ರೈಲು ಪ್ರಯಾಣಿಕರಿಗೆ ಗುಡ್‌ ನ್ಯೂಸ್

ಶಿವಮೊಗ್ಗ, ಡಿ. 17:  ಕೋವಿಡ್-19 ಹಿನ್ನೆಲೆಯಲ್ಲಿ ಸಾಮಾನ್ಯ ರೈಲುಗಳು ರದ್ದುಗೊಂಡಿದ್ದು, ವಿಶೇಷ ರೈಲುಗಳು ಮಾತ್ರ ಸಂಚಾರ ನಡೆಸುತ್ತಿದೆ.10 ದಿನಗಳ ಅವಧಿಗೆ ಹಬ್ಬದ ವಿಶೇಷ ರೈಲುಗಳನ್ನು ಓಡಿಸುವುದಾಗಿ ನೈಋತ್ಯ ರೈಲ್ವೆ ಮೊದಲು ತಿಳಿಸಿತ್ತು. ಈಗ ರೈಲುಗಳ ಸೇವೆಯನ್ನು 2021ರ ಜನವರಿ ತನಕ ವಿಸ್ತರಣೆ ಮಾಡುವುದಾಗಿ ಆದೇಶ ಹೊರಡಿಸಲಾಗಿದೆ.

ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಈ ಕುರಿತು ಆದೇಶ ಹೊರಡಿಸಿದೆ. ರೈಲುಗಳ ಸಂಚಾರವನ್ನು ವಿಸ್ತರಣೆ ಮಾಡಲಾಗಿದ್ದು, ಪ್ರಯಾಣಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಲಾಗಿದೆ.

ವಿಸ್ತರಣೆಯಾದ ರೈಲುಗಳ ಪಟ್ಟಿ ಹೀಗಿದೆ:

* ರೈಲು ನಂಬರ್ 06227 ಮೈಸೂರು-ತಾಳಗುಪ್ಪ ಎಕ್ಸ್‌ಪ್ರೆಸ್ ರಾತ್ರಿ ರೈಲು 2021ರ ಜನವರಿ 30ರ ತನಕ ಸಂಚಾರ ನಡೆಸಲಿದೆ. 06228 ಸಂಖ್ಯೆಯ ತಾಳಗುಪ್ಪ-ಮೈಸೂರು ಎಕ್ಸ್‌ಪ್ರೆಸ್ ರಾತ್ರಿ ರೈಲು ಜನವರಿ 31ರ ತನಕ ಸಂಚಾರ ನಡೆಸಲಿದೆ.

* ರೈಲು ನಂಬರ್ 06529 ಬೆಂಗಳೂರು-ತಾಳಗುಪ್ಪ ಇಂಟರ್ ಸಿಟಿ ಸೂಪರ್ ಫಾಸ್ಟ್‌ ರೈಲು ಸೇವೆಯನ್ನು 2021ರ ಜನವರಿ 30ರ ತನಕ ವಿಸ್ತರಣೆ ಮಾಡಲಾಗಿದೆ. 06530 ಸಂಖ್ಯೆಯ ತಾಳಗುಪ್ಪ-ಬೆಂಗಳೂರು ಇಂಟರ್ ಸಿಟಿ ಸೂಪರ್ ಫಾಸ್ಟ್‌ ರೈಲು ಜನವರಿ 31ರ ತನಕ ಓಡಲಿದೆ ಎಂದು  ನೈರುತ್ಯ ರೈಲ್ವೇ ಇಲಾಖೆ ತಿಳಿಸಿದೆ.

Exit mobile version