ಪಂಜಾಬ್ ಅಧ್ಯಕ್ಷ ಸ್ಥಾನಕ್ಕೆ ಸಿಧು ರಾಜೀನಾಮೆ

ಅಮೃತ್ ಸರ್ ಸೆ 28 : ನಾಟಕೀಯ ಬೆಳವಣಿಗೆಯಲ್ಲಿ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ರಾಜೀನಾಮೆ ಸಲ್ಲಿಸಿದ್ದಾರೆ.

ಈ ಬಗ್ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿರುವ ಸಿಧು,ರಾಜೀನಾಮೆ ಪತ್ರವನ್ನು ಟ್ವಿಟ್ ಮಾಡಿದ್ದಾರೆ. ಪಂಜಾಬ್ ರಾಜ್ಯದ ಅಭಿವೃದ್ಧಿ ವಿಷಯದಲ್ಲಿ ರಾಜಿಯಾಗಲು ಸಿದ್ಧನಿಲ್ಲ, ಅಧ್ಯಕ್ಷ ಸ್ಥಾನ ತೊರೆದರೂ ಕೂಡ ಪಕ್ಷದಲ್ಲಿದ್ದು ದುಡಿಯುವೆ ಎಂದು ನವಜ್ಯೋತ್ ಸಿಂಗ್ ಸಿಧು ಈ ಪತ್ರದಲ್ಲಿ ಹೇಳಿದ್ದಾರೆ.

ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ಕ್ಯಾಪ್ಟನ್ ಅಮರೀಂದರ್ ಸಿಂಗ್ ರಾಜೀನಾಮೆ ನೀಡಿದ ಬಳಿಕ ಮುಖ್ಯಮಂತ್ರಿ ಸ್ಥಾನಕ್ಕೆ ನವಜ್ಯೋತ್ ಸಿಂಗ್ ಸಿಧು ಹೆಸರು ಕೂಡಾ ಕೇಳಿ ಬಂದಿತ್ತು. ಆದರೆ, ಚರಣಿತ್ ಸಿಂಗ್ ಚನ್ನಿ ನೂತನ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿದ್ದು ಸಂಪುಟ ವಿಸ್ತರಣೆ ಮಾಡಿದ್ದಾರೆ

ರಾಜೀನಾಮೆಗೆ ಕಾರಣಗಳೇನು ?

ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಸಿಧು ಪಿತೂರಿ ನಡೆಸಿದ್ದರು ಎಂಬ ಸುದ್ದಿ ಹಬ್ಬಿತ್ತು. ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಅಮರೀಂದರ್ ಅವರು ಸಿಧು ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಸಿಎಂ ಸ್ಥಾನಕ್ಕೆ ಸಿಧು ಸೂಕ್ತವಲ್ಲ, ಅವರು ಪಾಕಿಸ್ತಾನಿಗಳ ಜೊತೆ ಮೈತ್ರಿ ಹೊಂದಿದ್ದಾರೆ, ಪಂಜಾಬ್ ರಾಜ್ಯಕ್ಕೆ ಸಿಧು ಸಿಎಂ ಆದರೆ ಅದು ದೊಡ್ಡ ಕಳಂಕ ಎಂದಿದ್ದರು. ಇದರ ಜೊತೆಗೆ ವೈಯಕ್ತಿಕ ನಿಂದನೆ, ತೇಜೋವಧೆಯನ್ನು ಸಹಿಸಲು ಸಾಧ್ಯವಿಲ್ಲ ಪಂಜಾಬ್ ಅಭಿವೃದ್ಧಿ ಜೊತೆ ರಾಜಿಯಾಗುವುದಿಲ್ಲ ಎಂದು ಸಿಧು ಹೇಳಿದ್ದಾರೆ ಆದರೆ, ಚರಣ್ ಜೀತ್ ಆಯ್ಕೆಯನ್ನು ಸಿಧು ಸ್ವಾಗತಿಸಿದ್ದರು.

ಆದರೆ, ನೂತನ ಸಚಿವ ಸಂಪುಟ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ಸಿದ್ದು ರಾಜಿನಾಮೆ ನೀಡಿದ್ದಾರೆ. ಸಂಪುಟದಲ್ಲಿ ಕಳಂಕಿತ ವ್ಯಕ್ತಿ ಎನ್ನಲಾದ ರಾಣಾ ಗುರ್ಜಿತ್ ಸಿಂಗ್ ಅವರನ್ನು ಸೇರಿಸಿಕೊಳ್ಳಬಾರದು ಎಂದು ಹಠ ಹಿಡಿದಿದ್ದರು. ಆದರೆ ಲಾಬಿ ನಡೆಸಿದ್ದ ಗುರ್ಜಿತ್ ಸಿಂಗ್ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದರು. ಗುರ್ಜಿತ್ ಸಿಂಗ್ ಅಕ್ರಮ ಮರಳುಗಾರಿಕೆ, ಗಣಿ ನಡೆಸಿದ ಆರೋಪ ಎದುರಿಸಿದ್ದರು. ಅಮರಿಂದರ್ ಸಿಂಗ್ ಸರಕಾರ ಸಚಿವನಾಗಿದ್ದರೂ, ಅವರನ್ನು ಆರೋಪ ಬಂದ ಹಿನ್ನೆಲೆ ನಡುವೆ ಕೈಬಿಡಲಾಗಿತ್ತು ಇದೀಗ ಮತ್ತೆ ಅವರಿಗೆ ಸಚಿವ ಸ್ಥಾನ ನೀಡಿದ್ದು ಸಿಧು ರಾಜೀನಾಮೆಗೆ ಪರೋಕ್ಷ ಕಾರಣ ಕೂಡ ಆಗಿದೆ ಎನ್ನಲಾಗುತ್ತಿದೆ.  

Exit mobile version