ಗುಜರಾತ್‌ನಿಂದ ಮೇಘಾಲಯದವರೆಗೆ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಹಣಾಹಣಿಗೆ ಮತ್ತೊಂದು ಪಾದಯಾತ್ರೆ

Delhi: ಪ್ರಧಾನಿ ಮೋದಿ ವಿರುದ್ಧ ಸಂಸತ್ ಸ್ಥಾನ ಮರಳಿ ಪಡೆದು ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಸಮರ ನಡೆಸುತ್ತಿರುವ ರಾಹುಲ್ ಗಾಂಧಿ (Rahul Gandhi), ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ (Modi) ಅವರ ನೇರ ಎದುರಾಳಿ ಆಗುತ್ತಾರಾ, ಇಂಡಿಯಾ ಮೈತ್ರಿ ಕೂಟದ ಪ್ರಧಾನ ಅಭ್ಯರ್ಥಿ ಆಗಿ ರಾಹುಲ್ ಗಾಂಧಿ ಬಿಂಬಿತ ಆಗ್ತಾರಾ ಅನ್ನೋ ಕುತೂಹಲವೂ ಮೂಡಿದೆ. ಗುಜರಾತ್‌ನಿಂದ (Gujarat) ಮೇಘಾಲಯಕ್ಕೆ ಕಾಂಗ್ರೆಸ್ ಪಕ್ಷ ಸಂಘಟನೆಗೂ ಮುಂದಾಗಿರುವ ರಾಹುಲ್ ಗಾಂಧಿ, ಭಾರತ್ ಜೋಡೋ ಯಾತ್ರೆ ರೀತಿಯಲ್ಲೇ ಪಾದಯಾತ್ರೆ ನಡೆಸುವ ಸಾಧ್ಯತೆಯಿದೆ.

ಕೆಲವೇ ತಿಂಗಳು ಲೋಕಸಭಾ ಚುನಾವಣೆಗೆ ಬಾಕಿ ಇರುವಾಗಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಫೀನಿಕ್ಸ್‌ನಂತೆ (Finix) ಬಂದಿದ್ದಾರೆ. ರಾಹುಲ್ ಗಾಂಧಿ ಅವರು ಸಂಸದ ಸ್ಥಾನವನ್ನ ಮರಳಿ ಪಡೆದ ಬಳಿಕ ದಿಲ್ಲಿಯ (Delhi) ಸರ್ಕಾರಿ ಬಂಗಲೆಯೂ ಸಿಕ್ಕಿದೆ. ಲೋಕಸಭೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ನಿಂತು ಮಾತನಾಡಲು ತೊಡೆ ತಟ್ಟಿರುವ ರಾಹುಲ್ ಗಾಂಧಿಯವರು ಮತ್ತೊಂದು ಪಾದಯಾತ್ರೆ ನಡೆಸೋದಕ್ಕೂ ತಯಾರಿ ಮಾಡ್ತಿದ್ದಾರೆ. ಕಾಶ್ಮೀರದಿಂದ (Kashmir) ಕನ್ಯಾಕುಮಾರಿವರೆಗೆ ಪಾದಯಾತ್ರೆ ನಡೆಸಿದ್ದ ರಾಹುಲ್ ಇದೀಗ ಗುಜರಾತ್‌ನಿಂದ ಮೇಘಾಲಯದವರೆಗೆ (Meghalaya) ಪಾದಯಾತ್ರೆ ನಡೆಸೋಕೆ ಸಿದ್ಧತೆ ನಡೆಸಿದೆ.

ಲೋಕಸಭಾ (Lokasabha) ಅಧಿವೇಶನದಲ್ಲಿ ಪ್ರಧಾನಿ ಮೋದಿ ಅವರ ವಿರುದ್ಧ ಸಂಸದ ಸ್ಥಾನ ವಾಪಸ್ ಸಿಕ್ಕ ಬಳಿಕ ರಾಹುಲ್ ಗಾಂಧಿ ಅವರು ಅಬ್ಬರಿಸುತ್ತಾರೆ ಅಂತಾ ನಿರೀಕ್ಷೆ ಇಡಲಾಗಿತ್ತು. ಆದರೆ ರಾಹುಲ್ ಗಾಂಧಿ ಅವರು ಸೋಮವಾರ ಹಾಗೂ ಮಂಗಳವಾರ ಮಾತನಾಡಲಿಲ್ಲ. ಏಕೆಂದರೆ ಪ್ರಧಾನಿ ಮೋದಿ (Modi) ಅವರ ಎದುರಿಗೆ ರಾಹುಲ್ ಗಾಂಧಿ ನಿಂತು ಅವರ ಎದುರಲ್ಲೇ ಭಾಷಣ ಮಾಡಬೇಕು ಅನ್ನೋ ನಿಲುವು ಕಾಂಗ್ರೆಸ್ (Congress) ಪಕ್ಷಕ್ಕೆ ಇರಬಹುದು.

ಕಾಂಗ್ರೆಸ್ ಪಕ್ಷಕ್ಕೆ ಈ ಮೂಲಕ ರಾಹುಲ್ ಗಾಂಧಿ (Rahul Gandhi) ಅವರನ್ನ ಪ್ರಧಾನಿ ಮೋದಿ ಅವರ ನೇರ ಎದುರಾಳಿ ಎಂದು ಬಿಂಬಿಸುವ ತಂತ್ರಗಾರಿಕೆ ಕೂಡ ಇರಬಹುದು ಸೋಮವಾರವೇ ರಾಹುಲ್ ಗಾಂಧಿ ಸಂಸದ ಸ್ಥಾನ ವಾಪಸ್ ಸಿಕ್ಕ ಬಳಿಕ ಅವರು ಲೋಕಸಭಾ ಕಲಾಪದಲ್ಲಿ ಭಾಗವಹಿಸಿದ್ದರು. ಅವಿಶ್ವಾಸ ನಿರ್ಣಯದ ವೇಳೆ ಅವರು ಮೋದಿ ಸರ್ಕಾರದ ವಿರುದ್ಧದ ಮಾತನಾಡಿರಲಿಲ್ಲ.

ಇನ್ನು ಮಂಗಳವಾರ ರಾಹುಲ್ ಗಾಂಧಿ ಅವರು ಭಾಷಣ ಮಾಡಬಹುದು ಅಂತಾ ನಿರೀಕ್ಷೆ ಮಾಡಲಾಗಿತ್ತು. ಜೊತೆಗೆ ಅವಿಶ್ವಾಸ ನಿರ್ಣಯ ವಿಚಾರದಲ್ಲಿ ರಾಹುಲ್ ಗಾಂಧಿ ಅವರೇ ಮೊದಲಿಗರಾಗಿ ಇಡೀ ವಿಪಕ್ಷದ ನೇತೃತ್ವ ವಹಿಸಬಹುದು ಅಂತಾ ತಿಳಿದುಕೊಳ್ಳಲಾಗಿತ್ತು. ಆದರೆ ಪ್ರಧಾನಿ ಮೋದಿ (Modi) ಮಂಗಳವಾರ ಕಲಾಪದಲ್ಲಿ ಭಾಗವಹಿಸದ ಕಾರಣ ರಾಹುಲ್ ಗಾಂಧಿ ಅವರು ಮಾತನಾಡಲೇ ಇಲ್ಲ.

ಕನ್ಯಾಕುಮಾರಿಯಿಂದ (Kanyakumari) ಕಳೆದ ವರ್ಷ ಕಾಶ್ಮೀರದವರೆಗೆ ರಾಹುಲ್ ಗಾಂಧಿ ಪಾದಯಾತ್ರೆ ಮಾಡಿದ್ದರು. ಭಾರತ್ ಜೋಡೋ (Bharat Jodo) ಯಾತ್ರೆ ದೇಶದ ಗಮನ ಸೆಳೆದಿತ್ತು. ಅದೇ ರೀತಿ ಈಗ ಮತ್ತೊಮ್ಮೆ ಗುಜರಾತ್‌ನಿಂದ ಈಶಾನ್ಯ ರಾಜ್ಯ ಮೇಘಾಲಯದವರೆಗೆ (Meghalaya) ಪಾದಯಾತ್ರೆ ಮಾಡೋಕೆ ಕಾಂಗ್ರೆಸ್ ಪಕ್ಷ ತಯಾರಿ ನಡೆಸ್ತಿದೆ.

ಇನ್ನೂ ನಿಗದಿತ ದಿನಾಂಕ ಆಗಿಲ್ಲ. ಭಾರತ್ ಜೋಡೋ ಯಾತ್ರೆ ಸುಮಾರು 150 ದಿನಗಳ ಕಾಲ ನಡೆದಿತ್ತು. 2022ರ ಸೆಪ್ಟೆಂಬರ್ (September) 7 ರಂದು ಕನ್ಯಾಕುಮಾರಿಯಲ್ಲಿ ಶುರುವಾದ ಯಾತ್ರೆ, 2023ರ ಜನವರಿ 30ರಂದು ಶ್ರೀನಗರದಲ್ಲಿ (Srinagar) ಅಂತ್ಯಗೊಂಡಿತ್ತು. ಶೀಘ್ರದಲ್ಲೇ ಇದೇ ರೀತಿಯ ಯಾತ್ರೆಯನ್ನ ನಿಯೋಜಿಸಲು ಕಾಂಗ್ರೆಸ್ ಪಕ್ಷ ನೀಲನಕ್ಷೆ ರೂಪಿಸ್ತಿದೆ. ದೇಶದ ದಕ್ಷಿಣ ಭಾಗದಿಂದ ಉತ್ತರ ಭಾಗಕ್ಕೆ ಪಾದಯಾತ್ರೆ ನಡೆಸಿದ್ದ ರಾಹುಲ್ ಇದೀಗ ಕಾಲ್ನಡಿಗೆ ಮೂಲಕ ದೇಶದ ಪಶ್ಚಿಮ ಭಾಗದಿಂದ ಈಶಾನ್ಯ ಭಾಗಕ್ಕೆ ಪಾದಯಾತ್ರೆ ಮಾಡಲಿದ್ದಾರೆ.

ಪಕ್ಷ ಸಂಘಟನೆ ವಿಚಾರದಲ್ಲಿ ಭಾರತ್ ಜೋಡೋ (Bharat Jodo) ಯಾತ್ರೆ ಮಾದರಿಯಲ್ಲೇ ಈ ಯಾತ್ರೆಯೂ ನೆರವಿಗೆ ಬರುತ್ತೆ ಅನ್ನೋದು ಕಾಂಗ್ರೆಸ್ ಪಕ್ಷದ ನಂಬಿಕೆ. ಈ ಮೂಲಕ ಲೋಕಸಭಾ ಚುನಾವಣೆ ಹೊತ್ತಿಗೆ ಕಾಂಗ್ರೆಸ್ ಪಕ್ಷ ತನ್ನ ವೇದಿಕೆಯನ್ನ ಭದ್ರ ಮಾಡಿಕೊಳ್ಳಲಿದೆ. .

ಭವ್ಯಶ್ರೀ ಆರ್.ಜೆ

Exit mobile version