ರಾಜ್​ ಬಿ. ಶೆಟ್ಟಿ ನಟನೆ ಮತ್ತು ನಿರ್ದೇಶನದ ಹೊಸ ಚಿತ್ರದ ಹೆಸರು ‘ಟೋಬಿ’ : ಬಿಡುಗಡೆ ದಿನಾಂಕವೂ ಬಹಿರಂಗ

Bangalore: ಕನ್ನಡ ಚಿತ್ರರಂಗದಲ್ಲಿ ರಾಜ್ ಬಿ. ಶೆಟ್ಟಿ (Rajshetty new film Tobi) ಅವರು ನಟ ಮತ್ತು ನಿರ್ದೇಶಕರಾಗಿ ವಿಶೇಷವಾಗಿ ಗುರುತಿಸಿಕೊಂಡಿದ್ದಾರೆ. ವಿಭಿನ್ನ ಸಿನಿಮಾಗಳನ್ನು ಮಾಡುವ .

ಮೂಲಕ ಸ್ಯಾಂಡಲ್ ವುಡ್ ನಲ್ಲಿ (Sandalwood) ನೆಲೆ ಕಂಡುಕೊಂಡಿದ್ದಾರೆ.ಇದೀಗ ಅವರ ಅಭಿಮಾನಿಗಳು ಬಹು ನಿರೀಕ್ಷೆಯಿಂದ ಕಾಯುತ್ತಿರುವ ಅವರ ಹೊಸ ಸಿನಿಮಾದ ಮಾಹಿತಿಯನ್ನು ಇಂದು ಹಂಚಿಕೊಂಡಿದ್ದಾರೆ.

ಅವರ ಹೊಸ ಚಿತ್ರದ ಹೆಸರು “ಟೋಬಿ”(Tobi).ಈ ಶೀರ್ಷಿಕೆಯನ್ನು ಘೋಷಿಸಲು ಮೋಷನ್​ ಪೋಸ್ಟರ್​ ಅನ್ನು ಕೂಡ ಹಂಚಿಕೊಳ್ಳಲಾಗಿದೆ. ‘ಮಾರಿ.. ಮಾರಿ.. ಮಾರಿಗೆ ದಾರಿ’ ಎಂಬ ಶೀರ್ಷಿಕೆಯೊಂದಿಗೆ

ಈ ಹೊಸ ಸುದ್ದಿ ಹಂಚಿಕೊಂಡಿದ್ದಾರೆ. ಜೊತೆಗೆ ರಾಜ್ ಬಿ ಶೆಟ್ಟಿ “ಟೋಬಿ” ಚಿತ್ರದ ಬಿಡುಗಡೆ ದಿನಾಂಕದ ಬಗ್ಗೆ ಕೂಡ ಮಾಹಿತಿ ನೀಡಿದರು. ಚಿತ್ರ ಆಗಸ್ಟ್ 25 ರಂದು ಬಿಡುಗಡೆಯಾಗಲಿದೆ.

ಇದಕ್ಕಾಗಿ ಅಭಿಮಾನಿಗಳು ಸಹ (Rajshetty new film Tobi) ಕಾಯುತ್ತಿದ್ದಾರೆ.

ಈ ಹಿಂದೆ ರಾಜ್ ಬಿ ಶೆಟ್ಟಿ ನಿರ್ದೇಶನದಲ್ಲಿ ಒಂದು ಮೊಟ್ಟೆಯ ಕಥೆ (Ondu motteya kathe) ಯಶಸ್ವಿಯಾಗಿ ಪ್ರದರ್ಶನಗೊಂಡಿತ್ತು ಅಷ್ಟೇ ಅಲ್ಲದೆ ಅವರ ನಿರ್ದೇಶನದಲ್ಲಿ ನಿರ್ಮಾಣವಾಗುತ್ತಿರುವ ಮತ್ತೊಂದು

ಚಿತ್ರ “ಸ್ವಾತಿ ಮುತ್ತಿನ ಮಳೆ ಹನಿಯೇ” (Swathi mutthina male haniye) ಕೂಡ ಇದೀಗ ನಿರೀಕ್ಷೆಯನ್ನು ಹೆಚ್ಚಿಸಿದೆ. ಆ ಚಿತ್ರ ಬಿಡುಗಡೆಯಾಗುವ ಮೊದಲೇ ಅವರು ಹೊಸ ಚಿತ್ರದ ಬಗ್ಗೆ

ಇದೀಗ ಮಾಹಿತಿ ನೀಡಿದರು. “‘ಟೋಬಿ’” ಚಿತ್ರದ ಮೋಷನ್ ಪೋಸ್ಟರ್ ಹೆಚ್ಚು ಗಮನ ಸೆಳೆದಿದೆ. ಏಕೆಂದರೆ ಅವರು ಪ್ರತಿ ಚಿತ್ರದಲ್ಲೂ ವಿಭಿನ್ನ ಶೈಲಿಗಳನ್ನು ಪ್ರಯತ್ನಿಸುತ್ತಾರೆ.

“ಟೋಬಿ” ಚಿತ್ರವು ತುಂಬಾ ವಿಭಿನ್ನವಾಗಿರುತ್ತದೆ ಎಂಬ ಭರವಸೆ ಮೂಡಿದೆ.. “ಗರುಡ ಗಮನ ವೃಷಭ ವಾಹನ” (Garuda Gamana Vrishabha Vahana) ಚಿತ್ರವನ್ನು ಲೈಟರ್ ಬುದ್ಧ ಫಿಲಂಸ್ ನಿರ್ಮಿಸಿದೆ.

ಈಗ ಅದೇ ಬ್ಯಾನರ್ ನಲ್ಲಿ”ಟೋಬಿ” ಸಿನಿಮಾ ತಯಾರಾಗುತ್ತಿದೆ. ಅಗಸ್ತ್ಯ ಫಿಲಂಸ್ ಕೂಡ ಇದಕ್ಕೆ ಬೆಂಬಲ ನೀಡುತ್ತಿದೆ. ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಜೊತೆಗೆ ಸಂಯುಕ್ತ ಹೊರನಾಡು ಮತ್ತು ಚೈತ್ರಾ

ಆಚಾರ್ ಕೂಡ ನಟಿಸಿದ್ದಾರೆ. ಈ ಚಿತ್ರವು ಖಂಡಿತಾ ಜನಸಾಮಾನ್ಯರ ಸಿನಿಮಾ ಎಂದು ರಾಜ್ ಬಿ ಶೆಟ್ಟಿ ಹೇಳಿದರು.

ಇದನ್ನೂ ಓದಿ : 2026ರ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ಆಡಲ್ಲ : ಅಭಿಮಾನಿಗಳಿಗೆ ಶಾಕ್ ಕೊಟ್ಟ ಲಿಯೋನೆಲ್ ಮೆಸ್ಸಿ..!

ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಮತ್ತು ಟೋಬಿಯನ್ನು ಚಿತ್ರ ತಂಡದ ಭಾಗವಾಗಿ ಹೊಂದಿದ್ದಕ್ಕಾಗಿ ಧನ್ಯವಾದಗಳು. ರಾಜ್ ಬಿ ಶೆಟ್ಟಿ ಮತ್ತು ಇಡೀ ತಂಡಕ್ಕೆ ಪ್ರೀತಿಗಾಗಿ ಧನ್ಯವಾದ”

ಎಂದು ಸಂಯುಕ್ತ ಹೊರನಾಡು (Sanyuktha Hornadu) ಸಾಮಾಜಿಕ ಜಾಲತಾಣದಲ್ಲಿ (Social Media) ಬರೆದುಕೊಂಡಿದ್ದಾರೆ.

ಇಲ್ಲಿಯವರೆಗೆ ನನ್ನ ತಂಡದ ಸದಸ್ಯರೆಲ್ಲರೂ ಮಿಡ್‌ಬಜೆಟ್‌ ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದರು. ಬಿಗ್ ಬಜೆಟ್ ಸಿನಿಮಾ ಮಾಡಲು ನಾವು ಮೊದಲ ಬಾರಿಗೆ ಒಟ್ಟಿಗೆ ಸೇರಿದ್ದೇವೆ.

ಪ್ರತಿಯೊಬ್ಬ ಕಥೆಗಾರನಿಗೆ ಅನುಭವ ಬಹಳ ಮುಖ್ಯ. ನನ್ನ ಅನುಭವವನ್ನು ಈ ಸಿನಿಮಾದಲ್ಲಿ ತೋರಿಸುದ್ದೇನೆ, ನಾನು ನನ್ನ ಕೋಪವನ್ನು ಸೃಜನಾತ್ಮಕವಾಗಿ ಬಳಸುತ್ತೇನೆ.

ನೀವು ಈ ಸಿನಿಮಾವನ್ನು ಎಂಜಾಯ್ ಮಾಡುತ್ತೀರಿ ಎಂಬ ನಂಬಿಕೆ ಇದೆ ಎನ್ನುತ್ತಾರೆ ರಾಜ್ ಬಿ. ಶೆಟ್ಟಿ.

ರಶ್ಮಿತಾ ಅನೀಶ್

Exit mobile version