ಚುನಾವಣೆ ಬಂದ್ರೆ ಸಾಕು ಆಸ್ಪತ್ರೆ ಸೇರ್ತಾರೆ: ಹೆಚ್​ಡಿಕೆ ಬಗ್ಗೆ ಶಾಸಕ ಬಂಡೀಸಿದ್ದೇಗೌಡ ವ್ಯಂಗ್ಯ

Mandya: ಎಚ್.ಡಿ. ಕುಮಾರಸ್ವಾಮಿ (H.D.Kumaraswamy) ಅವರು ಯಾವುದೇ ಚುನಾವಣೆ ಬರಲಿ, ತಕ್ಷಣ (Ramesh Bandisiddegowda against HDK) ಹೃದಯದ ಶಸ್ತ್ರ ಚಿಕಿತ್ಸೆ ಅಂತಾ

ಆಸ್ಪತ್ರೆ ಸೇರ್ತಾರೆ. ಆಸ್ಪತ್ರೆಯಲ್ಲಿ ಕೇವಲ 2-3 ದಿನ ಇದ್ದು. ನಂತರ ದಿಢೀರನೇ ಇಡೀ ರಾಜ್ಯಾದ್ಯಂತ ಪ್ರಚಾರ ಮಾಡ್ತಾರೆ. ಮೂರೇ ದಿನದಲ್ಲಿ ಹಾರ್ಟ್ ಆಪರೇಷನ್ ಹೇಗೆ ಆಗುತ್ತೆ. ಅದು ಹೇಗೆ ಸಾಧ್ಯ

ಅನ್ನೋದು ನನಗೆ ಅರ್ಥವಾಗುತ್ತಿಲ್ಲ ಎಂದು ಹೆಚ್.ಡಿ.ಕುಮಾರಸ್ವಾಮಿ ಅವರ ಹೃದಯ ಶಸ್ತ್ರಚಿಕಿತ್ಸೆ ಬಗ್ಗೆ ಕಾಂಗ್ರೆಸ್ ಶಾಸಕ ರಮೇಶ್ ಬಂಡೀಸಿದ್ದೇಗೌಡ (Ramesh Bandisiddegowda) ಅನುಮಾನ

ವ್ಯಕ್ತಪಡಿಸಿದ್ದಾರೆ.

ಮಂಡ್ಯದ ಮಳವಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದ ಕಾಂಗ್ರೆಸ್ (Congress) ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಎಚ್.ಡಿ.ಕುಮಾರಸ್ವಾಮಿ ಅವರು ಚುನಾವಣೆ ಬಂತು ಎಂದರೇ

ಸಾಕು ಆಸ್ಪತ್ರೆ ಸೇರ್ತಾರೆ. ನಂತರ ಹಾರ್ಟ್ ಆಪರೇಷನ್ (Heart Operation) ಎನ್ನುತ್ತಾರೆ. 4ನೇ ದಿನಕ್ಕೆ ಮರಳಿ ಪ್ರಚಾರಕ್ಕೆ ಬರುತ್ತಾರೆ. ಅದು ಹೇಗೆ ಸಾಧ್ಯ. ನಮ್ಮ ಚೆಲುವಣ್ಣನಿಗೆ ಕುಮಾರಸ್ವಾಮಿ

ಅವರಿಗೆ ಇರುವಂತ ಹೃದಯ ಸಮಸ್ಯೆಯೇ ಇದೆ. ಇವರು ಒಮ್ಮೆ ಆಸ್ಪತ್ರೆಗೆ ಸೇರಿದರೆ, ಒಂದು ತಿಂಗಳಾದ್ರು ಹೊರಗೆ ಬರೋದಿಲ್ಲ. ಆದರೆ ಎಚ್.ಡಿ.ಕುಮಾರಸ್ವಾಮಿ ಅವರು ಕೇವಲ 2-3 ದಿನಗಳಲ್ಲೇ

ಹೊರಗೆ ಬರ್ತಾರೆ (Ramesh Bandisiddegowda against HDK) ಎಂದು ವ್ಯಂಗ್ಯವಾಡಿದ್ದಾರೆ.

ಇನ್ನು ಈ ಬಾರಿಯ ಲೋಕಸಭಾ ಚುನಾವಣೆ ಅಭಿವೃದ್ದಿ ವರ್ಸಸ್ ಕಣ್ಣೀರಿಡುವ ಜನರ ನಡುವಿನ ಚುನಾವಣೆ ಆಗಿದೆ. ನನಗೆ ಆ ಆರೋಗ್ಯ ತೊಂದರೆ ಇದೆ, ಈ ಆರೋಗ್ಯ ತೊಂದರೆ ಇದೆ ಎಂದರೆ ಮತದಾರರಾದ

ನೀವು ಕೇಳಬೇಡಿ. ನೀವು ಅಧಿಕಾರದಲ್ಲಿ ಇದ್ದಾಗ ಏನ್ ಮಾಡಿದ್ರಿ ಎಂದು ನೇರವಾಗಿ ಅವರನ್ನು ಪ್ರಶ್ನೆ ಮಾಡಿ. ಈ ಬಾರಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಅತಿ ಹೆಚ್ಚು ಮತ ಕೊಟ್ಟು ಗೆಲ್ಲಿಸಿ

ಎಂದು ಜನರಲ್ಲಿ ಮನವಿ ಮಾಡಿದ್ದಾರೆ.

ಕಾಂಗ್ರೆಸ್ ಶಾಸಕ ರಮೇಶ್ ಬಂಡೀಸಿದ್ದೇಗೌಡ ನೀಡಿರುವ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಜೆಡಿಎಸ್ (JDS) ನಾಯಕರು, ಈ ಹಿಂದೆ ರಮೇಶ್ ಬಂಡೀಸಿದ್ದೇಗೌಡ ಗೆಲುವಿಗಾಗಿ ಕುಮಾರಣ್ಣ ರಾತ್ರಿ-ಹಗಲು

ಎನ್ನದೇ ಪ್ರಚಾರ ನಡೆಸಿದ್ದು, ಅವರ ಗೆಲುವಿಗಾಗಿ ಶ್ರಮಿಸಿದ್ದು ಮರೆತು ಹೋಗಿದೆ ಎಂದು ತಿರುಗೇಟು ನೀಡಿದ್ದಾರೆ.

ಇದನ್ನು ಓದಿ: ಹಿಂದೂಗಳ ಹೆಸರಿನಲ್ಲಿ ನಕಲಿ ಐಡಿ ಕಾರ್ಡ್: ರಾಮೇಶ್ವರಂ ಕೆಫೆ ಸ್ಪೋಟದ ಉಗ್ರರ ಭಯಾನಕ ಪ್ಲ್ಯಾನ್

Exit mobile version