ಭಾರತ್ ಜೋಡೋ ಯಾತ್ರೆಯಲ್ಲಿ ಯುವಕರಿಗೆ ಕೈಬೀಸಿ ‘ಹೆದರಬೇಡಿ’ ಎಂದ ರಾಹುಲ್ ಗಾಂಧಿ

Maharashtra : ಕಾಂಗ್ರೆಸ್ ಪಕ್ಷವೂ ಭಾರತ್ ಜೋಡೋ ಯಾತ್ರೆಯಲ್ಲಿ(Rahul Gandhi Supports Youth) ತೊಡಗಿದ್ದು, ರಾಜ್ಯಗಳ ಮಧ್ಯೆ ಹಾದುಹೋಗುವ ಮೂಲಕ ಜನಸಾಮಾನ್ಯರನ್ನು ತಲುಪುವ ಪ್ರಯತ್ನದಲ್ಲಿದೆ.

ಸದ್ಯ ಭಾರತ್ ಜೋಡೊ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ(Rahul Gandhi)

, ಎಲ್ಲಾ ಸಂಕಷ್ಟಗಳ ವಿರುದ್ಧ ನಿರ್ಭೀತರಾಗಿ ಮತ್ತು ರಾಷ್ಟ್ರವನ್ನು ವಿಭಜಿಸುವ ದ್ವೇಷವನ್ನು ಹರಡದಂತೆ ನಾವು ನೋಡಿಕೊಳ್ಳಬೇಕು ಎಂದು ಯುವ ಪೀಳಿಗೆಯನ್ನು ಉದ್ದೇಶಿಸಿ ಮಾತನಾಡಿದರು.

ದೇಶದಲ್ಲಿ ಪ್ರೀತಿ, ಭ್ರಾತೃತ್ವವನ್ನು ಹರಡಿ, ದ್ವೇಷವನ್ನಲ್ಲ ಎಂದು ಹೇಳಿದರು. ಮಹಾರಾಷ್ಟ್ರದ(Maharashtra) ನಾಂದೇಡ್‌ನಲ್ಲಿ ಭಾರತ್ ಜೋಡೋ ಯಾತ್ರೆಯ ನಡುವೆ ಯುವ ಪೀಳಿಗೆಗೆ ಸಂದೇಶವನ್ನು ನೀಡಿ ಎಂದು ಕೇಳಿದಾಗ,

“ದಾರೋ ಮತ್”(ಹಿಂದಿ ಪದ) ಎಂದು ಹೇಳಿದರು, ಅದನ್ನು ಕನ್ನಡದಲ್ಲಿ ಅನುವಾದಿಸಿದರೆ, ಹೆದರಬೇಡಿ ಎಂದು ಯುವಕರಿಗೆ ಸಂದೇಶ ನೀಡಿದ್ದಾರೆ.

ಇದನ್ನೂ ಓದಿ : https://vijayatimes.com/sunil-gavaskar-about-team-india/

“ಜೀವನದಲ್ಲಿ ಯಾವುದಕ್ಕೂ ಭಯಪಡಬೇಡಿ, ನಿರ್ಭೀತರಾಗಿದ್ದರೆ ಯಾರನ್ನೂ ದ್ವೇಷಿಸುವುದಿಲ್ಲ. ನಿಮ್ಮ ಹೃದಯದಲ್ಲಿರುವ ಭಯವನ್ನು ತೊಡೆದುಹಾಕಿ ಮತ್ತು ದೇಶಕ್ಕಾಗಿ ನಿರಂತರವಾಗಿ ಕೆಲಸ ಮಾಡಿ.

ದೇಶದಲ್ಲಿ ಪ್ರೀತಿ ಮತ್ತು ಸಹೋದರತ್ವವನ್ನು ಹರಡಿ, ದ್ವೇಷವಲ್ಲ” ಎಂದು ರಾಹುಲ್ ಗಾಂಧಿ ಮನವಿ ಮಾಡಿದರು.

ಈ ಬಗ್ಗೆ ಕಾಂಗ್ರೆಸ್ ಅಧಿಕೃತ ಟ್ವಿಟರ್ ಹ್ಯಾಂಡಲ್ ಹಂಚಿಕೊಂಡಿರುವ ವಿಡಿಯೋದಲ್ಲಿ ರಾಹುಲ್ ಗಾಂಧಿ ನೀಡಿರುವ ಹೇಳಿಕೆ ಸದ್ಯ ವೈರಲ್ ಆಗಿದೆ.

ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯು ಮಹಾರಾಷ್ಟ್ರದ ಐದನೇ ದಿನವಾದ ಶುಕ್ರವಾರ ನಾಂದೇಡ್ ಜಿಲ್ಲೆಯಲ್ಲಿ ಮುಂದುವರೆದಿದೆ ಮತ್ತು ನಂತರ ನೆರೆಯ ಹಿಂಗೋಲಿ ಜಿಲ್ಲೆಗೆ ಪ್ರವೇಶಿಸಲಿದೆ.

ಶಿವಸೇನಾ(ಉದ್ಧವ್ ಬಾಳಾಸಾಹೇಬ್ ಠಾಕ್ರೆ) ನಾಯಕ ಆದಿತ್ಯ ಠಾಕ್ರೆ ಭಾಗವಹಿಸಲಿದ್ದಾರೆ.

ಠಾಕ್ರೆ ಅವರು ರಾಜ್ಯ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಅಂಬಾದಾಸ್ ದಾನ್ವೆ ಮತ್ತು ಶಿವಸೇನಾ ಶಾಸಕ ಸಚಿನ್ ಅಹಿರ್ ಅವರೊಂದಿಗೆ ಸಂಜೆ 4 ಗಂಟೆಗೆ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ತಿಳಿಸಿದೆ.

https://youtu.be/EcQwWOTLHZo ಐತಿಹಾಸಿಕ ಕೋಟೆ, ವೀರನ ದುರ್ಗಕ್ಕೆ ಕಲ್ಲು ಗಣಿ ಕಳ್ಳರ ಕನ್ನ!

ಕಾಂಗ್ರೆಸ್‌ನ ಸಾಮೂಹಿಕ ಸಂಪರ್ಕ ಉಪಕ್ರಮವಾದ ಭಾರತ್ ಜೋಡೋ ಯಾತ್ರೆಯು ತನ್ನ 14 ದಿನಗಳ ಪ್ರವಾಸದಲ್ಲಿ ರಾಜ್ಯದ 15 ಅಸೆಂಬ್ಲಿ ಮತ್ತು 6 ಸಂಸದೀಯ ಕ್ಷೇತ್ರಗಳಲ್ಲಿ ಸಂಚರಿಸಲಿದೆ. ಇದು ನವೆಂಬರ್ 20 ರಂದು ಮಧ್ಯಪ್ರದೇಶವನ್ನು ಪ್ರವೇಶಿಸುವ ಮೊದಲು ಐದು ಜಿಲ್ಲೆಗಳಲ್ಲಿ 382 ಕಿಮೀ ದೂರವನ್ನು ಕ್ರಮಿಸಲಿದೆ.

Exit mobile version