೇಲೆ ಕರ್ನಾಟಕ ಪೊಲೀಸರು ಇನ್ನೊಬ್ಬ ವ್ಯಕ್ತಿಯನ್ನು ಇದೇ ಕಾನೂನಿನಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

ಸಚಿವ ಪ್ರಿಯಾಂಕ್ ಖರ್ಗೆ ಅವರು ಹಿಂದಿನ ಬಿಜೆಪಿ ಆಡಳಿತದಲ್ಲಿ ಜಾರಿಗೊಳಿಸಲಾದ ಅನೇಕ ಆದೇಶಗಳು ಮತ್ತು ಕಾನೂನುಗಳು ರಾಜ್ಯದ ಹಿತಾಸಕ್ತಿ ವಿರುದ್ದವಾಗಿದ್ದು, ಕಾಂಗ್ರೆಸ್ ಸರ್ಕಾರದಿಂದ ಅವುಗಳನ್ನು

ಪರಿಷ್ಕರಿಸಲಾಗುತ್ತದೆ ಅಥವಾ ಹಿಂಪಡೆಯಲಾಗುವುದು ಎಂದು ಹೇಳಿದ್ದಾರೆ.

ಇನ್ನು ಮತಾಂತರ ನಿಷೇಧ ಕಾನೂನನ್ನು ರದ್ದು ಮಾಡಲು ಮುಂದಾಗಿರುವ ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು ಟೀಕಿಸಿರುವ ಬಿಜೆಪಿ, ಮತಾಂತರ ನಿಷೇಧ ಕಾನೂನನ್ನು ರದ್ದು ಮಾಡುವುದರಿಂದ,

ಬಡ ಹಿಂದೂಗಳು, ಹಣದ ಆಮೀಷಗಳಿಗೆ ಒಳಗಾಗಿ ಮತಾಂತರವಾಗುತ್ತಾರೆ. ಇದು ನಮ್ಮ ಸಂವಿಧಾನಕ್ಕೆ ವಿರುದ್ದವಾದದು ಎಂದಿದೆ.

Exit mobile version