Mangalore: ಕಡಲ ತೀರ ಮಂಗಳೂರಿನಲ್ಲಿ (Sand Mafia in Mlore) ಎಗ್ಗಿಲ್ಲದೇ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎನ್ನುವುದು ಈಗಾಗಲೇ ಎಲ್ಲರಿಗೂ ತಿಳಿದ ವಿಷಯವೇ ಅಗಿದೆ.
ಪ್ರತಿನಿತ್ಯ ನೂರಾರು ಲೋಡ್ ಮರಳನ್ನು ರಾತ್ರೋರಾತ್ರಿ ಸಾಗಾಟ ಮಾಡಲಾಗುತ್ತಿದೆ. ಇದಕ್ಕೆ ಅಧಿಕಾರಿಗಳು ಕೂಡ ಸಾಥ್ ನೀಡಿದ್ದಾರೆ. ಮರಳು ಮಾಫಿಯಾದಿಂದ (Sand Mafia)
ಮಾಮೂಲಿ ಪಡೆದುಕೊಂಡು ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದ ಕೆಲ ಅಧಿಕಾರಿಗಳು ಇಂತಹ ಅಕ್ರಮಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿದೆ.
ಇನ್ನು ಮಾಫಿಯಾದ ಪುಂಡರು ಅತೀ ವೇಗವಾಗಿ ಮರಳನ್ನು ಸಾಗಿಸುವ ಬರದಲ್ಲಿ ಬೇಕಾಬಿಟ್ಟಿ ಚಾಲನೆ ಮಾಡುತ್ತಿದ್ದಾರೆ. ನಂಬರ್ ಪ್ಲೇಟ್ಗೆ (Number Plate) ಗ್ರೀಸ್ ಮತ್ತು ಮಣ್ಣನ್ನು ಮೆತ್ತಿಕೊಂಡು
ವೇಗವಾಗಿ ಮನಸೋಯಿಚ್ಚೆ ಚಲಾಯಿಸಿ ಅಪಘಾತಗಳು ಸಂಭವಿಸುತ್ತಿವೆ. ಈ ಮರಳು ಮಾಫಿಯಾದ ಹಿಂದೆ ಸರ್ಕಾರವೇ ಇದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇಧವ್ಯಾಸ ಕಾಮತ್ (Vedavyasa
Kamath) ಆರೋಪ ಮಾಡಿದ್ದಾರೆ. ಈ (Sand Mafia in Mlore) ಮಾಫಿಯಾದಲ್ಲಿ ಕಾಂಗ್ರೆಸ್ (Congress) ಜನರಿದ್ದಾರೆ.
ಸದ್ಯ ಲೋಕಸಭಾ ಚುನಾವಣೆ (Lok Sabha Election) ನಡೆಸಲು ಇಲ್ಲಿಂದ ಕೂಡ ಹಣ ಹೋಗುತ್ತಿದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ನೇತ್ರಾವತಿ ನದಿ ಒಡಲಿಗೆ ಕನ್ನ ಹಾಕಿ ಮರಳು ತಗೀತಾ
ಇರುವುದರಿಂದಲೇ ಮಂಗಳೂರಿನಲ್ಲಿ ಕುಡಿಯುವ ನೀರಿಗೆ ಹಾಗೂ ಕೃಷಿಗೆ ಸಮಸ್ಯೆ ಕೂಡ ಆಗುತ್ತಿದೆ ಎಂದು ಹೇಳಿದ್ದಾರೆ.ರಾತ್ರಿ ವೇಳೆ ಅತೀ ವೇಗದಿಂದ ಅಪಘಾತ ಉಂಟು ಮಾಡುವ ಲಾರಿಗಳ ಮೇಲೆ
ರಸ್ತೆಯಲ್ಲಿ ಜನರೇ ಆಕ್ರೋಶ ವ್ಯಕ್ತಪಡಿಸುವಂತ ಘಟನೆಗಳು ನಡೆಯುತ್ತಿವೆ. ಸದ್ಯ ಅಕ್ರಮ ಮರಳುಗಾರಿಕೆ ನಿಲ್ಲಿಸಿ ಎನ್ನುವ ಕೂಗು ಭ್ರಷ್ಟ ಅಧಿಕಾರಿಗಳಿಗೆ ಅದ್ಯಾವಾಗ ಕೇಳುತ್ತದೆ ಕಾದು ನೋಡಬೇಕಿದೆ
ಮರಳು ದಂಧೆಕೋರರ ದುರಾಸೆಯಿಂದಾಗಿ, ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಶಾಂತಿಮುರುಗೇರು ಎಂಬಲ್ಲಿ ನಿರ್ಮಿಸಲಾಗಿರುವ ಕಿಂಡಿ ಅಣೆಕಟ್ಟು ಜಲಾಶಯ ಈಗ ಬರಿದಾಗಿದೆ.
ಈ ವರ್ಷ ಮಾಧ್ಯಮದವರ ಸಕಾಲಿಕ ಎಚ್ಚರಿಕೆಯ ಹಿನ್ನೆಲೆಯಲ್ಲಿ ಹಲಗೆ ಜೋಡಣೆ ಯಶಸ್ವಿಯಾಗಿತ್ತು. ಅಣೆಕಟ್ಟಿನಲ್ಲಿ ಭರಪೂರ ನೀರು ಶೇಖರಣೆಯಾಗಿತ್ತು. ಸಂಬಂಧಪಟ್ಟ ಇಲಾಖೆಯವರು ಹೇಳುವ ಪ್ರಕಾರ
ಅಣೆಕಟ್ಟೆಯಿಂದ ಮೇಲೆ ಸುಮಾರು ಹನ್ನೆರಡು ಕಿಲೋ ಮೀಟರ್ ದೂರದವರೆಗೆ ನದಿಯಲ್ಲಿ ನೀರು ಶೇಖರಣೆಯಾಗಿತ್ತು.
ಏನಿಲ್ಲವೆಂದರೂ ನದಿಯ ಮೇಲಿನ ಭಾಗದ ಏಳೆಂಟು ಕಿಲೋ ಮೀಟರ್ ದೂರದವರಗೆ ಸಮೃದ್ಧವಾದ ನೀರು ಶೇಖರಣೆ ಕಾಣುತ್ತಿತ್ತು. ಆದರೆ ನಾಲ್ಕೈದು ದಿನಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ಹಲವು
ಅನುಮಾನಗಳಿಗೆ ಕಾರಣವಾಗಿತ್ತು.ಅಣೆಕಟ್ಟಿಗೆ ಅಳವಡಿಸಲಾಗಿದ್ದ ಹಲಗೆಯನ್ನು ತೆಗೆದು, ಹಲಗೆಯೊಂದರ ಅಡಿಯಲ್ಲಿ ಕಲ್ಲು ಇಟ್ಟು ಮರಳನ್ನು ದೋಚುತ್ತಿದ್ದಾರೆ ಎಂದು ಶಾಸಕ ವೇಧವ್ಯಾಸ ಕಾಮತ್ ಕಿಡಿ ಕಾರಿದ್ದಾರೆ.