ಸ್ಲಿಮ್ ಆಗಲು ಬಯಸುವಿರಾ? ಹಾಗಿದ್ದರೆ Rainbow diet ಅನುಸರಿಸಿ!

Rainbow Diet: ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ಸ್ಥೂಲಕಾಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. (Rainbow Diet for Slim) ಸ್ಥೂಲಕಾಯ ಹೆಚ್ಚಾದಷ್ಟು ಮುಂದೆ ಅನೇಕ ಆರೋಗ್ಯ

ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಆರಂಭದಲ್ಲೇ ಸ್ಥೂಲಕಾಯವನ್ನು ನಿಯಂತ್ರಿಸುವುದು ಉತ್ತಮ. ಇನ್ನು ದೇಹದ ತೂಕ ಇಳಿಕೆ ಮಾಡಲು, (Health Problems) ದೇಹವನ್ನು ಅತಿಯಾಗಿ

ಅಗ್ನಿಪರೀಕ್ಷೆಗೆ ಒಳಪಡಿಸುವುದು ಒಳ್ಳೆಯದಲ್ಲ, ರುಚಿಯಿಲ್ಲದ (Rainbow Diet for Slim) ಆಹಾರವನ್ನು ಅಲ್ಪ ಪ್ರಮಾಣದಲ್ಲಿ ಸೇವಿಸುವುದು ಕೂಡಾ ಒಳ್ಳೆಯದಲ್ಲ.

ಸ್ವಲ್ಪವೇ ಪ್ರಮಾಣದ ಆಹಾರವನ್ನು ದಿನದಲ್ಲಿ ಅನೇಕ ಬಾರಿ ಸೇವಿಸುವುದು, ಪ್ರೊಟೀನ್ ಅಂಶದ ಆಹಾರಗಳನ್ನೇ ಅತಿಯಾಗಿ ಸೇವಿಸುವುದು, ಕಾರ್ಬೋಹೈಡ್ರೇಟ್ (Carbohydrate) ಅಧಿಕವಾಗಿರುವ

ಆಹಾರಗಳನ್ನು ತಾತ್ಸಾರ ಮಾಡುವುದು, ಕೆಲವೇ ತರಕಾರಿಗಳನ್ನು ಪ್ರತಿನಿತ್ಯ ಬಳಸುವುದು, ಹಣ್ಣಿನ ರಸಗಳನ್ನೇ ವಿಪರೀತ ಸೇವಿಸುವುದು ಒಳ್ಳೆಯದಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ತೂಕ ಇಳಿಕೆಗೆ

ರೈನ್ಬೋ ಡಯೆಟ್ ಹೆಚ್ಚು ಜನಪ್ರಿಯವಾಗಿದೆ. ರೈನ್ಬೋ ಡಯಟ್ (Rainbow Diet) ಆಹಾರ ಪದ್ಧತಿ ಕಲರ್ ಫುಲ್ ಆಗಿರುತ್ತದೆ. ಹಣ್ಣು ಮತ್ತು ತರಕಾರಿಗಳನ್ನು ಹೊಂದಿರುವ ಡಯಟ್ ಇದಾಗಿದೆ.

ಈ ಡಯಟ್ ನಲ್ಲಿ ಹಣ್ಣುಗಳು ಮತ್ತು ತರಕಾರಿಗಳು ವಿವಿಧ ಬಣ್ಣಗಳಲ್ಲಿರುತ್ತವೆ. ಬಣ್ಣಬಣ್ಣದ ತರಕಾರಿ, ಹಣ್ಣುಗಳನ್ನು ಸೇವಿಸುವ ಮೂಲಕ ಪೋಷಕಾಂಶಗಳನ್ನು, ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಫೈಬರ್,

ಪೊಟ್ಯಾಸಿಯಮ್, ವಿಟಮಿನ್ ಸಿ (Potassium, Vitamin C) ಫ್ಲೇವನಾಯ್ಡ್, ಆರೋಗ್ಯಕರ ಕರುಳಿನ ಮೈಕ್ರೋಬಯೋಟಾವನ್ನು ಪಡೆಯಬಹುದು. ರೈನ್ಬೋ ಡಯಟ್ನ ಆಹಾರಗಳ ವಿವರ ಇಲ್ಲಿದೆ.

ಕೆಂಪು: ಟೊಮೇಟೋ, ಕೆಂಪು ಬಣ್ಣದ ದೊಣ್ಣೆ ಮೆಣಸಿನಕಾಯಿ, ಸ್ಟ್ರಾಬೆರ್ರಿ, ಕಲ್ಲಂಗಡಿ ಹಣ್ಣುಗಳು, ಇವುಗಳಲ್ಲಿರುವ ಪೋಷಕಾಂಶಗಳು ಹೃದಯ, ಮೂತ್ರಕೋಶ ಹಾಗೂ ಮೂತ್ರನಾಳಗಳನ್ನು ಕಾಯುತ್ತದೆ.

ಕೇಸರಿ: ಕೇಸರಿ ಬಣ್ಣದ ಕಿತ್ತಳೆ ಹಣ್ಣು, ಸಿಹಿ ಗೆಣಸು, ಆಪ್ರಿಕಾಟ್, ಕ್ಯಾರೆಟ್ (Carrot) ಇತ್ಯಾದಿಗಳು ಆಹಾರಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.

ಹಳದಿ: ಹಳದಿ ಬಣ್ಣದ ಅನನಾಸು, ಬಾಳೆಹಣ್ಣು, ಹಳದಿ ದೊಣ್ಣೆ ಮೆಣಸು, ನಿಂಬೆ, ಮುಸಂಬಿ ಇತ್ಯಾದಿಗಳು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು.

ಹಸಿರು: ಹಸಿರು ಬಣ್ಣದ ಬ್ರೊಕೋಲಿ (Broccoli), ಬೆಣ್ಣೆಹಣ್ಣು, ಕಿವಿ, ಹಾಗೂ ಹಸಿರು ಬಣ್ಣದ ಸೊಪ್ಪು ತರಕಾರಿಗಳು ಸಣ್ಣ ಮಕ್ಕಳಿಗೆ ಹಾಗೂ ಗರ್ಭಿಣಿ ಸ್ತ್ರೀಯರಿಗೆ ಹೆಚ್ಚು ಸೂಕ್ತವಾಗಿವೆ.

ನೀಲಿ ಹಾಗೂ ನೇರಳೆ: ಈ ಬಣ್ಣದ ಹಣ್ಣು ತರಕಾರಿಗಳಲ್ಲಿ ಸಾಕಷ್ಟು ಆಂಟಿ ಆಕ್ಸಿಡೆಂಟ್ಗಳು (Anti-Oxidant) ಇರುವುದರಿಂದ ಇವು ಅಧಿಕ ರಕ್ತದೊತ್ತಡವನ್ನು ಸಮತೋಲನಕ್ಕೆ ತರಲು ಅತ್ಯಂತ ಪ್ರಯೋಜನಕಾರಿ.

ಬಿಳಿ: ಬಿಳಿ ಬಣ್ಣದ ಹೂಕೋಸು, ಈರುಳ್ಳಿ, ಬೆಳ್ಳುಳ್ಳಿ, ಅಣಬೆ ಆಹಾರ ಹಲ್ಲು ಹಾಗೂ ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು.

ಇದನ್ನು ಓದಿ: ಚೊಂಬು ನೀಡಿರುವ ಕೇಂದ್ರ ಸರ್ಕಾರಕ್ಕೆ ಕನ್ನಡಿಗರೂ ಚೊಂಬು ನೀಡಬೇಕು : ಕಾಂಗ್ರೆಸ್ ನಿಂದ ವ್ಯಂಗ್ಯಭರಿತ ಜಾಹೀರಾತು ಪ್ರಕಟ

Exit mobile version