`ಬೆಂಕಿಯಲ್ಲಿ ಅರಳಿದ ಹೂವು’ ಈ ಮಹಿಳೆ! ಯಾರು ಈ ಮಹಿಳಾ ಸಾಧಕಿ?

opraha

ಕೆಚ್ಚೆದೆಯ ಹೆಣ್ಣು ಓಪ್ರಾ ವಿನ್ಫ್ರೇ :

ಓಪ್ರಾ ವಿನ್ಫ್ರೇ ಪ್ರಭಾವಿ ಮಹಿಳೆಯರಲ್ಲಿ ಇವರೂ ಕೂಡ ಒಬ್ಬರು. ಇವರು ಕ್ವೀನ್ ಆಫ್ ಮೀಡಿಯಾ ಎಂದೇ ಪ್ರಖ್ಯಾತಿ ಹೊಂದಿದ್ದಾರೆ ಹಾಗೂ ಇವರು ಒಬ್ಬ ಕಪ್ಪು ವರ್ಣೀಯ ಬಿಲಿಯನೇರ್ ಮತ್ತು ಸ್ಟಾರ್ ಮೇಕರ್. ಈ ಎಲ್ಲಾ ಪದ್ಧತಿಯು ಅಷ್ಟು ಸುಲಭವಾಗಿ ಸಿಗಲಿಲ್ಲ. ಇದರ ಹಿಂದೆ ಅನೇಕ ಪರಿಶ್ರಮ ತ್ಯಾಗಗಳಿವೆ. ಈ ಎಲ್ಲ ತ್ಯಾಗ ಪರಿಶ್ರಮ ಅವರನ್ನು ಇಲ್ಲಿ ತಂದು ನಿಲ್ಲಿಸಿದೆ. ಅನೇಕ ಮಹಿಳೆಯರಿಗೆ ಸ್ಫೂರ್ತಿ ಕೂಡ ಹೌದು. ಹಾಗಿದ್ರೆ ಈ ಮಹಿಳೆ ಯಾರು? ಇವರ ಜೀವನ ಚರಿತ್ರೆ ಏನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿ.

ಇವರ ಬಾಲ್ಯ ಹೇಗಿತ್ತು? :

ಜನವರಿ 29 1954 ರಲ್ಲಿ ಓಪ್ರಾ ವಿನ್ಫ್ರೆ ಅಮೇರಿಕಾದ ಕೆಸಿಕೊ ನಗರದಲ್ಲಿ ಜನಿಸುತ್ತಾರೆ. ಇವರ ಅಸಲಿ ಹೆಸರು ಓಪ್ರಾ ವಿನ್ಫ್ರೇ. ಅವರ ತಾಯಿ ತಮ್ಮ ಚಿಕ್ಕ ವಯಸ್ಸಿನಲ್ಲೇ ಅವರಿಗೆ ಜನ್ಮ ಕೊಟ್ಟರು. ಆ ಸಮಯದಲ್ಲಿ ಅವರಿಗೆ ಮದುವೆ ಕೂಡ ಆಗಿರಲಿಲ್ಲ. ಅವರು ಮನೆ ಕೆಲಸ ಮಾಡಿ ತಮ್ಮ ಜೀವನವನ್ನು ನಡೆಸುತ್ತಾ ಇದ್ದರು. ಆನಂತರ ಓಪ್ರಾ ತನ್ನ ಅಜ್ಜಿಯ ಬಳಿ ಬಿಟ್ಟು ಅವರು ಬೇರೆ ಕೆಲಸ ಹುಡುಕುವುದಕ್ಕೆ ಹೋಗುತ್ತಾರೆ. ತದನಂತರ ಒಪ್ರಾ ತಮ್ಮ 6ನೇ ವಯಸ್ಸಿನವರೆಗೂ ಅಜ್ಜಿಯ ಜೊತೆ ಜೀವನ ನಡೆಸುತ್ತಾರೆ. ಅವರ ಅಜ್ಜಿ ಒಪ್ರಾ ಅವರಿಗೆ ಮನೆಯಲ್ಲಿಯೇ ಓದಲು ಬರೆಯಲು ಕಲಿಸುತ್ತಾರೆ. ಒಪ್ರಾ ತನ್ನ ಚಿಕ್ಕ ವಯಸ್ಸಿನಲ್ಲಿ ಚಿನಕುರಳಿ ಹಾಗೆ ಮಾತನಾಡುತ್ತಿದ್ದರು.

ಆನಂತರ ಅಜ್ಜಿಗೂ ಒಪ್ರಾ ಅವರನ್ನು ನೋಡಿಕೊಳ್ಳಲು ಕಷ್ಟವಾಗುತ್ತದೆ. ಹೀಗಾಗಿ ಒಪ್ರಾ ಅವರನ್ನು ತಾಯಿಯ ಹತ್ತಿರ ಕಳಿಸುತ್ತಾರೆ. ಅಲ್ಲಿಂದ ಅವರ ನಿಜವಾದ ಜೀವನ ಪ್ರಾರಂಭವಾಗಿತ್ತು. ಒಂದು ಕಡೆ ಕಿತ್ತು ತಿನ್ನುವ ಬಡತನ ಮತ್ತೊಂದು ಕಡೆ ತಾಯಿ ಬೇರೆಯವರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಒಪ್ರಾ ಅವರಿಗೆ ತನ್ನ ತಾಯಿಯ ಜೊತೆ ಹೆಚ್ಚು ಸಮಯ ಕಲಿಯಲು ಕೂಡ ಸಿಗುತ್ತಿರಲಿಲ್ಲ. ಮನೆಯಲ್ಲಿ ಯಾವಾಗಲೂ ಒಂಟಿಯಾಗಿಯೇ ಇರುತ್ತಿದ್ದರು. ಈ ಸಂದರ್ಭವನ್ನು ಬಳಸಿಕೊಂಡು ಅವರ ಸಂಬಂಧಿಗಳೇ ಓಪ್ರಾ ಮೇಲೆ ಅತ್ಯಾಚಾರವನ್ನು ಎಸಗುತ್ತಾರೆ. ಅದೂ ಕೂಡ ಒಂದೆರಡು ಬಾರಿಯಲ್ಲ. ಅದು ಪ್ರತಿದಿನ ನಡೆಯುತ್ತಿರುತ್ತದೆ. ಆದರೆ ಒಪ್ರಾ ಇದನ್ನೆಲ್ಲ ಸಹಿಸಿಕೊಂಡು ತಮ್ಮ ಜೀವನ ನಡೆಸುತ್ತಿರುತ್ತಾರೆ.

ಚಿಕ್ಕ ವಯಸ್ಸಿನಲ್ಲಿ ಈ ಎಲ್ಲಾ ಕಷ್ಟಗಳನ್ನು ಸಹಿಸಿಕೊಂಡು ಬರುತ್ತಾರೆ. ತದನಂತರ ತನ್ನ ಹನ್ನೊಂದನೇ ವಯಸ್ಸಿನಲ್ಲಿ ಈ ಎಲ್ಲ ಸಮಸ್ಯೆಯಿಂದ ಹೊರಬರಲು ಮನೆಯಲ್ಲಿ ಇದ್ದ ಹಣವನ್ನು ತೆಗೆದುಕೊಂಡು ತಾಯಿಯಿಂದ ದೂರ ಬರುತ್ತಾರೆ. ಆದರೆ ಅಷ್ಟರಲ್ಲಿ ಅವರು ಗರ್ಭಿಣಿಯಾಗಿರುತ್ತಾರೆ. ಆ ಚಿಕ್ಕ ಹುಡುಗಿಗೆ ಇದೆಲ್ಲ ಹೇಗೆ ತಿಳಿಯುತ್ತೆ ಹೇಳಿ? ಆನಂತರ ಒಪ್ರಾ ತನ್ನ ಚಿಕ್ಕ ವಯಸ್ಸಿನಲ್ಲಿಯೇ ಮಗುವಿಗೆ ಜನ್ಮ ಕೊಡುತ್ತಾಳೆ. ಆದರೆ ಆ ಮಗು ಹೆಚ್ಚು ದಿನ ಬದುಕುವುದಿಲ್ಲ. ಯಾವ ವಯಸ್ಸಿನಲ್ಲಿ ನಾವು ನೀವು ಆಟ ಆಡಿಕೊಂಡು ಜೀವನ ನಡೆಸುತ್ತಿವೋ, ಅದೇ ವಯಸ್ಸಿನಲ್ಲಿ ಒಪ್ರಾ ತಮ್ಮಎಲ್ಲಾ ಕಷ್ಟಗಳನ್ನು ಎದುರಿಸಿ ಒಬ್ಬ ದಿಟ್ಟ ಮಹಿಳೆಯಾಗಿ ಹೊರಬಂದಿದ್ದರು.

ಒಪ್ರಾ ಅವರ ಸಾಧನೆಗಳೇನು? :

ಒಪ್ರಾ ಅವರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಕೊಡುತ್ತಾರೆ ಮತ್ತು ಅವರು ತಮ್ಮ ಹಳೆಯ ಜೀವನ ಶೈಲಿಯನ್ನು ಮರೆತು, ಹೊಸ ಜೀವನ ಶುರು ಮಾಡುತ್ತಾರೆ. ಚೆನ್ನಾಗಿ ಓದಿ ಅದರಲ್ಲಿ ಬರುವ ಸ್ಕಾಲರ್ ಶಿಪ್ ನಿಂದ ತಮ್ಮ ಡಿಗ್ರಿಯನ್ನು ಮುಗಿಸುತ್ತಾರೆ. ತನ್ನ ಪ್ರತಿಭೆಯಿಂದ ಅನೇಕ ನಾಟಕ ಭಾಷಣಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಕೂಡ ತಮ್ಮದಾಗಿಸಿಕೊಳ್ಳುತ್ತಾರೆ. ಆನಂತರ ಜರ್ನಲಿಸಂನಲ್ಲಿ ಪದವಿ ಪೂರೈಸಿ ಸ್ಥಳೀಯ ಟಿವಿ ಚಾನಲ್ ನಲ್ಲಿ ಅಂಕರ್ ಆಗಿ ಕೆಲಸಕ್ಕೆ ಸೇರುತ್ತಾರೆ. 1983 ರಲ್ಲಿ ಒಪ್ರಾ ಚಿಕಾಗೊದಲ್ಲಿ ನೆಲೆಸುತ್ತಾರೆ. wstv ಅಲ್ಲಿ ನಿರೂಪಕಿಯಾಗಿ ಅನೇಕ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ. ಅವರು ನಡೆಸಿಕೊಡುತ್ತಿದ್ದ ಮೋರ್ನಿ ಟಾಕ್ ಶೋ ಕೆಲವೇ ದಿನಗಳಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದುಕೊಂಡಿತು.

ಅಂದಿನ ಕಾಲದಲ್ಲಿ ಎಲ್ಲಾ ನಿರೂಪಕರನ್ನು ಸ್ಫೋಟಿಸಿ ಒಳ್ಳೆಯ ಹೆಸರನ್ನು ಗಳಿಸಿಕೊಳ್ಳುತ್ತಾರೆ. ನಿರೂಪಣೆಯ ಜತೆ ಸಿನಿಮಾದಲ್ಲೂ ಕೂಡ ನಟಿಸಲು ಪ್ರಾರಂಭಿಸುತ್ತಾರೆ.1985 ಅವರು ನಟಿಸಿದ್ದ ಸಿನಿಮಾಕ್ಕೆ ಪ್ರಶಸ್ತಿಯ ಸುರಿಮಳೆಗಳೇ ಹರಿದು ಬರುತ್ತದೆ. ತದನಂತರ 1986 ರಲ್ಲಿ ಅವರ ‘ದಿ ಓಪ್ರಾ ವಿನ್ಫ್ರೇ ಶೋ’ ಇಡೀ ಅಮೇರಿಕಾದ ಟೆಲಿಕಾಂ ಮಾಧ್ಯಮದಲ್ಲಿ ಹೊಸ ಸಂಚಲನವನ್ನು ಮೂಡಿಸುತ್ತದೆ. 1986 ರಲ್ಲಿ ಶುರುವಾದ ಈ ಕಾರ್ಯಕ್ರಮ ಸತತವಾಗಿ ಇಪ್ಪತ್ತೈದು ವರ್ಷಗಳ ಕಾಲ ಮುಂದುವರಿಯುತ್ತದೆ. ಈ ಶೋ ಅವರಿಗೆ ಹೆಸರು, ಖ್ಯಾತಿ, ಹಣ ಎಲ್ಲವನ್ನು ತಂದುಕೊಟ್ಟಿತ್ತು. ಈ ಕಾರ್ಯಕ್ರಮದಲ್ಲಿ ಸಮಾಜದ ಅನೇಕ ತೊಂದರೆಗಳ ಬಗ್ಗೆ ಚರ್ಚಿಸಲಾಗುತ್ತದೆ. ಹಾಗೆಯೇ ಇದರ ಜೊತೆ ಒಪ್ರಾ ಬುಕ್ ಕ್ಲಬ್ ಎಂಬ ಪುಸ್ತಕವನ್ನು ಬಿಡುಗಡೆ ಮಾಡುತ್ತಾರೆ.

ಇದಕ್ಕೆ ಲಕ್ಷಾಂತರ ಓದುಗರು ಕೂಡ ಹುಟ್ಟಿಕೊಳ್ಳುತ್ತಾರೆ. ಇವರ ಪ್ರಸಿದ್ಧಿ ಎಷ್ಟಿತ್ತೆಂದರೆ ಇವರ ಭಾಷಣದಿಂದಲೇ ಒಬಾಮಾ ಅವರಿಗೆ ಒಂದು ಮಿಲಿಯನ್ ಪೋರ್ಟ್ ಸಿಕ್ಕಿತ್ತು. ಅವರ ಒಂದೊಂದು ಮಾತೂ ಇಂದಿನ ಪೀಳಿಗೆಗೆ ಸ್ಫೂರ್ತಿ ತುಂಬುವಂಥದ್ದು. ಅವರ ಒಂದು ಅದ್ಭುತವಾದ ಮಾತೆಂದರೆ ನಿಮ್ಮನ್ನು ನೀವು ಕೀಳಾಗಿ ಕಂಡರೆ ಜಗತ್ತು ಕೂಡ ನಿಮ್ಮನ್ನು ಕೀಳಾಗಿ ಕಾಣುತ್ತದೆ ಎನ್ನುವ ಅದ್ಭುತವಾದ ಮಾತೊಂದನ್ನು ಹೇಳಿದ್ದಾರೆ. ಇದರಿಂದ ನಮ್ಮನ್ನು ನಾವು ಎಂದಿಗೂ ಕೀಳಾಗಿ ಕಾಣಬಾರದು. ಒಪ್ರಾ ಅವರ ಜೀವನಶೈಲಿ ಸ್ಫೂರ್ತಿಯಾಗಿ ತೆಗೆದುಕೊಂಡು ನಮ್ಮ ಜೀವನದಲ್ಲಿ ಬರುವ ಎಲ್ಲ ಕಷ್ಟಗಳನ್ನು ಮೆಟ್ಟಿ ನಿಲ್ಲುವಂತ ವ್ಯಕ್ತಿ, ವ್ಯಕ್ತಿತ್ವ ನಮ್ಮದಾಗಬೇಕು.

Exit mobile version