ಭಾರತದ ನೆಲದಲ್ಲಿ ಚೀನಾ ಸೇನೆ ನೆಲೆಯೂರಿದೆ : ರಾಹುಲ್ ಗಾಂಧಿ

Rahul Gandhi

ನಮ್ಮ ಭಾರತದ(India) ನೆಲದಲ್ಲಿ ಚೀನಾ(China) ಸೇನೆ ನೆಲೆಯೂರಿದೆ. ಪ್ರಧಾನಿಗಳೇ, ಸೇನೆಯನ್ನು ಬಲಪಡಿಸುವುದೇ ನಿಜವಾದ ದೇಶಭಕ್ತಿ, ಆದರೆ ನೀವು ‘ಹೊಸ ಮೋಸ’ದಿಂದ ಸೇನೆಯನ್ನು ದುರ್ಬಲಗೊಳಿಸುತ್ತಿದ್ದೀರಿ. ದೇಶದ ಭವಿಷ್ಯದ ಉಳಿವಿಗಾಗಿ ನಡೆಯುತ್ತಿರುವ ಆಂದೋಲನದಲ್ಲಿ ನಾವು ಯುವಕರ ಜೊತೆಗಿದ್ದೇವೆ. ನೀವು ‘ಅಗ್ನಿಪಥ್’ ಯೋಜನೆಯನ್ನು(Agnipath Yojana) ಹಿಂಪಡೆಯಲೇ ಬೇಕಾಗುತ್ತದೆ ಎಂದು ಕಾಂಗ್ರೆಸ್ ನಾಯಕ(Congress Leader) ರಾಹುಲ್ ಗಾಂಧಿ(Rahul Gandhi) ಟ್ವೀಟ್(Tweet) ಮೂಲಕ ಕೇಂದ್ರ ಸರ್ಕಾರದ(Central Government) ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಇನ್ನೊಂದೆಡೆ ರಾಹುಲ್ ಗಾಂಧಿ ಮಾತಿಗೆ ಸಹಮತ ವ್ಯಕ್ತಪಡಿಸಿರುವ ರಾಜ್ಯ ಕಾಂಗ್ರೆಸ್(State Congress) ಅಗ್ನಿಪಥ್ ಯೋಜನೆ ವಿರೋಧಿಸಿ ಸರಣಿ ಟ್ವೀಟ್ ಮಾಡಿದ್ದು, ಭಾರತೀಯ ಸೇನೆ(Indian Army) ಸೇರಿ ಪೂರ್ಣ ತರಬೇತಿಗೊಂಡು ಸೈನಿಕನಾಗಿ ಸಜ್ಜಾಗಲು ಕನಿಷ್ಟ 3 ವರ್ಷಗಳು ಬೇಕು ಎಂಬುದು ಹಿರಿಯ ಸೇನಾಧಿಕಾರಿಗಳು ಹೇಳಿದ್ದಾರೆ. ಆದರೆ ‘ಅಗ್ನಿಪಥ್’ ಮೂಲಕ ನೀವು 6 ತಿಂಗಳ ತರಬೇತಿ ನೀಡುತ್ತೇವೆ ಎನ್ನುತ್ತೀರಿ, ಪೂರ್ಣ ತಯಾರಾಗದ ಯುವಕರ ಕೈಗೆ ಬಂದೂಕಿತ್ತು ಯುದ್ಧರಂಗಕ್ಕೆ ಇಳಿಸಿ ಭಾರತದ ಸೇನಾಶಕ್ತಿಯನ್ನು ಎದುರಾಳಿಗಳ ಕೈಗಿಡುತ್ತೀರೇನು?

ಸಾಧಕ, ಬಾದಕಗಳ ಚರ್ಚೆ, ವಿಮರ್ಶೆಗಳಿಲ್ಲದೆ ಏಕಾಏಕಿ ಘೋಷಿಸಿದ ಬಾಲಿಶ ಯೋಜನೆ ಅಗ್ನಿಪಥ್. ಇದು ಕಾಯ್ದೆಯಲ್ಲ, ಕಾನೂನಿನ ಬೆಂಬಲವೂ ಇಲ್ಲ, ಕೇವಲ ಬಾಯಿ ಮಾತಿನ ಭರವಸೆಗಳ ಮೇಲೆ ಯುವಕರಿಗೆ ನಂಬಿಕೆ ಇಲ್ಲ. ಬಿಜೆಪಿ ಸರ್ಕಾರ(BJP Govt) ಘೋಷಿಸಿದ ಯೋಜನೆಗಳು ಹೇಗೆ ‘ಜುಮ್ಲಾ’ಗಳಾಗಿವೆ ಎಂದು ಜನತೆ ನೋಡಿದ್ದಾರೆ. ಅಗ್ನಿಪಥವನ್ನ ವಾಪಸ್ ಪಡೆಯುವುದು ಅನಿವಾರ್ಯವಾಗಲಿದೆ ಎಂದು ಹೇಳಿದೆ.

Exit mobile version