‘ಸಿದ್ದರಾಮಯ್ಯ ಒಬ್ಬ ತಿರುಕ’ ಆರ್.ಅಶೋಕ ಹೇಳಿಕೆಗೆ ಕಾಂಗ್ರೆಸ್ ಕಟು ಟೀಕೆ

Bengaluru : ಕಾಂಗ್ರೆಸ್ (Congress) ಹಿರಿಯ ನಾಯಕ ಸಿದ್ದರಾಮಯ್ಯ (siddaramaiah) ಅವರನ್ನು ತಿರುಕ ಎಂದು ಉಲ್ಲೇಖಿಸಿ ಮಾತನಾಡಿದ ಸಚಿವ ಆರ್. ಅಶೋಕ ಅವರನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್, ಶೋಷಿತರನ್ನ ಅವಮಾನಿಸುವುದು (R Ashoka Vs Siddaramaiah) ನಾಗಪುರದಲ್ಲಿ ಕಲಿತ ಪಾಠವೇ ಆರ್.ಅಶೋಕ? (R.Ashoka) ಎಂದು ಪ್ರಶ್ನಿಸಿದೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ಸಚಿವ (Revenue Minister) ಆರ್. ಅಶೋಕ ಅವರು,

ಸಿದ್ದರಾಮಯ್ಯ (Siddaramaih) ಅವರಿಗೆ ಇಂತ ದುಸ್ಥಿತಿ ಬರುತ್ತಿರಲಿಲ್ಲ! ರಾಜ್ಯದಲ್ಲಿ ಕಾಂಗ್ರೆಸ್ (State congress) ಪಕ್ಷ ಅಧಿಕಾರಕ್ಕೆ ಬರುವ ಸಾಧ್ಯತೆ ಇದ್ದಿದ್ದರೆ ತಿರುಕನಂತೆ

ಹಲವು ಕ್ಷೇತ್ರಗಳನ್ನು ಸುತ್ತುವ ಪರಿಸ್ಥಿತಿ ಸಿದ್ದರಾಮಯ್ಯ ಅವರಿಗೆ ಬರುತ್ತಿರಲಿಲ್ಲ. ಸದ್ಯ ಕೋಲಾರದಲ್ಲಿ ಅಲೆದಾಡುತ್ತಿರುವ ಅವರು, ಅಲ್ಲಿ ಉಳಿಯುವುದಿಲ್ಲ.

ಕೋಲಾರದಲ್ಲಿ (Kolara) ಅವರು ಡೂಪ್ಲಿಕೇಟ್ ಮನೆ ಮಾಡಿಕೊಂಡಿದ್ದಾರೆ. ಬರೆದಿಟ್ಟುಕೊಳ್ಳಿ ಬೇಕಾದರೆ ಮನೆ ಮುಂದೆ ಬೋರ್ಡ್ ಇರುತ್ತದೆ ವಿನಃ ಸಿದ್ದರಾಮಯ್ಯ (R Ashoka Vs Siddaramaiah) ಇರುವುದಿಲ್ಲ.

ಸಿದ್ದರಾಮಯ್ಯ ಅವರು ಕೋಲಾರದ ಕಡೆ ಹಿಂತಿರುಗಿ ಕೂಡ ನೋಡುವುದಿಲ್ಲ. ಯಾಕಂದರೆ ಅವರಿಗೆ ಬಿಸಿಲು ಕಂಡರೆ ಆಗುವುದಿಲ್ಲ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ : https://vijayatimes.com/board-exams/

ಮಾಜಿ ಮುಖ್ಯಮಂತ್ರಿ ಆದ ಸಿದ್ದರಾಮಯ್ಯ ಅವರು ಇದೀಗ ಊರೂರು ಅಲೆದು, ಭಿಕ್ಷಾಂಧೇಹಿ ಎಂದು ಕೇಳುವ ದುಸ್ಥಿತಿ ಎದುರಾಗಿದೆ.

ಒಂದು ಬಾರಿ ಜಯಗಳಿಸಿದ ಕ್ಷೇತ್ರದಲ್ಲಿ ಜನಪರ ಕೆಲಸಗಳನ್ನು ಮಾಡಿದ್ದರೆ ಮತ್ತೊಮ್ಮೆ ಅದೇ ಕ್ಷೇತ್ರದಲ್ಲಿ ಸ್ಪರ್ಧಿಸಲು ಧೈರ್ಯ ಇರುತ್ತಿತ್ತು. ಆದ್ರೆ, ಸಿದ್ದರಾಮಯ್ಯ ಅವರಿಗೆ ಈಗ ಆ ಧೈರ್ಯವೂ ಇಲ್ಲ.

ಮೈಸೂರು (Mysore) ಕ್ಷೇತ್ರವಾಯಿತು, ಬಾದಾಮಿ ಕ್ಷೇತ್ರವಾಯಿತು, ಈಗ ಕೋಲಾರ ಕ್ಷೇತ್ರಕ್ಕೆ ಬಂದಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಈ ದೇಶದ ಯಾವ ಭಾಗದಲ್ಲೂ ಉಳಿಗಾಲವಿಲ್ಲ.

ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಈಗಾಗಲೇ ಜಯವನ್ನು ಸಾಧಿಸಿದೆ. ಇನ್ನು ರಾಜಸ್ಥಾನ ಮತ್ತು ಮಧ್ಯಪ್ರದೇಶದ ಭಾಗಗಳಲ್ಲಿ ಚುನಾವಣೆ ನಡೆದರೆ ಅಲ್ಲೂ ಕೂಡ ಕಾಂಗ್ರೆಸ್ ಸೋಲನ್ನು ನೋಡಲಿದೆ.

ಈ ಬಾರಿಯ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸೋತರೆ, ಕಾಂಗ್ರೆಸ್ ಪಕ್ಷದಲ್ಲಿ ಇರುವ ಅಷ್ಟು ಜನರು ಬಿಜೆಪಿ (BJP) ಸೇರಲಿದ್ದಾರೆ. ಪ್ರತಿ ಸಮೀಕ್ಷೆಗಳಲ್ಲಿ ಬಿಜೆಪಿ ಮುಂದೆ ಇದೆ.

ಜನರಿಗೆ ಒಳ್ಳೆಯ ಸರ್ಕಾರದ ಅವಶ್ಯವಿದೆ ಎಂದು ಹೇಳಿದ್ದಾರೆ. ಆರ್. ಅಶೋಕ ಅವರ ಈ ಹೇಳಿಕೆಯನ್ನು ಖಂಡಿಸಿದ ರಾಜ್ಯ ಕಾಂಗ್ರೆಸ್, ಒಬ್ಬರು ಟಿಪ್ಪು ಕೊಂದಂತೆ ಸಿದ್ದರಾಮಯ್ಯನವರನ್ನೂ ಕೊಲ್ಲಬೇಕು ಎನ್ನುತ್ತಾರೆ.

ಮತ್ತೊಬ್ಬರು ಹಿಂದುಳಿದ ವರ್ಗದಿಂದ ಬಂದ ನಾಯಕರನ್ನು “ತಿರುಕ” ಎಂದು ಅವಮಾನಿಸುತ್ತಾರೆ. ಬಿಜೆಪಿಗೆ ಅಲ್ಪಸಂಖ್ಯಾತರು, ದಲಿತರು,

ಹಿಂದುಳಿದ ವರ್ಗದವರನ್ನು ಕಂಡರೆ ಏಕಿಷ್ಟು ಅಸಹನೆ? ಶೋಷಿತರನ್ನ ಅವಮಾನಿಸುವುದು ನಾಗಪುರದಲ್ಲಿ ಕಲಿತ ಪಾಠವೇ ಆರ್. ಅಶೋಕ? ಎಂದು ಪ್ರಶ್ನಿಸುವ ಮೂಲಕ ಟೀಕಿಸಿದೆ.

Exit mobile version