ಅಪ್ಪು ಸಮಾಧಿ ದರ್ಶನಕ್ಕೆ ಹರಿದು ಬರ್ತಿದೆ ಜನಸಾಗರ

ದಿವಂಗತ ನಟ ಪುನೀತ್‌ ರಾಜ್‌ಕುಮಾರ್‌ರವರ ದರ್ಶನಕ್ಕೆ ಅಭಿಮಾನಿಗಳ ಸಾಗರವೆ ಹರಿದು ಬರ್ತಾ ಇದೆ ಅಪ್ಪು ಸಮಾಧಿ ದರ್ಶನಕ್ಕೆ ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಕೊನೆಗೂ ದರ್ಶನ ಭಾಗ್ಯ ಸಿಕ್ಖಿದೆ. ನವಂಬರ್‌ 2 ರಂದು ಅಪ್ಪು ಸಮಾಧಿಗೆ ಕುಟುಂಬಸ್ಥರಿಂದ ಹಾಲು-ತುಪ್ಪ ಕಾರ್ಯದ ಬಳಿಕ ಸಂಜೆ 6 ಗಂಟೆಯಿಂದ ಅಪ್ಪು ಸಮಾಧಿ ದರ್ಶನಕ್ಕೆ ಅನುವು ಮಾಡಿ ಕೊಡಲಾಗಿತ್ತು. ಸಮಾಧಿಗೆ ಭೇಟಿ ಕೊಟ್ಟ ಅಭಿಮಾನಿಗಳು ಜೈಕಾರ ಹಾಕುತ್ತಿದ್ದಾರೆ .ಪೊಲೀಸ್ ಹಾಗೂ ರ್ಯಾಪಿಡ್ ಆ್ಯಕ್ಷನ್ ಫೋರ್ಸ್ ಬಿಗಿ ಭದ್ರತೆಯಲ್ಲಿ ಅಭಿಮಾನಿಗಳ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.ಹಾಗೂ ಅಭಿಮಾನಿಗಳು ಸಮಾಧಿಗೆ ದೀಪ ಹಚ್ಚುತ್ತಿದ್ದಾರೆ.ಇಂದು ಕೂಡ ಬೆಳಿಗ್ಗೆ 8 ಗಂಟೆಯಿಂದ ಸಂಜೆ 8 ಗಂಟೆಯವರೆಗೂ ದರ್ಶನ ಕಲ್ಫಿಸಲಾಗಿದೆ.

Exit mobile version