ಮಾಜಿಯಾದರೂ ಇಳಿಯದ ರಾಜಹುಲಿ ಖದರ್ : ಟ್ವಿಟರ್ ನಲ್ಲಿ 10 ಲಕ್ಷ ಫಾಲೋವರ್

ಬೆಂಗಳೂರು, ಆ. 11: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದರೂ ಕೂಡ ತಮ್ಮ ವೈಯಕ್ತಿಕ ಹಾಗೂ ರಾಜಕೀಯ ಇಮೇಜ್ ಅನ್ನು ಹಾಗೆ ಉಳಿಸಿಕೊಂಡಿದ್ದಾರೆ.

ಕಳೆದ ಒಂದು ತಿಂಗಳಿನಿಂದ ರಾಜ್ಯ ರಾಜಕೀಯ ಬೆಳವಣಿಗೆಯ್ಲಲಿ ಸಾಕಷ್ಟು ಬದಲಾವಣೆಗಳು ನಡೆದಿದ್ದು, ಸರಿ ಸುಮಾರು 1 ತಿಂಗಳಿನಿಂದ ಯಡಿಯೂರಪ್ಪನವರ ಬಗ್ಗೆ ಸಾಕಷ್ಟು ಸುದ್ದಿಗಳು, ಉಹಾಪೋಹಗಳು ಹರಿದಾಡುತ್ತಿದ್ದವು.  ರಾಜ್ಯದಲ್ಲಿನ ಪ್ರಭಾವಿ ಲಿಂಗಾಯಿತ ರಾಜಕಾರಣಿಗಳಲ್ಲಿ ಒಬ್ಬರಾದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿದರೂ ಕೂಡ ಟ್ಟಿಟರ್ ನಲ್ಲಿ ತಮ್ಮ ಹಿಂಬಾಲಕರನ್ನು ಹೆಚ್ಚಿಸಿಕೊಂಡಿದ್ದು ಇದೀಗ ಅವರ ಹಿಂಬಾಲಕರ ಸಂಖ್ಯೆ ಒಂದು ಮಿಲಿಯನ್ ಆಗಿದೆ. ಮತ್ತೊಂದು ವಿಶೇಷವೆಂದರೆ 10 ಲಕ್ಷ ಹಿಂಬಾಲಕರನ್ನು ಪಡೆದ ರಾಜ್ಯದ ಮೊದಲ ರಾಜಕಾರಣಿ ಯಡಿಯೂರಪ್ಪ ಆಗಿದ್ದಾರೆ.

ಈ ಬಗ್ಗೆ ಟ್ವಿಟ್ ಮಾಡಿದ ಅವರು “ಟ್ಟಿಟರ್ ನ್ಲಲಿ ನಮ್ಮ ಬಳಗ ದಶಲಕ್ಷ ಮೈಲಿಗಲ್ಲನ್ನು ದಾಟಿರುವುದು ನಿಮ್ಮೆಲರ ಪ್ರೀತಿ, ಅಭಿಮಾನಗಳ ಸಂಕೇತ ಎಂದು ಭಾವಿಸುತ್ತೇನೆ.

ತಮ್ಮ ಬೆಂಬಲ, ಅಭಿಮಾನದಿಂದ ಸದಾ ನನ್ನನ್ನು ಹಾರೈಸುತ್ತಿರುವ ಎಲ್ಲರಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳು.” ಎಂದು ಟ್ವಿಟ್ ಮಾಡಿದ್ದಾರೆ.

Exit mobile version