ಜೂನ್ 03ರ ಹಿಂಸಾಚಾರದ ಪ್ರತಿಭಟನೆಯಲ್ಲಿ ಭಾಗಿಯಾದವರ ಮನೆಯನ್ನು ನೆಲಸಮಗೊಳಿಸಲು ಬುಲ್ಡೋಜ಼ರ್ ಎಂಟ್ರಿ!

ಉತ್ತರ ಪ್ರದೇಶದ(Uttarpradesh) ಕಾನ್ಪುರದಲ್ಲಿ(Kanpur) ಪ್ರವಾದಿ(Prophet) ಹೇಳಿಕೆಗೆ ಸಂಬಂಧಿಸಿದಂತೆ ಹಿಂಸಾಚಾರ(Voilence) ಭುಗಿಲೆದ್ದ ಒಂದು ವಾರದ ನಂತರ, ನಗರದ ಬೀದಿಗಳಲ್ಲಿ ಬುಲ್ಡೋಜರ್‌ಗಳು(Bulldozer) ರಸ್ತೆಗೆ ಇಳಿದವು.

ದುಷ್ಕರ್ಮಿಗಳಿಗೆ ಸಂಬಂಧಿಸಿದ ಆಸ್ತಿಗಳನ್ನು ಬುಲ್ಡೋಜರ್ ನೆಲಸಮ ಮಾಡಲು ಹಾಜರಾಗಿವೆ. ನಿನ್ನೆ ನಡೆದ ಹಿಂಸಾಚಾರದ ಪ್ರಮುಖ ಆರೋಪಿ ಸ್ಥಳೀಯ ಮುಸ್ಲಿಂ ಮುಖಂಡ ಜಾಫರ್ ಹಯಾತ್ ಹಶ್ಮಿ ಎನ್ನಲಾಗಿದೆ. ಬುಲ್ಡೋಜರ್‌ಗಳು ಜಾಫರ್ ಹಯಾತ್ ಹಶ್ಮಿ ಅವರ ನಿವಾಸದ ಬಾಗಿಲುಗಳನ್ನು ಕೆಡವಲು ತಲುಪಿವೆ. ಡೆಮಾಲಿಷನ್ ಡ್ರೈವ್(Demolition Drive) ನಡೆಸುತ್ತಿರುವ ಸ್ಥಳದಲ್ಲಿ ಪೊಲೀಸರು ಮತ್ತು ಆಡಳಿತ ಭಧ್ರತೆಯೊಂದಿಗೆ ಹಾಜರಾಗಿದೆ.

ಜೂನ್ 3 ರಂದು ಕಾನ್ಪುರದಲ್ಲಿ ಬಿಜೆಪಿ ನಾಯಕಿ ನೂಪುರ್ ಶರ್ಮಾ(Nupur Sharma) ಅವರು ಪ್ರವಾದಿ ಮೊಹಮ್ಮದ್ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಮುಸ್ಲಿಂ ಸಂಘಟನೆಯೊಂದು ನಗರದ ಅತಿದೊಡ್ಡ ಸಗಟು ಮಾರುಕಟ್ಟೆಗಳಲ್ಲಿ ಒಂದಾದ ಪರೇಡ್ ಮಾರ್ಕೆಟ್‌ನಲ್ಲಿ ಅಂಗಡಿಗಳನ್ನು ಮುಚ್ಚಲು ಕರೆ ನೀಡಿದ ನಂತರ ಹಿಂಸಾತ್ಮಕ ಘರ್ಷಣೆಗಳು ಮತ್ತು ಕಲ್ಲು ತೂರಾಟಗಳು ನಡೆದವು. ಡಿಸಿಪಿ ಸಂಜೀವ್ ತ್ಯಾಗಿ ನೇತೃತ್ವದ ಎಂಟು ಸದಸ್ಯರ ವಿಶೇಷ ತನಿಖಾ ತಂಡ (SIT) ಈ ಬಗ್ಗೆ ತನಿಖೆ ನಡೆಸುತ್ತಿದೆ.

ಉತ್ತರ ಪ್ರದೇಶದ ಎಂಎಲ್‌ಸಿ ಮತ್ತು ಬಿಜೆಪಿ ನಾಯಕ ಮೊಹ್ಸಿನ್ ರಜಾ ಅವರು ಘರ್ಷಣೆಗಳು ಪೂರ್ವ ಯೋಜಿತ ಎಂದು ಹೇಳಿದ್ದಾರೆ.

Exit mobile version