ಕೆಲ ಮಾಧ್ಯಮಗಳು ಮುಸ್ಲಿಮರನ್ನು ದೇಶವಿರೋಧಿಗಳಂತೆ ಬಿಂಬಿಸುತ್ತಿದೆ: ಪತ್ರಕರ್ತ ರಾಜ್ ದೀಪ್ ಸರ್ದೇಸಾಯಿ

New Delhi: ಸಮಾಜದ ವಿವಿಧ ಸ್ತರಗಳಲ್ಲಿ ಮುಸ್ಲಿಮರನ್ನು (Rajdeep Sardesai Viral Statement) ಅಂಚಿಗೆ ತಳ್ಳುತ್ತಿರುವ ಕುರಿತು ಗಮನ ಸೆಳೆದ ಸರ್ದೇಸಾಯಿ, ಭಾರತದಲ್ಲಿ ವ್ಯವಸ್ಥಿತವಾಗಿ

ಮುಸ್ಲಿಮರ ಅಸ್ತಿತ್ವವನ್ನೇ ನಿರಾಕರಿಸುವ ಕೆಲಸ ನಡೆಯುತ್ತಿದೆ. ಕೆಲ ಮಾದ್ಯಮಗಳು ಮುಸ್ಲಿಮರನ್ನು ದೇಶವಿರೋಧಿಗಳಂತೆ ಬಿಂಬಿಸುತ್ತಿದೆ.ದ್ವೇಷ ರಾಜಕೀಯ ಪ್ರಚಾರ ಮಾಡುವುದರಲ್ಲಿ ಮಾಧ್ಯಮಗಳು

ಬಹಳ ದೊಡ್ಡ ಪಾತ್ರ ನಿರ್ವಹಿಸುತ್ತಿವೆ. ಎಂದು ಮಾಧ್ಯಮಗಳ (Rajdeep Sardesai Viral Statement) ಮೇಲೆ ಕೆಂಡಕಾರಿದ್ದಾರೆ.

‘ಅಬ್ ಕಿ ಬಾರ್ ಫೋರ್ ಹಂಡ್ರೆಡ್ ಫಾರ್’ (Ab Ki Bar Four Hundred For) ಎಂದು ಒಂದು ಪಕ್ಷ ಘೋಷಿಸ್ತಾ ಇದೆ . ಆದರೆ ಆ ಪಕ್ಷದಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ಸಂಸದ ಇಲ್ಲ, ಸಂಪುಟದಲ್ಲಿ ಕೂಡ

ಒಬ್ಬನೇ ಒಬ್ಬ ಮುಸ್ಲಿಂ ಇಲ್ಲ. ಮುಸ್ಲಿಂ ದ್ವೇಷ ಪ್ರಚಾರದಲ್ಲಿ ಮಾಧ್ಯಮಗಳು ತೊಡಗಿವೆ. ತಮ್ಮ ಆತ್ಮ ವಿಮರ್ಶೆಯನ್ನು ಮಾಡಿಕೊಳ್ಳುವುದು ಒಳ್ಳೆಯದು ಎಂದು ರಾಜ್ ದೀಪ್ ಸರ್ದೇಸಾಯಿ (Rajdeep

Sardesai) ಹೇಳಿದ್ದಾರೆ. 

ಇದಲ್ಲದೆ, ಆಡಳಿತಾರೂಢ ಪಕ್ಷವು 350 ರಿಂದ 400 ಸಂಸದರನ್ನು ಗೆಲ್ಲಬಹುದು ಎಂಬ ಮುನ್ನೋಟವು, ಭಾರತದ ಜನಸಂಖ್ಯೆಯಲ್ಲಿ ಶೇ. 13ರಷ್ಟು ಮತದಾರರನ್ನು ಹೊಂದಿರುವ ಮುಸ್ಲಿಂ ಸಮುದಾಯವನ್ನು

ಪ್ರಾತಿನಿಧ್ಯದಿಂದ ಏಕೆ ಹೊರಗಿಡಬೇಕು? ಎಂದು ಅವರು ಪ್ರಶ್ನಿಸಿದ್ದಾರೆ. ಭಾರತೀಯ ರಾಜಕಾರಣದಲ್ಲಿನ ಪ್ರಾತಿನಿಧ್ಯ ಮತ್ತು ಒಳಗೊಳ್ಳುವಿಕೆ ಸುತ್ತಲಿನ ಗಂಭೀರ ವಿಷಯಗಳ ಕುರಿತು ಹೊಸ ದಿಲ್ಲಿಯಲ್ಲಿ

(Delhi) ಆಯೋಜಿಸಲಾಗಿದ್ದ ಇಂಡಿಯಾ ಟುಡೇ ಕಾನ್ ಕ್ಲೇವ್ 202421ನೇ ಆವೃತ್ತಿಯಲ್ಲಿ ಖ್ಯಾತ ಪತ್ರಕರ್ತ ರಾಜ್ ದೀಪ್ ಸರ್ದೇಸಾಯಿ ಚಿಂತನೆಗೆ ಹಚ್ಚುವಂಥ ಭಾಷಣ ಮಾಡಿದ್ದಾರೆ.

ದೇಶದ ಸಂಸತ್ತಿನಲ್ಲಿ ಮುಸ್ಲಿಮರ ಪ್ರಾತಿನಿಧ್ಯದ ಕೊರತೆ ಹಾಗೂ ವೈವಿಧ್ಯಮಯ ಜನಾಂಗಗಳನ್ನು ಹೊಂದಿರುವ ಭಾರತದ ಮೇಲೆ ಇಂಥ ಪ್ರವೃತ್ತಿಯಿಂದ ಆಗಲಿರುವ ಪರಿಣಾಮಗಳ ಸುತ್ತ ಸರ್ದೇಸಾಯಿ

ಭಾಷಣ ಮಾಡಿದ್ದಾರೆ.ರಾಜ್ ದೀಪ್ ಸರ್ದೇಸಾಯಿ ಅವರ ಈ ಭಾಷಣವು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಭಾರಿ ಚರ್ಚೆಗೆ ಒಳಗಾಗುತ್ತಿದೆ.

ಇದನ್ನು ಓದಿ: ಮಂಗಳೂರಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಮರಳುಗಾರಿಕೆ ಅಕ್ರಮದ ಕುರಿತು ಹೊಸ ಬಾಂಬ್ ಸಿಡಿಸಿದ ಶಾಸಕ ವೇಧವ್ಯಾಸ ಕಾಮತ್ 

Exit mobile version