ರೈತರಿಗೆ ಪರಿಹಾರ ನೀಡಲು ಹಣವಿಲ್ಲ. ಆದ್ರೆ ಮುಸ್ಲಿಮರಿಗೆ 10 ಸಾವಿರ ಕೋಟಿ ನೀಡಲು ಹಣವಿದೆ. ಇದು ಯಾವ ನ್ಯಾಯ..? – ಸಿಡಿದೆದ್ದ ಆರ್. ಅಶೋಕ್


Belgaum
: ರಾಜ್ಯದ ಜನರ ಮೇಲೆ ತೆರಿಗೆ ಹಾಕಿ ಹಣ ವಸೂಲಿ ಮಾಡಲು ಹೊರಟಿದೆ (R Ashok statement supporting Farmers) ರಾಜ್ಯ ಕಾಂಗ್ರೆಸ್ ಸರ್ಕಾರ (Congress) ಬಳಿ,

ಮೇವಿಗೆ ಹಣವಿಲ್ಲ, ಗೋಶಾಲೆಗೆ (Cowshed) ಹಣವಿಲ್ಲ, ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ (Farmer) ಪರಿಹಾರ ಕೊಡಲು ಇವರ ಬಳಿ ಹಣವಿಲ್ಲ. ಆದರೆ ಕೇವಲ ಅಲ್ಪಸಂಖ್ಯಾತರಿಗೆ

ಹತ್ತು ಸಾವಿರ ಕೋಟಿ ಅನುದಾನ ನೀಡಲು ಇವರಿಗೆ ಹಣವಿದೆ. ಇದು ಯಾವ ನ್ಯಾಯ ? ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಸಿಡಿದೆದ್ದಿದ್ದಾರೆ.

ಈ ಕುರಿತು ಬೆಳಗಾವಿಯಲ್ಲಿ(Belagavi) ಮಾತನಾಡಿದ ಅವರು, ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಪರಿಹಾರ ಕೊಡಬೇಕೆಂಬ ಪ್ರಾಮಾಣಿಕ ಕಳಕಳಿ ಕೂಡಾ ರಾಜ್ಯ ಕಾಂಗ್ರೆಸ್

ಸರ್ಕಾರಕ್ಕಿಲ್ಲ. ಪರಿಹಾರ ಕೊಡಲು ಖಜಾನೆಯಲ್ಲಿ ಹಣವಿಲ್ಲ ಎಂದು ಹೇಳುವ ಇವರು ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ನೀಡುತ್ತೇವೆ ಎಂಬ ಘೋಷಣೆ ಮಾಡುತ್ತಾರೆ. ರಾಜ್ಯ ಸರ್ಕಾರದ

ಆದ್ಯತೆ ಸಂಕಷ್ಟದಲ್ಲಿರುವ ರೈತರ ಬಗ್ಗೆ ಅಲ್ಲ, ಅವರ ಪ್ರಥಮ ಆದ್ಯತೆ ಅಲ್ಪಸಂಖ್ಯಾತರ ಓಲೈಕೆಯಷ್ಟೇ (R Ashok statement supporting Farmers) ಆಗಿದೆ ಎಂದು ಟೀಕಿಸಿದ್ದಾರೆ.

ಇದೇ ವೇಳೆ ಮಾತನಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ (Vijayandra) ಅವರು, ರಾಜ್ಯದಲ್ಲಿ ಬಂದಿರುವ ಬರದಿಂದಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ.

ಆದರೆ ರೈತರಿಗೆ ಅನುದಾನ ಕೊಡಲು ಸರ್ಕಾರಕ್ಕೆ ಹಣವಿಲ್ಲ. ಆದರೆ ಮೌಲ್ವಿಗಳ ಸಭೆಯಲ್ಲಿ ಹತ್ತು ಸಾವಿರ ಕೋಟಿ ರೂ. ಅನುದಾನ ನೀಡುವುದಾಗಿ ಘೋಷಿಸಿದ್ದಾರೆ. ಇದು ಸಂಪೂರ್ಣವಾಗಿ ತಪ್ಪು.

ಅಲ್ಪಸಂಖ್ಯಾತರಿಗೆ ಹತ್ತು ಸಾವಿರ ಕೋಟಿ ನೀಡುವುದಾದರೆ ರೈತರೇನು ಅನ್ಯಾಯ ಮಾಡಿದ್ದಾರೆ ? ಎಂದು ಪ್ರಶ್ನಿಸಿದ್ದಾರೆ.

ಇದಕ್ಕೂ ಮುನ್ನ ಮಾಜಿ ಸಿಎಂ ಯಡಿಯೂರಪ್ಪನವರು, ಸಿದ್ದರಾಮಯ್ಯ (Siddaramaiah) ಒಬ್ಬ ಮುಖ್ಯಮಂತ್ರಿ ಆಗಿ ಅಲ್ಪಸಂಖ್ಯಾತರಿಗೆ ಹಣ ಕೊಡಲು ನಮ್ಮ ಅಭ್ಯಂತರ ಇಲ್ಲ. ಆದರೆ 10

ಸಾವಿರ ಕೋಟಿ ರೂಪಾಯಿ ಕೊಡ್ತೀನಿ ಎಂದು ಅಲ್ಪಸಂಖ್ಯಾತರ ಓಲೈಕೆ ಮಾಡ್ತಿರೋದು ಶೋಭೆ ತರಲ್ಲ. ಈ ರೀತಿಯ ಅಲ್ಪಸಂಖ್ಯಾತರ ತುಷ್ಟೀಕರಣ ಸರಿಯಲ್ಲ. ಓಲೈಕೆ ರಾಜಕಾರಣದಿಂದ

ಚುನಾವಣೆ ಗೆಲ್ಲುತ್ತೇವೆ ಎಂಬ ಭ್ರಮೆಯಲ್ಲಿ ಇದ್ದರೆ ಅದು ಸಾಧ್ಯವಿಲ್ಲ ಎಂದು ಟೀಕಿಸಿದ್ದರು.

ಇದನ್ನು ಓದಿ : ಪಂಚರಾಜ್ಯಗಳ ಫಲಿತಾಂಶ ನಂತರ ತಣ್ಣಗಾದ್ರಾ ಸೋಮಣ್ಣ ; ಹೊಸ ದಾಳ ಉರುಳಿಸಲು ಸಜ್ಜಾದ..?!

Exit mobile version