4ನೇ ದಿನವೂ ರಾಹುಲ್ ಗಾಂಧಿಗೆ ಇ.ಡಿಯಿಂದ ಡ್ರಿಲ್!

Rahul Gandhi

ನ್ಯಾಷನಲ್ ಹೆರಾಲ್ಡ್(National Herald Case), ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ(Congress Leader) ರಾಹುಲ್ ಗಾಂಧಿ(Rahul Gandhi) ಅವರು ಜಾರಿ ನಿರ್ದೇಶನಾಲಯದ(ED) ಮುಂದೆ ಇಂದು 4ನೇ ದಿನವೂ ಕೂಡ ಹಾಜರಾಗಿದ್ದಾರೆ.

ಇದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ನಾಲ್ಕನೇ ಸುತ್ತಿನ ಪ್ರಶ್ನಾವಳಿಗಳ ವಿಚಾರಣೆ ಆರಂಭಗೊಂಡಿದೆ. ಕಳೆದ ವಾರ, ಇಡಿ ಸೋಮವಾರದಿಂದ ಬುಧವಾರದವರೆಗೆ ಸುಮಾರು 30 ಗಂಟೆಗಳ ಕಾಲ ರಾಹುಲ್ ಗಾಂಧಿಯವರನ್ನು ವಿಚಾರಣೆಗೆ ಒಳಪಡಿಸಿತು. ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರ ತೀವ್ರ ಪ್ರತಿಭಟನೆಗಳ ನಡುವೆ, ಹಲವು ನಾಯಕರು ಸೇರಿದಂತೆ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕ(Karnataka) ರಾಜ್ಯದ ಶಿವಮೊಗ್ಗ(Shivmoga) ಜಿಲ್ಲೆಯಲ್ಲಿ ರೈಲು ತಡೆದು ಪ್ರತಿಭಟನೆ ನಡೆಸಲು ಮುಂದಾದ ಯುವ ಕಾಂಗ್ರೆಸ್ ಕಾರ್ಯಕರ್ತರ ಯತ್ನಕ್ಕೆ ಪೊಲೀಸರು ಬ್ರೇಕ್ ನೀಡಿ ಅವರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಕೇಂದ್ರ ಸರ್ಕಾರದ(Central Government) ಅಗ್ನಿಪಥ್ ನೇಮಕಾತಿ ಯೋಜನೆಯ(Agnipath Yojana) ವಿರುದ್ಧ ಯುವ ಕಾಂಗ್ರೆಸ್ ಕಾರ್ಯಕರ್ತರು ಹಲವೆಡೆ ಪ್ರತಿಭಟನೆ ನಡೆಸಿದ್ದಾರೆ. ಕಾಂಗ್ರೆಸ್ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಪ್ರಿಯಾಂಕಾ ಗಾಂಧಿ(Priyanka Gandhi Vadra) ಜಂತರ್ ಮಂತರ್‌ಗೆ ತೆರಳಿದ್ದಾರೆ. ನ್ಯಾಷನಲ್ ಹೆರಾಲ್ಡ್ ಮನಿ ಲಾಂಡರಿಂಗ್ ಪ್ರಕರಣದಲ್ಲಿ ರಾಹುಲ್ ಗಾಂಧಿ ವಿರುದ್ಧ ಇ.ಡಿ ತನಿಖೆಯನ್ನು ವಿರೋಧಿಸಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ತಮ್ಮ ಕಾರಿನಲ್ಲಿ ರಾಹುಲ್ ಗಾಂಧಿ ಬೆಂಬಲಿಗರೊಂದಿಗೆ ಜಂತರ್ ಮಂತರ್ ಕಡೆಗೆ ತೆರಳಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

Exit mobile version