Bengaluru: ರಾಜ್ಯ ಸಚಿವ ಸಂಪುಟ ಸಭೆ ರಾಜ್ಯ ಪಠ್ಯಪರಿಷ್ಕರಣೆ ಮಾಡಿದ್ದು, ಕಾಶ್ಮೀರ ಹಿಂದೂ ರಾಜಮನೆತನಗಳಾಗಿದ್ದ ಮತ್ತು ಮೊಘಲರೊಂದಿಗೆ (text revision congress govt) ನಿರಂತರವಾಗಿ

ಹೋರಾಟ ನಡೆಸಿದ್ದ ಕಾರ್ಕೋಟ ರಾಜಮನೆತನ ಅಹೋಮ್ ರಾಜವಂಶಗಳ ಪಾಠವನ್ನು ಪಠ್ಯದಿಂದ ಕೈಬಿಡಲಾಗಿದೆ. ಇನ್ನೊಂದೆಡೆ ಜವಾಹರಲಾಲ್ ನೆಹರು ತಮ್ಮ ಮಗಳು ಇಂದಿರಾ ಗಾಂಧಿಗೆ ಬರೆದ
ಪತ್ರವನ್ನು ಸೇರ್ಪಡೆ ಮಾಡಲಾಗಿದೆ. ಪಠ್ಯ ಪರಿಷ್ಕರಣೆ ಕುರಿತು ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ 6 ರಿಂದ 10ನೇ ತರಗತಿಯವರೆಗೆ ಸಮಾಜ ವಿಜ್ಞಾನ ಹಾಗೂ ಕನ್ನಡ ಪಠ್ಯದಲ್ಲಿ
ಫೇಸ್ಬುಕ್ ಅನ್ನು ಭಾರತದಲ್ಲಿ ಬಂದ್ ಮಾಡಿಬಿಡ್ತೇವೆ: ಹೈಕೋರ್ಟ್ ಎಚ್ಚರಿಕೆ
ಬದಲಾವಣೆ ಮಾಡಲು ಸರ್ಕಾರ ನಿರ್ಧಾರ ಮಾಡಿದೆ. ಪಠ್ಯದಿಂದ ಆರ್ಎಸ್ಎಸ್ ಸ್ಥಾಪಕ ಹೆಡ್ಗೆವಾರ್, ಬರಹಗಾರ ಚಕ್ರವರ್ತಿ ಸೂಲಿಬೆಲೆ ಪಠ್ಯಗಳನ್ನ ಕೈಬಿಟ್ಟಿದ್ದೇವೆ.
ಇದೊಂದು ತಾತ್ಕಾಲಿಕ ಬದಲಾವಣೆಯಾಗಿದೆ ಎಂದು (text revision congress govt) ತಿಳಿಸಿದ್ದಾರೆ.

ಯಾವ ಪಠ್ಯವನ್ನು ತೆಗೆದು ಹಾಕಲಾಗಿದೆ.
- ಜಮ್ಮು ಕಾಶ್ಮೀರದ ಕಾರ್ಕೋಟ ರಾಜಮನೆತನ ಮತ್ತು ಅಹೋಮ್ ರಾಜವಂಶಗಳ ಪಾಠ
- ಆರ್ಎಸ್ಎಸ್ ಸ್ಥಾಪಕ ಹೆಡ್ಗೆವಾರ್ ಅವರ ನಿಜವಾದ ಆದರ್ಶ ಪುರುಷ ಯಾರಾಗಬೇಕು ಪಠ್ಯ
- ಎಸ್.ಎಲ್. ಭೈರಪ್ಪ ಅವರು ಬರೆದಿರೋ
ನಾನು ಕಂಡಂತೆ ಬಿಜಿಎಲ್ ಸ್ವಾಮಿ’
ಸ್ವದೇಶಿ ಸೂತ್ರದ ಸರಳ ಹಬ್ಬ ಮಂಜೇಶ್ವರ ಗೋವಿಂದ್ ಪೈ ರಚಿತ
ನಾನು ಪ್ರಾಸ ಬಿಟ್ಟ ಕಥೆ’- ಚಕ್ರವರ್ತಿ ಸೂಲಿಬೆಲೆ ರಚಿತ ತಾಯಿ ಭಾರತೀಯ ಅಮರಪುತ್ರರು\
- ವೀರ ಸಾವರ್ಕರ್ ಕುರಿತ ಕಾಲವನ್ನು ಗೆದ್ದವರು ಪಾಠ
- ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯರ ಪಠ್ಯ
ಬಹುಮಾನ’ ಪದ್ಯ ಮತ್ತು
ಬೊಮ್ಮನಹಳ್ಳಿ ಕಿಂದರ ಜೋಗಿ’- ಸೀಗಡಿ ಯಾಕೆ ಒಣಗಲಿಲ್ಲ’ ಮಕ್ಕಳ ಕಥೆ- ಪಂಜೆ ಮಂಗೇಶರಾಯರು ರಚಿತ
ಯಾವುದು ಸೇರ್ಪಡೆ?
ನೆಹರೂ ತಮ್ಮ ಮಗಳಿಗೆ ಬರೆದಿದ್ದ ಪತ್ರದ ಕುರಿತ `ಮಗಳಿಗೆ ಬರೆದ ಪತ್ರ’
ಪಠ್ಯ ಪರಿಷ್ಕರಣೆಯನ್ನು ಟೀಕಿಸಿರುವ ಬಿಜೆಪಿ ಕಾಂಗ್ರೆಸ್ ತನ್ನ ಗುಲಾಮಗಿರಿ ಸಂಸ್ಕೃತಿಗೆ ಗಂಟು ಬಿದ್ದು ಕಳೆದ ಅನೇಕ ವರ್ಷಗಳಿಂದ ಪಠ್ಯದಲ್ಲಿರುವ ನೆಹರೂ ಅವರು ತಮ್ಮ ಮಗಳಿಗೆ ಬರೆದ ಪತ್ರವನ್ನು ಮತ್ತೆ ಪಠ್ಯದಲ್ಲಿ ಸೇರ್ಪಡೆ
ಮಾಡಿದೆ. ದೇಶಭಕ್ತಿ ಸಾರುವಂತ ಪಠ್ಯಗಳನ್ನು ಕೈಬಿಟ್ಟು, ನೆಹರು ತಮ್ಮ ಮಗಳಿಗೆ ಬರೆದ ಪತ್ರವನ್ನು ಸೇರ್ಪಡೆ ಮಾಡಿರುವುದು ಕಾಂಗ್ರೆಸ್ನ ಗುಲಾಮಗಿರಿಯ ಸಂಕೇತವಾಗಿದೆ ಎಂದು ವಾಗ್ದಾಳಿ ನಡೆಸಿದೆ.