ರೈತರ ಹೋರಾಟ ಬೆಂಬಲಿಸಲು 25, 000 ಸೇನಾ ಪದಕಗಳು ವಾಪಸ್!

ನವದೆಹಲಿ, ಡಿ. 16: ಕೇಂದ್ರದ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಕಳೆದ 19 ದಿನಗಳಿಂದ ಹೋರಾಡುತ್ತಿರುವ ರೈತರಿಗೆ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ದೇಶ-ವಿದೇಶಗಳ ರಾಜಕಾರಣಿಗಳು, ಮಂತ್ರಿಗಳ ಬೆಂಬಲದ ಜೊತೆಗೆ ಈಗ ಮಾಜಿ ಸೈನಿಕರೂ ರೈತರ ಬೆಂಬಲಕ್ಕೆ ನಿಂತಿದ್ದಾರೆ. ಪ್ರತಿಭಟನಾ ನಿರತ ರೈತರಿಗೆ ಬೆಂಬಲ ಸೂಚಿಲು 25,000 ಸೇನಾ ಪದಕಗಳನ್ನು ಹಿಂದಿರುಗಿಸಲು ಮಾಜಿ ಸೈನಿಕರು ನಿರ್ಧರಿಸಿದ್ದಾರೆ. ಇದಕ್ಕಾಗಿ ರಾಷ್ಟ್ರಪತಿಯವರ ಭೇಟಿಗೆ ಸಮಯ ಕೇಳಿ ಸಬ್ಕಾ ಸೈನಿಕ್ ಸಂಘರ್ಷ ಸಮಿತಿ ಪತ್ರ ಬರೆದಿದೆ.

ಸಿಲಾನಿ ಕೇಸೋ ಮಾತನಾಡಿ, “ರೈತರು ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರದ ಮಂತ್ರಿಗಳು ರೈತರ ಸಮಸ್ಯೆ ಆಲಿಸುವುದನ್ನು ಬಿಟ್ಟು ಅವರನ್ನು ಖಾಲಿಸ್ತಾನಿಗಳು, ಭಯೋತ್ಪಾದಕರು ಎಂದು ಕರೆದು ಅವಮಾನ ಮಾಡುತ್ತಿದೆ. ಹಾಗಾಗಿ ನಾವು ರೈತರೊಂದಿಗೆ ನಿಲ್ಲಲು ಮತ್ತು ಸೇನಾ ಪದಕ ಹಿಂದಿರುಗಿಸಲು ಡಿಸೆಂಬರ್ 8 ರಂದೇ ರಾಷ್ಟ್ರಪತಿ ಕಚೇರಿಗೆ ಪತ್ರ ಬರೆದಿದ್ದೇವೆ. ಆದರೆ ರಾಷ್ಟ್ರಪತಿಗಳ ಭೇಟಿಗೆ ಅವಕಾಶ ನೀಡಿಲ್ಲ. ನಾವು ನಮ್ಮ ನಿರ್ಧಾರಕ್ಕೆ ದೃಢವಾಗಿದ್ದೇವೆ. ರಾಷ್ಟ್ರಪತಿಗಳ ಭೇಟಿಗೆ ಅವಕಾಶ ನೀಡುವವರೆಗೂ ಕಾಯುತ್ತೇವೆ” ಎಂದಿದ್ದಾರೆ.

Exit mobile version