ಪುನೀತ್‌ ರಸ್ತೆ ನಾಮಕರಣ ಪ್ಲೆಕ್ಸ್‌ನಲ್ಲಿ ಪುನೀತ್‌ ಪೋಟೋ ಮಾಯ ; ಆಭಿಮಾನಿಗಳ ಆಕ್ರೋಶ

Bengaluru : ಬೆಂಗಳೂರು ನಗರದ ರಸ್ತೆಯೊಂದಕ್ಕೆ ಕರ್ನಾಟಕ ರತ್ನ ಪುನೀತ್‌ರಾಜ್‌ಕುಮಾರ್‌ (Puneeth Road Flex controversy) ಅವರ ಹೆಸರಿಡುವ ಕಾರ್ಯಕ್ರಮ ನಡೆಯಲಿದೆ. 

ಅಚ್ಚರಿ ಎಂದರೆ ರಸ್ತೆಗೆ ಪುನೀತ್‌ ರಾಜ್‌ಕುಮಾರ್‌ ಅವರ  ಹೆಸರಿಡುವ ಕಾರ್ಯಕ್ರಮದ ಪ್ಲೆಕ್ಸ್‌ನಲ್ಲಿ ಪುನೀತ್‌ರಾಜ್‌ಕುಮಾರ್‌ ಅವರ ಪೋಟೋವೇ ಇಲ್ಲ. ಬದಲಾಗಿ ರಾಜಕೀಯ ನಾಯಕರ ಪೋಟೋಗಳೇ ರಾರಾಜಿಸುತ್ತಿವೆ.

ಈ ಪ್ಲೆಕ್ಸ್‌ನ ಪೋಟೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್‌ಆಗುತ್ತಿದ್ದಂತೆ ಪುನೀತ್‌ರಾಜಕುಮಾರ ಅವರ ಅಭಿಮಾನಿಗಳು ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಸೂರು(Mysore) ರಸ್ತೆಯಿಂದ ಬನ್ನೇರುಘಟ್ಟವರೆಗಿನ ರಸ್ತೆಗೆ ಪುನೀತ್ ರಾಜಕುಮಾರ ಅವರ ಹೆಸರನ್ನು ಇಡಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai),

ಕಂದಾಯ ಸಚಿವ ಆರ್. ಅಶೋಕ, ಸಂಸದ ತೇಜಸ್ವಿ ಸೂರ್ಯಾ ಆಗಮಿಸಲಿದ್ದಾರೆ. ಆದರೆ ಕಾರ್ಯಕ್ರಮದ ಪ್ಲೆಕ್ಸ್‌ನಲ್ಲಿ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಆರ್.‌ಅಶೋಕ, ಸಂಸದ ತೇಜಸ್ವಿ ಸೂರ್ಯ ಅವರ

ಪೋಟೋಗಳ ಜೊತೆಗೆ ಪ್ರಧಾನಿ ನರೇಂದ್ರ  ಮೋದಿ (Puneeth Road Flex controversy) ಅವರ ಪೋಟೋವನ್ನು ಹಾಕಲಾಗಿದೆ.

ಇದನ್ನೂ ಓದಿ: ಟರ್ಕಿ , ಸಿರಿಯಾದಲ್ಲಿ ಭಾರೀ ಭೂಕಂಪಕ್ಕೆ 4,300ಕ್ಕೂ ಅಧಿಕ ಬಲಿ ! ಭಾರತದಿಂದ ಸಹಾಯ ಹಸ್ತ

ಆದರೆ ಪ್ಲೆಕ್ಸ್‌ನಲ್ಲಿ ಎಲ್ಲಿಯೂ ಪುನೀತ್‌ ಅವರ ಪೋಟೋವನ್ನೇ ಹಾಕಿಲ್ಲ. ಇದಕ್ಕೆ ಅಭಿಮಾನಿಗಳ ವಲಯದಿಂದ ಟೀಕೆ ವ್ಯಕ್ತವಾಗಿದೆ. ಯಾರಿಗೋಸ್ಕರ ಕಾರ್ಯಕ್ರಮ ಮಾಡಲಾಗುತ್ತಿದೆಯೋ ಅವರ ಫೋಟೋವನ್ನು ಎಲ್ಲಿಯೂ ಹಾಕಿಲ್ಲ ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕಾರ್ಯಕ್ರಮದ ಆಯೋಜಕರ ವಿರುದ್ದ ಪುನೀತ್‌ ಅಭಿಮಾನಿಗಳು (Punith Fans) ಬೇಸರ ವ್ಯಕ್ತಪಡಿಸಿದ್ದಾರೆ. ಕೂಡಲೇ ಪ್ಲೆಕ್ಸ್‌(Flex) ಬದಲಿಸುವಂತೆ ಅನೇಕರು ಒತ್ತಾಯಿಸಿದ್ದಾರೆ.

ಇನ್ನು ಇಂದು ಸಂಜೆ 6 ಗಂಟೆಗೆ ಪದ್ಮನಾಭನಗರದಲ್ಲಿ(Padmanabha nagar) ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯಲಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ರಸ್ತೆಗೆ “ಪುನೀತ್‌ರಾಜಕುಮಾರ್”‌ಎಂದು ನಾಮಕರಣ ಮಾಡಿ ಉದ್ಘಾಟನೆ ಮಾಡಲಿದ್ದಾರೆ.

ಈ ಕಾರ್ಯಕ್ರಮಕ್ಕೆ ‘ಬಾನದಾರಿಯಲ್ಲಿ ಪುನೀತ್ ಪಯಣ’ ಎಂದು ಹೆಸರಿಡಲಾಗಿದೆ.  ಬೆಂಗಳೂರಿನ ಪದ್ಮನಾಭನಗರದ ವಾಜಪೇಯಿ ಕ್ರೀಡಾಂಗಣದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಕಾರ್ಯಕ್ರಮದ ಉದ್ಘಾಟನೆ ಬಳಿಕ ಪುನೀತ್‌ರಾಜಕುಮಾರ್‌ಅವರ ನೆನಪಿನಲ್ಲಿ ಸಂಗೀತ ಕಾರ್ಯಕ್ರಮ ನಡೆಯಲಿದೆ. 

ಕನ್ನಡದ ಖ್ಯಾತ ನಟ ಪುನೀತ್‌ರಾಜಕುಮಾರ ಅವರ ನಿಧನದ ನಂತರ ಅವರನ್ನು ನೆನಪಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಇತ್ತೀಚೆಗೆ ಮೈಸೂರು ರಸ್ತೆಯಿಂದ ಬನ್ನೇರುಘಟ್ಟವರೆಗಿನ ರಸ್ತೆಗೆ ಪುನೀತ್ ಹೆಸರು ಇಡುವ ಪ್ರಸ್ತಾವನೆಗೆ ರಾಜ್ಯ ಸರ್ಕಾರದಿಂದ ಒಪ್ಪಿಗೆ ಸಿಕ್ಕಿತ್ತು.  

Exit mobile version