Visit Channel

ಮಳೆಗಾಲದಲ್ಲಿ ಈ ರೋಗಗಳಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳಿ

download

ನಾವೆಲ್ಲಾ ಇದೀಗ ಮಳೆಗಾಲವನ್ನು ಆನಂದಿಸುತ್ತಿದ್ದೇವೆ. ಜೋರಾಗಿ ಸುರಿಯುವ ಮಳೆ ಖುಷಿ, ಸಂತೋಷವನ್ನ ತರುವುದರ ಜೊತೆಗೆ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಗೂ ಆಹ್ವಾನ ಮಾಡುವುದು. ಕೊರೊನಾದಂತಹ ಸಾಂಕ್ರಾಮಿಕದ ನಡುವೆ ಈ ಮಳೆಗಾಲದ ರೋಗಗಳು ನಮ್ಮನ್ನ ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸುತ್ತವೆ. ಆದ್ದರಿಂದ ಇಂತಹ ರೋಗಗಳಿಂದ ಮಳೆಗಾಲದಲ್ಲಿ ನಮ್ಮನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು. ನಾವು ಜಾಗರೂಕರಾಗಿಬೇಕಾದ ಕೆಲವು ಮಾನ್ಸೂನ್ ಕಾಯಿಲೆಗಳ ಪಟ್ಟಿ ಇಲ್ಲಿದೆ.

ಸೊಳ್ಳೆಯಿಂದ ಹರಡುವ ರೋಗಗಳು:
ಮಾನ್ಸೂನ್ ಅಥವಾ ಮಳೆಗಾಲ ಸೊಳ್ಳೆಗಳ ಸಂತಾನೋತ್ಪತ್ತಿ ಕಾಲ. ಆದ್ದರಿಂದ ಈ ಕಾಲದಲ್ಲಿ ಹಲವಾರು ರೋಗಗಳಿಗೆ ಕಾರಣವಾಗಬಹುದು. ಜಾಗತಿಕವಾಗಿ ಡೆಂಗ್ಯೂ ಶೇಕಡಾ 34 ಮತ್ತು ಮಲೇರಿಯಾ ಪ್ರಕರಣಗಳಲ್ಲಿ 11 ಪ್ರತಿಶತ ಭಾರತದಿಂದ ದಾಖಲಾಗುತ್ತಿದೆ.

ಮಲೇರಿಯಾ:
ಮಲೇರಿಯಾವು ಪ್ಲಾಸ್ಮೋಡಿಯಮ್ ಎಂಬ ಏಕಕೋಶೀಯ ಪರಾವಲಂಬಿಯಿಂದ ಬರುವುದು. ಇದು ಮಳೆಗಾಲದಲ್ಲಿ ಕಂಡುಬರುವ ಆರೋಗ್ಯದ ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿದೆ. ನೀರಿನ ಕಾಲುವೆಗಳು ಮತ್ತು ತೊರೆಗಳಲ್ಲಿ ಸೊಳ್ಳೆಗಳ ಉತ್ಪತ್ತಿಯಿಂದ ಉಂಟಾಗುತ್ತಿದ್ದು, ಹಲವಾರು ದಿನಗಳವರೆಗೆ ಜ್ವರ ಬರುತ್ತದೆ.

ಡೆಂಗ್ಯೂ:
ಡೆಂಗ್ಯೂವು ಈಡಿಸ್ ಈಜಿಪ್ಟಿ ಸೊಳ್ಳೆಯಿಂದ ಉಂಟಾಗುತ್ತದೆ. ಇದು ನಿಂತ ಅಥವಾ ಶೇಖರಣೆಯಾದ ನೀರಿನಲ್ಲಿ (ಬಕೆಟ್, ಡ್ರಮ್ಸ್, ಬಾವಿಗಳು, ಮರದ ರಂಧ್ರಗಳು ಮತ್ತು ಹೂವಿನ ಮಡಿಕೆಗಳು) ಸಂತಾನೋತ್ಪತ್ತಿ ಮಾಡುತ್ತದೆ. ಕಚ್ಚಿದ ನಾಲ್ಕರಿಂದ ಏಳು ದಿನಗಳ ನಂತರ ಡೆಂಗ್ಯೂ ಬರಲಿದ್ದು, ಮೊದಲ ಲಕ್ಷಣ ಜ್ವರ ಮತ್ತು ಆಯಾಸವನ್ನು ಒಳಗೊಂಡಿದೆ.

ಚಿಕುನ್ ಗುನ್ಯಾ:
ಚಿಕುನ್ ಗುನ್ಯಾವು ಈಡಿಸ್ ಅಲ್ಬೋಪಿಕ್ಟಸ್ ಸೊಳ್ಳೆಯಿಂದ ಉಂಟಾಗುವುದಲ್ಲದೇ, ಇದು ಮಾರಣಾಂತಿಕವಲ್ಲದ ವೈರಲ್ ಕಾಯಿಲೆಯಾಗಿದೆ. ಈ ಸೊಳ್ಳೆಗಳು ನಿಂತ ನೀರಿನಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ಈ ಸೊಳ್ಳೆಗಳು ರಾತ್ರಿಯ ಸಮಯದಲ್ಲಿ ಮಾತ್ರವಲ್ಲದೆ ಹಗಲಿನಲ್ಲಿಯೂ ನಿಮ್ಮನ್ನು ಕಚ್ಚುತ್ತವೆ.

ಸೊಳ್ಳೆಯಿಂದ ಹರಡುವ ರೋಗಗಳಿಂದ ಸುರಕ್ಷಿತವಾಗಿರಲು ಸಲಹೆಗಳು:

 • ನಿಮ್ಮ ಮನೆಯಲ್ಲಿ ಸೊಳ್ಳೆ ಪರದೆಗಳನ್ನು ಬಳಸಿ
 • ಮನೆಯ ಸುತ್ತಲೂ ಅಥವಾ ಮನೆಯಲ್ಲಿಯೂ ನೀರು ಸಂಗ್ರಹಿಸಲು ಅಥವಾ ನಿಲ್ಲಲು ಬಿಡಬೇಡಿ
 • ಸರಿಯಾದ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ ಮತ್ತು ನಿಮ್ಮ ಮನೆಯನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ
 • ನೀವು ಮನೆಯಿಂದ ಹೊರಬರುವ ಮೊದಲು ಅಥವಾ ಒಳಗೆ ಇರುವಾಗಲೂ ಸೊಳ್ಳೆ ನಿವಾರಕಗಳು / ಕ್ರೀಮ್‌ಗಳನ್ನು ಬಳಸಿ

ನೀರಿನಿಂದ ಹರಡುವ ರೋಗಗಳು ಹೀಗಿವೆ:
ಮಳೆಗಾಲದಲ್ಲಿ ನೀರಿನಿಂದ ಹರಡುವ ರೋಗಗಳು ಮತ್ತೊಂದು ಸಾಮಾನ್ಯ ಸಮಸ್ಯೆಯಾಗಿದೆ. ಮಕ್ಕಳು ಈ ರೋಗಗಳಿಗೆ ಸುಲಭವಾಗಿ ಬಲಿಯಾಗುತ್ತಾರೆ ಏಕೆಂದರೆ ಅವರ ರೋಗ ನಿರೋಧಕ ಶಕ್ತಿ ದುರ್ಬಲವಾಗಿರುತ್ತದೆ. ನೀರಿನಿಂದ ಹರಡುವ ಕೆಲವು ಸಾಮಾನ್ಯ ರೋಗಗಳು ಹೀಗಿವೆ:
ಟೈಫಾಯಿಡ್:
ಎಸ್. ಟೈಫಿ ಬ್ಯಾಕ್ಟೀರಿಯಾದಿಂದ ಉಂಟಾಗುವ ಟೈಫಾಯಿಡ್ ನೀರಿನಿಂದ ಹರಡುವ ರೋಗವಾಗಿದ್ದು, ಇದು ನೈರ್ಮಲ್ಯದ ಕೊರತೆಯಿಂದ ಉಂಟಾಗುವುದು. ತೆರೆದ ಅಥವಾ ಹಾಳಾದ ಆಹಾರವನ್ನು ಸೇವಿಸುವುದು ಅಥವಾ ಕಲುಷಿತ ನೀರನ್ನು ಕುಡಿಯುವುದು ಟೈಫಾಯಿಡ್ ನ ಎರಡು ಪ್ರಮುಖ ಕಾರಣಗಳಾಗಿವೆ. ತಲೆನೋವು, ಕೀಲು ನೋವು, ಜ್ವರ ಮತ್ತು ಗಂಟಲು ನೋವು ಟೈಫಾಯಿಡ್ ನ ಲಕ್ಷಣಗಳಾಗಿವೆ.

ಕಾಲರಾ:
ಕಳಪೆ ನೈರ್ಮಲ್ಯ ಮತ್ತು ಕಲುಷಿತ ಆಹಾರದ ಕಾರಣದಿಂದಾಗಿ, ಕಾಲರಾವು ಉಂಟಾಗಬಹುದು.

ಕಾಮಾಲೆ( ಹಳದಿ ಕಾಯಿಲೆ):
ಕಳಪೆ ನೈರ್ಮಲ್ಯ, ಕಲುಷಿತ ನೀರು ಮತ್ತು ಆಹಾರದಿಂದ ಕಾಮಾಲೆ ಉಂಟಾಗುತ್ತದೆ. ಇದು ಆಯಾಸ, ಹಳದಿ ಮೂತ್ರ, ವಾಂತಿ ಮತ್ತು ಹಳದಿ ಕಣ್ಣುಗಳಂತಹ ಲಕ್ಷಣಗಳನ್ನು ಹೊಂದಿರುತ್ತದೆ.

ಹೆಪಟೈಟಿಸ್ ಎ:
ಇದು ವೈರಲ್ ಸೋಂಕು, ಇದು ಕಲುಷಿತ ಆಹಾರ ಮತ್ತು ನೀರಿನಿಂದ ಹರಡುತ್ತದೆ. ಇದು ನಿಮ್ಮ ಯಕೃತ್ತನ್ನು ಹಾನಿಗೊಳಿವುದಲ್ಲದೇ, ಉಬ್ಬುವಿಕೆಗೆ ಕಾರಣವಾಗುವುದು. ಹೆಪಟೈಟಿಸ್ ನ ಲಕ್ಷಣಗಳು ಆಯಾಸ, ಜ್ವರ, ಹಳದಿ ಕಣ್ಣುಗಳು, ಹೊಟ್ಟೆಯ ಮೃದುತ್ವ, ಗಾಢ ಬಣ್ಣದ ಮೂತ್ರ ಮತ್ತು ಹಸಿವಿಲ್ಲದಿರುವುದು.

ನೀರಿನಿಂದ ಹರಡುವ ರೋಗಗಳಿಂದ ಸುರಕ್ಷಿತವಾಗಿರಲು ಸಲಹೆಗಳು:

 • ಸೇವಿಸುವ ಮೊದಲು ಹಣ್ಣುಗಳು ಮತ್ತು ತರಕಾರಿಗಳನ್ನು ಚೆನ್ನಾಗಿ ತೊಳೆಯಿರಿ
 • ಆಹಾರವನ್ನು ಮುಚ್ಚಿಡಿ
 • ಹೊರಗಿನ ಆಹಾರವನ್ನು ಸೇವಿಸಬೇಡಿ
 • ವೈಯಕ್ತಿಕ ಮತ್ತು ಪರಿಸರ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ. ನಿಮ್ಮ ಕೈಗಳನ್ನು ಆಗಾಗ್ಗೆ ತೊಳೆಯಿರಿ
 • ನಿಮ್ಮ ಮಕ್ಕಳಿಗೆ ಸಮಯಕ್ಕೆ ಲಸಿಕೆ ನೀಡಿ

ಗಾಳಿಯಿಂದ ಹರಡುವ ರೋಗಗಳು:
ರೋಗನಿರೋಧಕ ಶಕ್ತಿ ದುರ್ಬಲವಾಗಿರುವುದರಿಂದ, ಮಕ್ಕಳು ಮತ್ತು ವೃದ್ಧರು ಮಳೆಗಾಲದಲ್ಲಿ ಗಾಳಿಯಿಂದ ಹರಡುವ ಸೋಂಕನ್ನು ಪಡೆಯುವ ಸಾಧ್ಯತೆ ಹೆಚ್ಚು. ಗಾಳಿಯಿಂದ ಹರಡುವ ಎರಡು ಸಾಮಾನ್ಯ ವಿಧಗಳು.

ಶೀತ ಮತ್ತು ಜ್ವರ:
ಶೀತ ಮತ್ತು ಜ್ವರವು ಸಾಮಾನ್ಯ ವೈರಲ್ ಸೋಂಕುಗಳಾಗಿದ್ದು, ಮಳೆಗಾಲದಲ್ಲಿ ತಾಪಮಾನದಲ್ಲಿನ ಹಠಾತ್ ಏರಿಳಿತದಿಂದಾಗಿ ಉಂಟಾಗುತ್ತದೆ. ದುರ್ಬಲ ರೋಗನಿರೋಧಕ ಶಕ್ತಿಯು ಈ ಸಣ್ಣ ಸೋಂಕುಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚು, ಇದು ಮೂಗು ಸೋರುವಿಕೆ, ಗಂಟಲು ನೋವು, ಕಣ್ಣಿನಲ್ಲಿ ನೀರು ಬರುವುದು, ಜ್ವರ ಮತ್ತು ಶೀತಗಳಿಂದ ಕೂಡಿದೆ.

ಇನ್ಫ್ಲುಯೆನ್ಸ:
ಸಾಮಾನ್ಯವಾಗಿ ಫ್ಲೂ ಎಂದು ಕರೆಯಲ್ಪಡುವ ಇನ್ಫ್ಲುಯೆನ್ಸ ವ್ಯಕ್ತಿಯಿಂದ ವ್ಯಕ್ತಿಗೆ ಸುಲಭವಾಗಿ ಹಾಗೂ ಗಾಳಿಯ ಮೂಲಕ ಹರಡುತ್ತದೆ.
ಗಾಳಿಯಿಂದ ಹರಡುವ ರೋಗಗಳಿಂದ ಸುರಕ್ಷಿತವಾಗಿರಲು ಸಲಹೆಗಳು:

 • ಕೆಮ್ಮುವಾಗ ಅಥವಾ ಸೀನುವಾಗ ನಿಮ್ಮ ಬಾಯಿ ಮತ್ತು ಮೂಗನ್ನು ಮುಚ್ಚಿ
 • ಕೆಲವು ಗಂಟೆಗಳಿಗೊಮ್ಮೆ ಬೆಚ್ಚಗಿನ ನೀರನ್ನು ಕುಡಿಯಿರಿ
 • ಈಗಾಗಲೇ ಸೋಂಕಿಗೆ ಒಳಗಾದ ಜನರಿಂದ ನಿಮ್ಮ ಮಕ್ಕಳನ್ನು ದೂರವಿಡಿ
 • ನೀವು ಮನೆಗೆ ಹಿಂತಿರುಗಿದ ನಂತರ ಕೈ ಕಾಲುಗಳನ್ನು ಚೆನ್ನಾಗಿ ತೊಳೆಯುವುದು ಖಚಿತಪಡಿಸಿಕೊಳ್ಳಿ

Latest News

Dakshina Kannada
ರಾಜ್ಯ

ಎಚ್ಚರ! ಅಪಾಯದಲ್ಲಿದೆ ದ.ಕ ಜಿಲ್ಲೆಯ ಬಂಟ್ವಾಳ ಕಿಂಡಿ ಅಣೆಕಟ್ಟು ಸೇತುವೆ

ಕಿಂಡಿ ಅಣೆಕಟ್ಟು ಹಾಗೂ ಸೇತುವೆಯ ಕಾಮಗಾರಿಯ ಕರ್ಮಕಾಂಡ. ಕಾಮಗಾರಿ ಪೂರ್ಣ ಆಗುವ ಮೊದಲೇ ತಡೆಗೋಡೆಯ ಕಾಮಗಾರಿಯ ಅಡಿಪಾಯನೇ ಕಿತ್ತು ಹೊರಗೆ ಬಂದಿದೆ!

BJP
ರಾಜಕೀಯ

ಬಿಜೆಪಿ ನಾಯಕರು ನಮಗೆ ದೇಶಪ್ರೇಮದ ಪಾಠ ಮಾಡುವುದು ಆತ್ಮವಂಚನೆಯಾಗುತ್ತದೆ : ಸಿದ್ದರಾಮಯ್ಯ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಕರಾವಳಿಯಲ್ಲಿ ಹತ್ಯೆಗೀಡಾದ ಪ್ರವೀಣ್ ನೆಟ್ಟಾರು(Praveen Nettaru) ಮನೆಗೆ ಮಾತ್ರ ಹೋಗಿ ಪರಿಹಾರ ಕೊಟ್ಟಿದ್ದಾರೆ.

Malyalam
ಮನರಂಜನೆ

ನಟನೆಯಲ್ಲಿ ಸೋಲನ್ನು ಕಂಡರೂ ಕುಗ್ಗದೆ, ಇಂದು ಭಾರತ ಚಿತ್ರರಂಗವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ನಟ ಫಹಾದ್ ಫಾಸಿಲ್!

ಫಹಾದ್ ಸಿನಿಮಾಗಳು ತಕ್ಕಮಟ್ಟಿಗೆ ಹಿಟ್ ಎನಿಸಿದರೂ, ಇವರ ಈಗಿನ ಸಿನಿಮಾ ಪ್ರಸಿದ್ಧಿಗೆ ಹೋಲಿಸಿದರೆ ಹಿಂದಿನ ಸಿನಿಮಾಗಳು ಏನೇನೂ ಆಗಿರಲಿಲ್ಲ.

Kabbadi Player
ದೇಶ-ವಿದೇಶ

ಪಲ್ಟಿ ಹೊಡೆಯುವ ಯತ್ನದಲ್ಲಿ ಕುಸಿದು ಬಿದ್ದು ಕಬಡ್ಡಿ ಆಟಗಾರ ಸಾವು! ; ವೀಡಿಯೋ ವೈರಲ್

ಕಬಡ್ಡಿ(Kabbadi) ಆಟಗಾರರೊಬ್ಬ ಸೋಮರ್ ಸಾಲ್ಟ್ ಹೊಡೆಯುತ್ತಿದ್ದಾಗ ಕುಸಿದು ಬಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ(Hospital) ಮೃತಪಟ್ಟಿದ್ದಾರೆ.