ವಿಷಜಂತುಗಳಿಂದ ನಮ್ಮನ್ನು ರಕ್ಷಿಸಿ… ವಿದ್ಯುತ್‌ ಸರಿಪಡಿಸಿ! ವಿದ್ಯುತ್‌ ಇಲ್ಲದೇ ಹರಸಾಹಸ ಪಡುತ್ತಿರುವ ಭಾಲ್ಕಿಯ ಜನ

ವಿದ್ಯುತ್‌ ಸರಿಪಡಿಸಿ... ವಿಷಜಂತುಗಳಿಂದ ನಮ್ಮನ್ನು ರಕ್ಷಿಸಿ...!

ಈ ಪರಿಯಲ್ಲಿ ವಿದ್ಯುಚ್ಛಕ್ತಿಯ ತಾರತಮ್ಯ ನಡೆಯುತ್ತಿರುವುದು ಭಾಲ್ಕಿ ಬಡಾವಣೆಯ ಬಸವನಗರದಲ್ಲಿ.. ಸರಿಸುಮಾರು 15 ದಿನಗಳಿಂದ ಬೀದರ್‌ ಜಿಲ್ಲೆಯ ಭಾಲ್ಕಿ ಬಡಾವಣೆಯ ಬಸವನಗರದ ಜನರು ವಿದ್ಯುತ್‌ ಇಲ್ಲದೇ ಪರದಾಡುತ್ತಿದ್ದಾರೆ. ಆದರೂ ಅಧಿಕಾರಿಗಳಿಗೆ ಮಾತ್ರ ಕಣ್ಣು ಕಾಣಿಸುತ್ತಿಲ್ಲ.

ವಿದ್ಯುತ್‌ ಇಲ್ಲದೇ ನಮ್ಮ ಸ್ಥಿತಿಯನ್ನು ಕೇಳುವವರೇ ಇಲ್ಲದಾಗಿದೆ. ಏಕೆಂದರೆ ನಮ್ಮ ಮನೆಗಳಲ್ಲಿ ವಿಷಕಾರಿ ಹಾವು, ಚೇಳುಗಳು ಸೇರಿಕೊಳ್ಳುತ್ತಿವೆ. ಈ ಜಂತುಗಳು ಯಾರಿಗಾದರೂ ಕಚ್ಚಿ ಆಸ್ಪತ್ರೆ ಸೇರಿದರೆ, ಆಸ್ಪತ್ರೆಯ ಖರ್ಚು ಭರಿಸುವರಾರು? ಎಂಬುದು ಇಲ್ಲಿನ ಸಾರ್ವಜನಿಕರ ಗೋಳಾಗಿದೆ.

ಏಕೆಂದರೆ ಈ ಬಡಾವಣೆಯ ಸುತ್ತಮುತ್ತಲು ಹೊಲ ಗದ್ದೆಗಳು ಆವೃತಗೊಂಡಿರುವುದರಿಂದ, ಪೊದೆಗಳಿಂದ ಹಾವು, ಚೇಳುಗಳಂತಹ ವಿಷಕಾರಿ ಜಂತುಗಳು ಮನೆಯೊಳಗೆ ಹೊಕ್ಕುವುದು ಸರ್ವೇ ಸಾಮಾನ್ಯ. ಏಕೆಂದರೆ ಈ ರೀತಿಯ ಘಟನೆಯೊಂದು ಇತ್ತೀಚೆಗಷ್ಟೆ ನಡೆದಿದೆ. ಹೆಬ್ಬಾವೊಂದು ಮನೆಯೊಳಗೆ ಸೇರಿಕೊಂಡಿದೆ. ಇದರಿಂದಾಗಿ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಒಟ್ಟಾರೆಯಾಗಿ ವಿಷಕಾರಿ ಜಂತುಗಳಿಂದ ತಪ್ಪಿಸಿಕೊಂಡು ಕುಟುಂಬವನ್ನು ರಕ್ಷಿಸಿಕೊಳ್ಳುವುದು ತಲೆನೋವಾಗಿ ಪರಿಣಮಿಸಿದೆ ಎಂಬುದು ಗ್ರಾಮಸ್ಥರ ಕೂಗಾಗಿದೆ.

ಈಗಾಗಲೇ ಈ ವಿಚಾರವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ವಿಸ್ತೃತ ರೂಪದಲ್ಲಿ ತಿಳಿಸಲಾಗಿದೆ. ಆದರೂ ಅಧಿಕಾರಿಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಜತೆಗೆ ಸಮಸ್ಯೆಯನ್ನು ಪರಿಹರಿಸುವ ಪ್ರಯತ್ನದಲ್ಲಿಯೂ ತಲೆ ಹಾಕುತ್ತಿಲ್ಲ.

ಇದರಿಂದ ನೊಂದ ಗ್ರಾಮಸ್ಥರು ಭಾಲ್ಕಿಯ ಗೆಸ್ಕಾಮ್‌ ಮುಖ್ಯ ಕಚೇರಿಯ ಎದುರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಆದರೆ ಯಾವುದೇ ರೀತಿಯ ಪರಿಹಾರವು ಜನತೆಗೆ ದಕ್ಕದಂತಾಗಿದೆ.

ಒಟ್ಟಾರೆಯಾಗಿ ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ, ಈ ಸಮಸ್ಯೆಗೆ ಸೂಕ್ತ ಪರಿಹಾರ ನೀಡಬೇಕಾಗಿದೆ. ಇಲ್ಲವೇ ಪಯರ್ಯಾಯ ವ್ಯವಸ್ಥೆಯನ್ನಾದರೂ ಕಲ್ಪಿಸಲಿ ಎಂಬುದು ಸಾರ್ವಜನಿಕರ ಹಾಗೂ ವಿಜಯಾ ಟೈಮ್ಸ್‌ ವಾಹಿನಿಯ ಆಶಯವಾಗಿದೆ.

ಬೀದರ್‌ನಿಂದ ಸಿಟಿಜನ್‌ ಜರ್ನಲಿಸ್ಟ್‌ ಪವನ್‌ ಸಾಳಂಕೆ

Exit mobile version