ಮಹತ್ವದ ಬೆಳವಣಿಗೆಯೊಂದರಲ್ಲಿ ಪಬ್‍ಜೀ ಸೇರಿದಂತೆ ಚೀನಾದ 118 ಮೊಬೈಲ್ ಅಪ್ಲಿಕೇಷನ್‍ಗಳನ್ನು ಕೇಂದ್ರದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಬ್ಯಾನ್ ಮಾಡಿದೆ.
ಈ ಆ್ಯಪ್‍ಗಳು ದೇಶದ ಸಾರ್ಮಭೌಮತ್ವ ಹಾಗೂ ಸಮಗ್ರತೆಗೆ ಧಕ್ಕೆಯುಂಟು ಮಾಡುವ ಹಾಗೂ ದೇಶದ ಭದ್ರತೆ ದೃಷ್ಟಿಯಲ್ಲೂ ಮಾರಕವಾಗಿರುವ ಬಗ್ಗೆ ರಾಜ್ಯ ಮತ್ತು ಸಾರ್ವಜನಿಕ ಭದ್ರತಾ ವಿಭಾಗ ಈ ಹಿಂದೆಯೇ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಚೀನಾ ಮೊಬೈಲ್ ಆ್ಯಪ್‍ಗಳನ್ನು ಬ್ಯಾನ್ ಮಾಡಲು ತೀರ್ಮಾನಿಸಿದ್ದು, ಇದರೊಂದಿಗೆ ಒಟ್ಟು 224 ಚೀನಾ ಮೂಲದ ಮೊಬೈಲ್ ಅಪ್ಲಿಕೇಷನ್‍ಗಳು ಕೇಂದ್ರ ಸರ್ಕಾರ ಬ್ಯಾನ್ ಮಾಡಿದಂತಾಗಿದೆ.
ಸದ್ಯ ಬ್ಯಾನ್ ಮಾಡಲಾಗಿರುವ ಚೀನಾ ಮೂಲದ 118 ಮೊಬೈಲ್ ಆ್ಯಪ್‍ಗಳನ್ನು ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆ 69ಎ ಅಡಿಯಲ್ಲಿ ಬ್ಯಾನ್ ಮಾಡಲಾಗಿದೆ. ದೇಶದ ಭದ್ರತಾ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.