‘ಸಾವರ್ಕರ್ ಬ್ರಿಟಿಷರಿಗೆ ಸಹಾಯ ಮಾಡಿದ್ದರು’ ; ಪುರಾವೆಗೆ ಪತ್ರ ತೋರಿಸಿದ ರಾಹುಲ್ ಗಾಂಧಿ

New Delhi : ಭಾರತ್ ಜೋಡೋ ಯಾತ್ರೆಯಲ್ಲಿ ನಿರತರಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Allegation Over Savarkar) ಗುರುವಾರ ಸಾವರ್ಕರ್ ಅವರ ಬಗ್ಗೆ ನೀಡಿದ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಸಾವರ್ಕರ್ ಬ್ರಿಟಿಷರಿಗೆ ಕ್ಷಮಾದಾನ(Rahul Allegation Over Savarkar) ಅರ್ಜಿಗಳನ್ನು ಬರೆದರು ಮತ್ತು ಪಿಂಚಣಿ ಸ್ವೀಕರಿಸಿದ್ದರು.

ಸಾವರ್ಕರ್ ಅದನ್ನು ಭಯದಿಂದ ಹಾಗೆ ಮಾಡಿದರು ಮತ್ತು ಬ್ರಿಟಿಷರಿಗೆ ಅವರು ಸಹಾಯ ಮಾಡಿದ್ದಾರೆ ಎಂದು ನನಗೆ ಸ್ಪಷ್ಟವಾಗಿದೆ.

ಸಾವರ್ಕರ್ ಅವರು ಬ್ರಿಟಿಷರಿಗೆ ಬರೆದ ಪತ್ರವನ್ನು ಒಳಗೊಂಡಿರುವ ದಾಖಲೆ ನನ್ನ ಬಳಿಯಿದೆ. ಸಾವರ್ಕರ್ ಅವರು ಬರೆದಿದ್ದ ಪತ್ರದಲ್ಲಿ, ‘ನಾನು ಉಳಿಯಲು ಬೇಡಿಕೊಳ್ಳುತ್ತೇನೆ ಸರ್, ನಿಮ್ಮ ಅತ್ಯಂತ ಆಜ್ಞಾಧಾರಕ ಸೇವಕ’ ಎಂದು ಬರೆದಿದ್ದಾರೆ.

ಇದು ನಾನು ಬರೆದದ್ದಲ್ಲ! ಬದಲಾಗಿ ಸ್ವತಃ ಸಾವರ್ಕರ್ಜಿ ಬರೆದಿರುವ ಪತ್ರ! ಪ್ರತಿಯೊಬ್ಬರೂ ಈ ದಾಖಲೆಯನ್ನು ಓದಲಿ ಎಂದು ರಾಹುಲ್ ಗಾಂಧಿ ಹೇಳಿದರು.

ಸಾವರ್ಕರ್ ಬ್ರಿಟಿಷರಿಗೆ ಸಹಾಯ ಮಾಡಿದ್ದಾರೆ ಎಂಬುದು ನನಗೆ ಈಗ ತುಂಬಾ ಸ್ಪಷ್ಟವಾಗಿದೆ. ಸಾವರ್ಕರ್ ಬರೆದಿರುವ ವಿಭಾಗಗಳನ್ನು ಈ ಪತ್ರದ ಹಲವು ಕಡೆ ನೀಲಿ ಬಣ್ಣದಲ್ಲಿ ಹೈಲೈಟ್ ಮಾಡಲಾಗಿದೆ.

https://youtu.be/NhD-jfgjBXU ವ್ಯೆವಸ್ತೆ ಕಾಣದ ಮಳವಳ್ಳಿ ತಾಲೂಕು, ಕಸಬಾ ಹೋಬಳಿ, ಬಾಣಸಮುದ್ರ ಗ್ರಾಮ ಶಾಲೆ!

ಸಾವರ್ಕರ್ ಅವರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ. ಆದರೆ, ಮಹಾತ್ಮ ಗಾಂಧಿ, ಪಂಡಿತ್ ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ವರ್ಷಗಳ ಕಾಲ ಜೈಲಿನಲ್ಲಿದ್ದರು.

ಆದ್ರೆ ಈ ರೀತಿ ಎಂದಿಗೂ ಪತ್ರವನ್ನು ಬರೆಯಲಿಲ್ಲ. ಭಯದ ಕಾರಣದಿಂದ ಸಾವರ್ಕರ್ಜಿ ಈ ಪತ್ರಕ್ಕೆ ಸಹಿ ಹಾಕಿದ್ದಾರೆ ಎಂದು ನಾನು ನಂಬುತ್ತೇನೆ.

ಇನ್ನು ರಾಹುಲ್ ಗಾಂಧಿಯ ಈ ಹೇಳಿಕೆಯನ್ನು ಗಮನಿಸಿದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್,

ರಾಹುಲ್ ಗಾಂಧಿ ನಾಚಿಕೆಯಿಲ್ಲದೆ ಸುಳ್ಳು ಹೇಳಿದ್ದಾರೆ. 11 ವರ್ಷಗಳ ಕಾಲ ಸಾವರ್ಕರ್ ಅವರಂತೆ ಎಷ್ಟು ಕಾಂಗ್ರೆಸ್ ನಾಯಕರು ನೋವನ್ನು ಅನುಭವಿಸಿದ್ದಾರೆಂದು ತಿಳಿಯಲು ಬಯಸುತ್ತೇನೆ ಎಂದು ಹೇಳಿದರು.

https://twitter.com/INCIndia/status/1593153152609419267?s=20&t=yDQoEmF2TQ1G4aB390jSCA

ದೇವೇಂದ್ರ ಫಡ್ನವಿಸ್ ಅವರಂತೆ ಕಾಂಗ್ರೆಸ್ ಭಾಗವಾಗಿದ್ದ ಮಹಾ ವಿಕಾಸ್ ಅಘಾಡಿಯನ್ನು ಮುರಿದ ಶಿವಸೇನೆಯ ಬಂಡಾಯದ ನೇತೃತ್ವ ವಹಿಸಿದ್ದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಕೂಡ ರಾಹುಲ್ ಗಾಂಧಿಯ ಹೇಳಿಕೆಯನ್ನು ಟೀಕಿಸಿದ್ದಾರೆ.

Exit mobile version