ವಿಧಾನಸೌಧದಲ್ಲಿ ನಮಾಜ್‌ಗೆ ಅವಕಾಶ ಕೊಟ್ಟರೆ ಹೋರಾಟ: ಶ್ರೀರಾಮಸೇನೆ ಎಚ್ಚರಿಕೆ

Davangere: ನಮಾಜ್ ಸಲ್ಲಿಸಲು ವಿಧಾನಸೌಧದ ಯಾವುದಾದರೂ ಒಂದು ಕೊಠಡಿಯಲ್ಲಿ ಮುಸ್ಲಿಂ (Ram Sena warns UTKhadar) ಜನಪ್ರತಿನಿಧಿಗಳಿಗಾಗಿ ಅವಕಾಶ ಕಲ್ಪಿಸಬೇಕು ಎಂದು

Vidhana Soudha

ಬೇಡಿಕೆಯನ್ನು ಇಡಲಾಗಿದೆ. ಇದಕ್ಕೆ ಇನ್ನು ಸರ್ಕಾರ ಒಪ್ಪಿಗೆ ನೀಡಿಲ್ಲ. ಆದರೆ ಅದಕ್ಕೂ ಮೊದಲೇ ಹಿಂದೂ ಸಂಘಟನೆಗಳು ಇದರ ವಿರುದ್ಧ ದನಿಯೆತ್ತಿವೆ. ಇತ್ತೀಚೆಗೆ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್

ಮುತಾಲಿಕ್ (Pramod Motalik )ಅವರು ವಿಧಾನಸೌಧದಲ್ಲಿ (Vidhana Soudha) ನಮಾಜ್ ಮಾಡಲು (Namaz) ಅದು ಮಸೀದಿಯಲ್ಲ ಎಂದು ಕಿಡಿಕಾರಿದ್ದರು. ನಮಾಜ್ ಗೆ ಅನುಮತಿ ಕೊಟ್ಟರೆ

ಹೋರಾಟ ಮಾಡಲಾಗುತ್ತದೆ ಎಂದು ದಾವಣಗೆರೆಯಲ್ಲಿ ಜು.16ರಂದು ಮಾತಾಡಿರುವ ಶ್ರೀರಾಮಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ (Gangadhar Kulkarni) ಅವರು

(Ram Sena warns UTKhadar) ಎಚ್ಚರಿಸಿದ್ದಾರೆ.

ಇದನ್ನು ಓದಿ: ವಿಪಕ್ಷಗಳ 2ನೇ ಸಭೆಗೆ ಬೆಂಗಳೂರು ಸಜ್ಜು ; ಚುನಾವಣಾ ತಂತ್ರದ ಬಗ್ಗೆ ಚರ್ಚೆ ಸಾಧ್ಯತೆ

ವಿಧಾನ ಸೌಧದಲ್ಲಿ ನಮಾಜ್ ಮಾಡಲು ಜೆಡಿಎಸ್‌ ವಿಧಾನಪರಿಷತ್‌ ಸದಸ್ಯ ಬಿ.ಎಂ ಫಾರೂಕ್ (B M Farook) ಅವಕಾಶ ಕೇಳಿರುವುದು ಖಂಡನೀಯ. ಒಂದು ವೇಳೆ ಸ್ಪೀಕರ್ ಇದಕ್ಕೆಲ್ಲಾ ಅವಕಾಶ ನೀಡಿದ್ರೆ

ಶ್ರೀ ರಾಮ ಸೇನೆ ತೀವ್ರ ಹೋರಾಟ ನಡೆಸುವ ಜೊತೆಗೆ ವಿಧಾನಸಭೆಗೆ ನುಗ್ಗಿ ಹನುಮಾನ್ ಚಾಲೀಸಾ ಪಠಿಸಲಾಗುವುದು ಎಂದು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಎಚ್ಚರಿಸಿದ್ದಾರೆ.

ಶಾಸಕ ಫಾರೂಕ್ ಬೇಡಿಕೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ತಿಳಿಸಿದರು. ಬಿಇ ಇಂಜಿನಿಯರಿಂಗ್ ಮಾಡಿರುವ ಫಾರೂಕ್ ಓರ್ವ ಉದ್ಯಮಿಯಾಗಿದ್ದು,

ಅವಿದ್ಯಾವಂತರಲ್ಲ ಅವರ ಬೇಡಿಕೆಯನ್ನು ಸ್ಪೀಕರ್ (Speaker) ಕಡತದಿಂದ ತೆಗೆಯಬೇಕು. ಅವರು ಕ್ಷಮೆ ಕೇಳದಿದ್ದರೆ ಅಧಿವೇಶನದಿಂದ ಅವರನ್ನು ಅಮಾನತು ಮಾಡಬೇಕೆಂದು ಗಂಗಾಧರ್ ಆಗ್ರಹಿಸಿದರು.

Exit mobile version