ರಾಹುಲ್‌ ದ್ರಾವಿಡ್‌ ಭಾರತ ತಂಡದ ಮುಂದಿನ ಕೋಚ್ ?

ಮುಂಬೈ ಅ 16 : ಭಾರತ ತಂಡದ ಮುಖ್ಯ ಕೋಚ್‌ ಆಗಿ ರವಿಶಾಸ್ತ್ರಿ ಅವರ ಸ್ಥಾನವನ್ನು ತುಂಬಲು ರಾಹುಲ್‌ ದ್ರಾವಿಡ್ ಬದ್ದರಾಗಿದ್ದಾರೆ ಹಾಗೂ ಅತಿ ಶೀಘ್ರದಲ್ಲಿಯೇ ಬೆಂಗಳೂರಿನಲ್ಲಿರುವ ನ್ಯಾಷನಲ್‌ ಕ್ರಿಕೆಟ್‌ ಅಕಾಡೆಮಿ ಮುಖ್ಯಸ್ಥ ಹುದ್ದೆಗೆ ರಾಜೀನಾಮೆ ಸಲ್ಲಿಸಲಿದ್ದಾರೆಂದು ಬಿಸಿಸಿಐ ಹಿರಿಯ ಅಧಿಕಾರಿ ಹೇಳಿರುವ ಬಗ್ಗೆ ವರದಿಯಾಗಿದೆ.

ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯೊಂದಿಗೆ ಮುಖ್ಯ ಕೋಚ್ ಆಗಿ ರವಿ ಶಾಸ್ತ್ರಿ ಅವಧಿ ಮುಕ್ತಾಯಗೊಳ್ಳಲಿದೆ. ಬಳಿಕ ನವೆಂಬರ್‌ನಲ್ಲಿ ಭಾರತದಲ್ಲಿ ನ್ಯೂಜಿಲೆಂಡ್ ವಿರುದ್ಧ ಸರಣಿ ನಡೆಯಲಿದ್ದು, ಕೋಚ್ ಆಗಿ ದ್ರಾವಿಡ್ ಅವರು ತಂಡವನ್ನು ಸೇರಿಕೊಳ್ಳಲಿರುವುದು ಬಹುತೇಕ ಖಚಿತವಾಗಿದೆ ಎಂದು ತಿಳಿದು ಬಂದಿದೆ

ರಾಹುಲ್‌ ದ್ರಾವಿಡ್ ಅವರು 1996ರಿಂದ 2017ರ ಅವಧಿಯಲ್ಲಿ ಭಾರತ ತಂಡದ ಪರ  164 ಟೆಸ್ಟ್ ಹಾಗೂ 344ಏಕದಿನ ಪಂದ್ಯಗಳನ್ನು ಆಡಿದ್ದಾರೆ.ಸದ್ಯ ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ದ್ರಾವಿಡ್ ಅವರು 2 ವರ್ಷಗಳ ಅವಧಿಗೆ ಅಂದರೆ 2023ರ ಕ್ರಿಕೆಟ್ ವಿಶ್ವಕಪ್‌ವರೆಗೆ ಗುತ್ತಿಗೆ ಆಧಾರದಲ್ಲಿ ನೇಮಕವಾಗಲಿದ್ದಾರೆ

ಐಸಿಸಿ ಟಿ20 ವಿಶ್ವಕಪ್‌ ಟೂರ್ನಿ ಮುಗಿದ ಮೂರು ದಿನಗಳಲ್ಲಿ ಆರಂಭವಾಗಲಿರುವ ನ್ಯೂಜಿಲೆಂಡ್‌ ವಿರುದ್ಧ ಎರಡು ಪಂದ್ಯಗಳ ಟೆಸ್ಟ್‌ ಸರಣಿ ಹಾಗೂ ಮೂರು ಪಂದ್ಯಗಳ ಟಿ20 ತವರು ಸರಣಿಗಳಲ್ಲಿ ದ್ರಾವಿಡ್‌, ಟೀಮ್‌ ಇಂಡಿಯಾದ ಚುಕ್ಕಾಣೆ ಹಿಡಿಯಲಿದ್ದಾರೆ.ಚುಟುಕು ವಿಶ್ವಕಪ್‌ ಟೂರ್ನಿಯ ಬಳಿಕ ಪ್ರಸ್ತುತ ಮುಖ್ಯ ಕೋಚ್‌ ರವಿಶಾಸ್ತ್ರಿ, ಬೌಲಿಂಗ್‌ ಕೋಚ್‌ ಭರತ್‌ ಅರುಣ್‌ ಹಾಗೂ ಫೀಲ್ಡಿಂಗ್‌ ಕೋಚ್‌ ಆರ್‌ ಶ್ರೀಧರ್‌ ಅವರ ಕಾರ್ಯದ ಅವಧಿ ಅಂತ್ಯವಾಗಲಿದೆ. ಈ ಹಿನ್ನಲೆಯಲ್ಲಿ ದ್ರಾವಿಡ್ ಅವರ ಹೆಸರು ಕೋಚ್‌ ಹುದ್ದೆಯಲ್ಲಿ ಮುಂಚೂಣಿಯಲ್ಲಿದೆ.

Exit mobile version