ರಕ್ತದೊತ್ತಡವನ್ನು ಕಡಿಮೆ ಮಾಡಲು ಇದನ್ನು ಬಳಸಿ

ಬೆಳ್ಳುಳ್ಳಿಯಲ್ಲಿ ರೋಗನಿರೋಧಕ ಶಕ್ತಿಯಿದ್ದು ಇದನ್ನು ಆಯುರ್ವೇದ ಔಷಧಿಗಳ ಬಳಕೆಯಲ್ಲಿ ಉಪಯೋಗಿಸುತ್ತಾರೆ.  ನಿಯಮಿತವಾಗಿ   ಇದನ್ನು ಸೇವನೆ ಮಾಡುವುದರಿಂದ ಅನೇಕ ಕಾಯಿಲೆಗಳಿಂದ ದೂರವಿರಬಹುದು.  ರಕ್ತದ ಒತ್ತಡವನ್ನು ಕಡಿಮೆ ಮಾಡಬಹುದು.  ರಕ್ತನಾಳಗಳನ್ನು ಶುದ್ಧೀಕರಣಗೊಳಿಸುವುದು.  ಇದರಲ್ಲಿರುವ ಕೆಲವು ಖನಿಜಾಂಶಗಳು ಹಾಗೂ ವಿಟಮಿನ್‌ಗಳು ಕಿಡ್ನಿ ಮೂತ್ರನಾಳ ಹಾಗೂ ಯಕ್ರತ್ ಆರೋಗ್ಯವನ್ನು ಸುಧಾರಣೆಗೊಳಿಸುತ್ತದೆ.

ಹಸಿ ಬೆಳ್ಳುಳ್ಳಿಯಲ್ಲಿ ಆಂಟಿ ಆಕ್ಸಿಡೆಂಟ್‌ಗಳಿದ್ದು, ಪ್ರತೀ ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ  ಕೆಟ್ಟ ಕೊಬ್ಬನ್ನು ಕರಗಿಸಿ ತೂಕ ಇಳಿಸಬಹುದು. ಬೆಳ್ಳುಳ್ಳಿಯನ್ನು ಕಾಯಿಸಿ ತಿನ್ನುವುದರಿಂದ ಚಯಾಪಚಯ ಕ್ರಿಯೆಯು ಸರಾಗವಾಗಿ ನಡೆದು  ಮಲಬದ್ಧತೆಯನ್ನು ನಿವಾರಣೆಗೊಳಿಸುವುದು. ಬೆಳ್ಳುಳ್ಳಿಯನ್ನು  ಹಸಿಯಾಗಿ ಜಜ್ಜಿ ಸೇವಿಸುವುದರಿಂದ ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ಹತೋಟಿಯಲ್ಲಿಡಲು ಸಹಾಯ ಮಾಡುವುದು. ಮೆದುಳಿನ ರಾಸಾಯನಿಕದ ಅಸಮತೋಲನದಿಂದ ಬರುವ ಖಿನ್ನತೆಯನ್ನು ದೂರ ಮಾಡಲು ಬೆಳ್ಳುಳ್ಳಿ ಸಹಾಯ ಮಾಡುವುದು.

Exit mobile version