ಮೃತ ವ್ಯಕ್ತಿ ಹೆಸರಿಗೆ 125 ಕೋಟಿ ರೂ. ಮೌಲ್ಯದ ಜಮೀನು ಮಂಜೂರು! ಮೌನ ಮುರಿದ ಸಚಿವ ಆರ್. ಅಶೋಕ್!

land news

ವ್ಯಕ್ತಿಯೊಬ್ಬರು ಸತ್ತು 23 ವರ್ಷಗಳ ಕಳೆದಿದ್ದರು ಕೂಡ ಆತನ ಹೆಸರಿನಲ್ಲಿ 125 ಕೋಟಿ ಮೌಲ್ಯದಷ್ಟು ಬೆಲೆಬಾಳುವ ಸೈಟನ್ನು ಮಂಜೂರು ಮಾಡಿರುವಂತ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಪ್ರಕರಣ ಸದ್ಯ ಸಾಕಷ್ಟು ಚರ್ಚೆಯಾಗುತ್ತಿದ್ದು, ಒಬ್ಬರ ಅಭಿಪ್ರಾಯಕ್ಕಿಂತ ಮತ್ತೊಬ್ಬರ ಅಭಿಪ್ರಾಯ ತಾರಕಕ್ಕೆ ಏರುತ್ತಿದೆ ಎನ್ನಬಹುದು. ಬೆಂಗಳೂರಿನ ಬೇಗೂರು ಜಿಲ್ಲೆಯ ಬೇಗೂರು ಹೋಬಳಿಯ ಹುಳಿಮಾವು ಗ್ರಾಮಕ್ಕೆ ಸೇರುವ ಸರ್ವೇ ನಂ ಅನುಸಾರ 63 ರಲ್ಲಿ ಜಮೀನು ಮಂಜೂರಾತಿ ಸಂಬಂಧಪಟ್ಟಂತೆ ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿಯ ಅಧ್ಯಕ್ಷರಾಗಿರುವ ಕೆ.ಜಿ.ಬೋಪಯ್ಯ ಅವರ ನೇತೃತ್ವದಲ್ಲಿ ನಡೆಯುತ್ತಿದ್ದ ವಿಚಾರಣೆಯ ಸಮಯದಲ್ಲಿ ಪರಿಶೀಲನೆಯಲ್ಲಿ ಸಿಕ್ಕಿತು ಮೃತ ವ್ಯಕ್ತಿ ಹೆಸರಿನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿ. ಇದನ್ನು ಕೈಗೆತ್ತಿಕೊಂಡಿದ್ದಾರೆ. ಸತ್ತ ವ್ಯಕ್ತಿಯ ಹೆಸರಿಗೆ ಜಮೀನು ಮಂಜೂರು ಆದೇಶ ಹೊರಡಿಸಿರುವ ಸಹಾಯಕ ಆಯುಕ್ತರ ವಿರುದ್ಧ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಮಂಜುನಾಥ್ ಅವರು ಇವರೆಗೂ ಯಾವುದೇ ಕ್ರೈಮ್ ಮೊಕದ್ದಮೆ ಹೇರದೆ ಬೇಕಾಬಿಟ್ಟಿ ಮಾಡಲಾಗಿದೆ. ಈ ಕುರಿತು ಕಂದಾಯ ಸಚಿವ ಆರ. ಅಶೋಕ್ ಅವರು ತಿಳಿದಿದ್ದರೂ ಸಹ ತಮ್ಮ ಧ್ವನಿ ಎತ್ತಿಲ್ಲ.

ಈ ಬಗ್ಗೆ ಕೆಲ ದಾಖಲೆಗಳು ವರದಿಯಾಗಿದ್ದು, ಜನವರಿ 19 ರಂದು 2022ರ ಅಡಿ ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮೀತಿಯು ನಡೆಸಿದ ಸಭೆಯ ನಡುವಳಿಗಳು ದೊರೆತಿವೆ. ಇದನ್ನು ಗಮನಿಸಿ ತಿಳಿಯುವುದಾದರೆ ಹಲವು ತಿರುವುಗಳು ಹುಟ್ಟುತ್ತವೆ. ಈ ಪ್ರಕರಣ ಹುಟ್ಟಿಕೊಂಡಿದ್ದು ಹೇಗೆ ಎಂದರೆ, ಬೆಂಗಳೂರು ನಗರ ಜಿಲ್ಲೆಯ ದಕ್ಷಿಣ ತಾಲ್ಲೂಕಿನ ಬೇಗೂರು ಹೋಬಳಿಯ ಹುಳಿಮಾವು ಗ್ರಾಮದ ಸರ್ವೆ ನಂಬರ್ 63ರಲ್ಲಿ 1.20 ಎಕರೆ ಜಾಗವನ್ನು ತೊಟ್ಟಿ ಎಲ್ಲಪ್ಪ ಎಂಬುವರಿಗೆ ಮಂಜೂರು ಮಾಡಲಾಗಿದೆ. ಈ ಹೆಸರಿನಲ್ಲಿ ಆರ್ ಟಿಸಿ ಕೂಡ ಇದೆ. ಆದರೆ ವಾಸ್ತವದಲ್ಲಿ ತೋಟಿಯಲ್ಲಪ್ಪ ಎಂಬ ವ್ಯಕ್ತಿ 1998 ರಲ್ಲೇ ನವೆಂಬರ್ 04 ರಂದು ಸಾವನಪ್ಪಿದ್ದಾರೆ. ಆದರೆ ಈ ವ್ಯಕ್ತಿ ಹೆಸರಿನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಬೆಂಗಳೂರು ದಕ್ಷಿಣ ತಾಲ್ಲೂಕಿನ ಸಹಾಯಕ ಆಯುಕ್ತರು ಪರಿಶೀಲನೆ ನಡೆಸದೆಯೇ ನೇರವಾಗಿ ಮಂಜೂರು ಮಾಡಿ ಆದೇಶ ಹೊರಡಿಸಿದ್ದಾರೆ ಎಂಬ ಸಂಗತಿ ಸಭೆಯ ನಡುವಳಿಯಿಂದ ದೃಢವಾಗಿದೆ.

ಜಮೀನು ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿಯು ನಡೆಸಿದ ಸಭೆಯಲ್ಲಿ ಹಾಜರಾಗಿದ್ದ ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ಅವರು ಈ ಕುರಿತು ವಿವರಣೆ ನೀಡಿದ್ದಾರೆ. ತೋಟಿ ಯಲ್ಲಪ್ಪ ಎಂಬುವರಿಗೆ ಒಂದು ಎಕರೆ ಇಪ್ಪತ್ತು ಗುಂಟೆಯನ್ನು ನಮ್ಮ ಸಹಾಯಕ ಆಯುಕ್ತರು ಆದೇಶ ಹೊರಡಿಸಿರುವ ಸಂಬಂಧ ಅವರ ವಿರುದ್ಧವಾಗಿ ಹೆಚ್. ಎಂ ರಾಮಕೃಷ್ಣಪ್ಪ ಮತ್ತು 7 ಇನ್ನಿತರರು ಸೇರಿ ಡಿ.ಸಿ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ. ಸಹಾಯಕ ಆಯುಕ್ತರು ನೀಡಿದ್ದ ಆದೇಶದ ವಿರುದ್ಧ ತಡೆಯಾಜ್ಞೆ ನೀಡಿದೆ. ಪ್ರಕರಣದ ಮೂರನೇ ಪ್ರತಿವಾದಿ ತೋಟಿಯಲ್ಲಪ್ಪ ಜೀವಂತವಾಗಿಲ್ಲ. ಅವರ ಪರವಾಗಿ ಯಾರು ಬರುತ್ತಾರೋ ಅವರು ಮೂರನೇ ಪ್ರತಿವಾದಿಯಾಗಲಿದ್ದಾರೆ ಎಂದು ಸ್ಪಷ್ಟನೆ ನೀಡಿರುವುದು ಸಭೆಯ ನಡವಳಿಯಿಂದ ತಿಳಿದು ಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚು ವಿವರಣೆ ನೀಡಬೇಕಿದ್ದ ಸಹಾಯಕ ಆಯುಕ್ತರು ಸಮಿತಿಯು ನಡೆಸಿದ ಮೂರು ಸಭೆಗಳಿಗೆ ಹಾಜರಾಗದೆ ತಪ್ಪಿಸಿಕೊಳ್ಳುತ್ತಿರುವುದು ಸಭೆ ನಡವಳಿಯಿಂದ ತಿಳಿದುಬಂದಿದೆ. 1957 ರಲ್ಲಿ ಬೇರೆಯವರಿಗೆ ಮಂಜೂರಾತಿಯಾಗಿತ್ತು ಎಂದು ಕೈ ಬರಹದ ಆರ್.ಟಿ.ಸಿ ಯಲ್ಲಿ ತೋರಿಸಿ ಸಲ್ಲಿಕೆಯಾಗುವ ಅರ್ಜಿಗಳನ್ನು ಪರಿಶೀಲಿಸದೆ ಪುರಸ್ಕರಿಸುವ ಸಹಾಯಕ ಆಯುಕ್ತರು ಅತ್ಯಂತ ಬೆಲೆ ಬಾಳುವ ಜಮೀನುಗಳನ್ನು ಮಂಜೂರು ಮಾಡಿಸುತ್ತಿದ್ದರೂ ಕ್ರಿಮಿನಲ್ ಮೊಕದಮ್ಮೆ ದಾಖಲಿಸಿದೆ ಇರುವುದು ಸಾಕಷ್ಟು ಅನುಮಾನಗಳ ಹುತ್ತವನ್ನೇ ಸೃಷ್ಟಿಸಿದೆ ಎಂದಿದ್ದಾರೆ.

Source Credits : The file

Exit mobile version