Politics : ಗಾಂಧಿ ಕುಟುಂಬದ ಯಾವುದೇ ಸದಸ್ಯರು ಕಾಂಗ್ರೆಸ್ ಅಧ್ಯಕ್ಷರಾಗಬಾರದು ; ಅಶೋಕ್ ಗೆಹ್ಲೋಟ್ಗೆ ರಾಹುಲ್ ಗಾಂಧಿ ಸೂಚನೆ

Congress

New Delhi : ಗಾಂಧಿ ಕುಟುಂಬದಿಂದ ಯಾವುದೇ ಸದಸ್ಯರು ಪಕ್ಷದ ಮುಂದಿನ ಅಧ್ಯಕ್ಷರಾಗಬಾರದು ಎಂದು ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi election plans) ಸ್ಪಷ್ಟಪಡಿಸಿದ್ದಾರೆ ಎಂದು ರಾಜಸ್ಥಾನ ಮುಖ್ಯಮಂತ್ರಿ(Rajasthan Chiefminister) ಅಶೋಕ್ ಗೆಹ್ಲೋಟ್(Ashok Gehlot) ಮಾದ್ಯಮಗಳಿಗೆ ಹೇಳಿದ್ದಾರೆ.

ಕಾಂಗ್ರೆಸ್(Rahul Gandhi election plans) ಅಧ್ಯಕ್ಷೀಯ ಚುನಾವಣೆಯ ಕದನ ತೀವ್ರಗೊಳ್ಳುತ್ತಿರುವಂತೆಯೇ ರಾಹುಲ್ ಗಾಂಧಿ ನೀಡಿರುವ ಈ ಹೇಳಿಕೆ ಹೊಸ ಲೆಕ್ಕಾಚಾರಗಳಿಗೆ ಕಾರಣವಾಗಿದೆ. ಕೇರಳದಲ್ಲಿ(Kerala) ಸಾಗುತ್ತಿರುವ “ಭಾರತ್‌ ಜೋಡೋ” ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅಶೋಕ್ ಗೆಹ್ಲೋಟ್ ಅವರು,

https://youtu.be/hVKW87owa28

“ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗುವ ಎಲ್ಲರ ಪ್ರಸ್ತಾಪವನ್ನು ಒಪ್ಪಿಕೊಳ್ಳುವಂತೆ ನಾನು ರಾಹುಲ್ ಗಾಂಧಿ ಅವರಿಗೆ ಅನೇಕ ಬಾರಿ ಮನವಿ ಮಾಡಿದ್ದೇನೆ. ಆದರೆ ಗಾಂಧಿ ಕುಟುಂಬದ ಯಾವುದೇ ಸದಸ್ಯರು ಪಕ್ಷದ ಮುಂದಿನ ಮುಖ್ಯಸ್ಥರಾಗಬಾರದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

https://vijayatimes.com/nia-raid-in-mysuru/

ಇನ್ನು ದೇಶದ ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ದೇಶಕ್ಕೆ ಬಲಿಷ್ಠ ವಿರೋಧ ಪಕ್ಷದ ಅಗತ್ಯವಿದೆ. ಹೀಗಾಗಿ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಸ್ಥಾನವು ಹೆಚ್ಚು ಜವಾಬ್ದಾರಿಯಿಂದ ಕೂಡಿರುತ್ತದೆ” ಎಂದಿದ್ದಾರೆ. ಇನ್ನು ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಕೇರಳ ಸಂಸದ ಶಶಿ ತರೂರ್(Shashi Tharoor) ಅವರು ಸಂಭಾವ್ಯ ಸ್ಪರ್ಧಿಗಳಾಗಿದ್ದಾರೆ.

https://fb.watch/fI5C8KToVw/ ಗ್ಯಾಸ್‌ ಮೋಸ! ಎಚ್ಚರ! COVER STORY PROMO

ಶೀಘ್ರದಲ್ಲೇ ಚುನಾವಣೆಗೆ ನಾಮಪತ್ರ ಸಲ್ಲಿಸುವುದಾಗಿ ಗೆಹ್ಲೋಟ್ ತಿಳಿಸಿದ್ದಾರೆ. ಇನ್ನೊಂದೆಡೆ ಸಂಸದ ಶಶಿ ತರೂರ್‌ ಅವರು ಕೂಡಾ ನಾಮಪತ್ರ ಸಲ್ಲಿಕೆಗೆ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರನ್ನು ಆಯ್ಕೆ ಮಾಡುವ ಸಂಬಂಧ ದೇಶಾದ್ಯಂತ ಇರುವ ಕಾಂಗ್ರೆಸ್ ಸಮಿತಿಗಳು ಸಭೆಗಳನ್ನು ನಡೆಸುತ್ತಿವೆ.

ಇನ್ನೊಂದೆಡೆ ಹೊಸ ಕಾಂಗ್ರೆಸ್ ಅಧ್ಯಕ್ಷರಿಗೆ ಪಿಸಿಸಿ ಮತ್ತು ಎಐಸಿಸಿ ಸದಸ್ಯರನ್ನು ನೇಮಿಸುವ ಅಧಿಕಾರ ನೀಡುವ ನಿರ್ಣಯವನ್ನು ಅಂಗೀಕರಿಸಲಾಗಿದೆ.

Exit mobile version